ಜೈಲಿನಿಂದ ಬಿಡುಗಡೆಗೆ ಸಹಕರಿಸದ್ದಕ್ಕೆ ಸ್ನೇಹಿತನ್ನೇ ಕೊಂದ ಆರೋಪಿಗಳು

ಜಬಲ್ಪುರ, ಮೇ 25- ಅಪರಾಧ ಪ್ರಕರಣದಲ್ಲಿ ಜಾಮೀನು ನೀಡದಿದ್ದಕ್ಕಾಗಿ ಮಧ್ಯಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಸ್ನೇಹಿತನನ್ನು ಕೊಂದಿರುವ ಘಟನೆ ನಡೆದಿದೆ. ಕೊಲೆ ಆರೋಪಿಗಳಾದ ಸಿದ್ಧಾರ್ಥ್ ಶ್ರೀವಾಸ್ತವ ಮತ್ತು ಗೌರವ್ ಅವರನ್ನು ನಗರ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಮಿಶ್ರಾ ತಿಳಿಸಿದ್ದಾರೆ.

ಮೇ 16 ರಂದು ಶ್ರೀನಾಥ್ ಕಿ ತಲೈಯಾ ಪ್ರದೇಶದ ಮನೆಯಲ್ಲಿ ಜೈದೀಪ್ ರಾಥೋಡ್ (42) ಶವವಾಗಿ ಪತ್ತೆಯಾಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ಅವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಕೊಲೆ ಪ್ರಕರಣ ದಾಖಲಿಸಿದ ಲಾರ್ಡ್‍ಗಂಜ್ ಠಾಣೆಯ ಪೊಲೀಸರು ತನಿಖೆ ನಡೆಸಿದ್ದರು.

ರಾಥೋಡ್ ತನ್ನ ಸ್ನೇಹಿತರಾದ ಸಿದ್ಧಾರ್ಥ್ ಶ್ರೀವಾಸ್ತವ ಮತ್ತು ಅಜಯ್ ವಿಶ್ವಕರ್ಮ ಅವರೊಂದಿಗೆ ಸೇರಿ ನೆರೆಯ ಕಟ್ನಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಟ್ನಿ ನ್ಯಾಯಾಲಯವು ಮೂವರನ್ನು ತಪ್ಪಿತಸ್ಥರೆಂದು ಘೋಷಿಸಿತು ಮತ್ತು ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಒಂದು ವರ್ಷದ ನಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾದ ರಾಥೋಡ್, ಶೀಘ್ರದಲ್ಲೇ ಉಳಿದವರ ಬಿಡುಗಡೆಗೆ ಪ್ರಯತ್ನ ಮಾಡುವುದಾಗಿ ತನ್ನ ಸ್ನೇಹಿತರಿಗೆ ಭರವಸೆ ನೀಡಿದ್ದ ಎನ್ನಲಾಗಿದೆ.

ವಿಶ್ವಕರ್ಮ ಒಂದೂವರೆ ವರ್ಷಗಳ ನಂತರ ಜಾಮೀನು ಪಡೆದರೆ, ಶ್ರಿವಾಸ್ತವ್ ಏಪ್ರಿಲ್ 2017 ರಿಂದ ಕಳೆದ ವರ್ಷ ಅಕ್ಟೋಬರ್ ವರೆಗೆ ಜೈಲಿನಲ್ಲಿದ್ದರು. ತಮ್ಮ ಬಿಡುಗಡೆ ರಾಥೋಡ್ ಅವರ ಅಸಹಕಾರದಿಂದ ವಿಳಂಬವಾಗಿದೆ ಎ.ದಿ ಶ್ರೀವಾಸ್ತವ್ ಸಿಟ್ಟಾಗಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವಾರ ಶ್ರೀವಾಸ್ತವ್ ಮತ್ತೊಬ್ಬ ಸ್ನೇಹಿತ ಗೌರವ್ ಜೊತೆ ರಾಥೋಡ್ ಮನೆಗೆ ಹೋಗಿದ್ದು, ಅಲ್ಲಿ ಇಬ್ಬರ ನಡುವೆ ಜಗಳವಾಗಿದೆ, ಇಬ್ಬರು ಆರೋಪಿಗಳು ಹರಿತವಾದ ಆಯುಧದಿಂದ ರಾಥೋಡ್‍ನನ್ನು ಕೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಬಂಧಿಸಬೇಕು: ಡಿ.ಕೆ. ಶಿವಕುಮಾರ್​!

Wed May 25 , 2022
ಬೆಂಗಳೂರು: ಬಿಜೆಪಿ ಹಾಗೂ ಕೆಲವು ಸಂಘಟನೆಗಳ ವೈಯಕ್ತಿಕ ನಂಬಿಕೆಗಳನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದರೆ ಅವು ಅದನ್ನು ಬೇರೆಯವರ ಮೇಲೆ ಹೇರಬಾರದು. ಸಾರ್ವಜನಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾರದು. ಅದು ತಪ್ಪು’ ‘ಬಿಜೆಪಿ ಸರ್ಕಾರ ಈ ರಾಜ್ಯವನ್ನು ಕೊಲ್ಲುತ್ತಿದೆ. ಬಿಜೆಪಿಯವರು ತಮ್ಮ ನಂಬಿಕೆ, ಸ್ವಂತ ವಿಚಾರದಲ್ಲಿ ಏನಾದರೂ ಮಾಡಿಕೊಳ್ಳಲಿ. ಅವರ ವೈಯಕ್ತಿಕ ನಂಬಿಕೆ, ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. […]

Advertisement

Wordpress Social Share Plugin powered by Ultimatelysocial