POLITICS:ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ;

 ಹಳಿಯಾಳದಿಂದ ರಾಷ್ಟ್ರದ ರಾಜಧಾನಿಯವರೆಗೆ ತನ್ನ ಹಿಡಿತ ಸಾಧಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆಯವರಿಗೆ ಮುಂಬರಲಿರುವ ವಿಧಾನ ಸಭಾ ಚುನಾವಣೆ ಜೀವನದ ಕಟ್ಟಕಡೆಯ ಚುನಾವಣೆ. ಆದಾಗ್ಯೂ ಮುಂಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆಯಾದರೂ ವಯಸ್ಸು ಅಡ್ಡ ಬಂದರೆ ಹೊಸಮುಖಕ್ಕೆ ಅವಕಾಶ ದೊರೆಯಬಹುದು.

ಸಾಮಾನ್ಯ ತಾಲೂಕಿನಲ್ಲಿ ಹುಟ್ಟಿ, ರಾಜಕೀಯವಾಗಿ ಹಂತ ಹಂತವಾಗಿ ಬೆಳೆದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನ ವರ್ಚಸ್ವಿ ಗುಣಗಳಿಂದಲೆ ಗುರುತಿಸಿಕೊಂಡ ಮುತ್ಸದಿ ಜನನಾಯಕ. ಅತೀ ಹೆಚ್ಚು ಬಾರಿ ಸಚಿವರಾಗಿದ್ದ ಹೆಗ್ಗಳಿಕೆಗೆ ಪಾತ್ರರಾದವರು. ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸಿಗೆ ಅನಭಿಷಿಕ್ತ ದೊರೆ ಎಂದರೆ ತಪ್ಪಾಗಲಾರದು. ರಾಜ್ಯ ವಿಧಾನ ಸಭೆಯಲ್ಲಿ ಯಡಿಯೂರಪ್ಪನವರಂತೆ ಹಿರಿಯ ಸದಸ್ಯರು ಹೌದು. ವಿಧಾನ ಸಭೆಗೆ 9 ಬಾರಿ ಸ್ಪರ್ಧಿಸಿ, 8 ಬಾರಿ ಗೆದ್ದವರು.

ಇಡೀ ರಾಜ್ಯದಲ್ಲೆ ಅತೀ ಹೆಚ್ಚು ಪ್ರಮಾಣದಲ್ಲಿ ಸಿ.ಎಸ್.ಆರ್ ಯೋಜನೆಯಡಿ ಅನುದಾನ ಬಂದಿದೆ ಎಂದಾದರೆ ಅದು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರಕ್ಕೆ ಎನ್ನುವುದನ್ನು ವಿರೋಧ ಪಕ್ಷದವರೂ ಒಪ್ಪಿಕೊಳ್ಳಲೆಬೇಕು.

ಹಳಿಯಾಳದಂತಹ ಪುಟ್ಟ ಪಟ್ಟಣದಿಂದ ದಿಲ್ಲಿಯವರೆಗೆ ಬೆಳೆದಿರುವ ದೇಶಪಾಂಡೆಯವರು ಎಲ್ಲ ಧರ್ಮಿಯರ ಜೊತೆ ಸಮನ್ವಯತೆಯಲ್ಲಿದ್ದರೂ, ಅವರ ಇಷ್ಟೆಲ್ಲ ರಾಜಕೀಯ ಬೆಳವಣಿಗೆಗೆ ಪ್ರಮುಖ ಕಾರಣೀಕರ್ತರಾದ ಮರಾಠಾ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಋಣ ಬಹಳಷ್ಟಿದೆ. ಇಷ್ಟು ವರ್ಷಗಳ ರಾಜಕೀಯ ಬೆಳವಣಿಗೆಗೆ ಕಾರಣೀಕರ್ತರಾದ ಮರಾಠಾ ಸಮುದಾಯಕ್ಕೆ ಮತ್ತು ಮುಸ್ಲಿಂ ಸಮುದಾಯಕ್ಕೆ ರಾಜಕೀಯವಾಗಿ ಮಹತ್ವದ ಋಣ ತೀರಿಸಲು ಇದೀಗ ಸುವರ್ಣಕಾಲ ಎಂದೆ ವಿಶ್ಲೇಷಿಸಲಾಗುತ್ತಿದೆ.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ವಯಸ್ಸು ಅಡ್ಡಿಯಾಯಿತೆಂದರೇ, ಮಗ ಪ್ರಶಾಂತ್ ದೇಶ ಪಾಂಡೆ ಅವರನ್ನು ಯಲ್ಲಾಪುರ ಕ್ಷೇತ್ರದಲ್ಲಿ ಕಣಕ್ಕಿಳಿಸಿ, ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ತನ್ನ ಪರವಾಗಿ ಮರಾಠಾ ಸಮಾಜ ಇಲ್ಲವೆ ಮುಸ್ಲಿಂ ಸಮುದಾಯಕ್ಕೆ ಸ್ಪರ್ಧಿಸಲು ಅವಕಾಶ ನೀಡುವುದರ ಮೂಲಕ ತನ್ನ ರಾಜಕೀಯ ಅಭ್ಯುದಯಕ್ಕೆ ನೀಡಿದ ಕೊಡುಗೆಯ ಋಣವನ್ನು ತೀರಿಸಲು ದೇಶಪಾಂಡೆಯವರು ಮುಂದಾದರೂ ಅಚ್ಚರಿ ಪಡಬೇಕಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

 CRICKET:ಅತೀ ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್​ಗಳ ಪಟ್ಟಿಯಲ್ಲೂ ಡಿಕಾಕ್;

Sun Jan 23 , 2022
 ಅತೀ ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್​ಗಳ ಪಟ್ಟಿಯಲ್ಲೂ ಡಿಕಾಕ್ ಆಸ್ಟ್ರೇಲಿಯಾದ ಆಯಡಂ ಗಿಲ್​ಕ್ರಿಸ್ಟ್ ಅವರನ್ನು ಹಿಂದಿಕ್ಕಿದರು. ಭಾನುವಾರ ನಡೆದ ಭಾರತ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್​ ಕ್ವಿಂಟನ್ ಡಿ ಕಾಕ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಡಿಕಾಕ್ 124 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. 108 ಎಸೆತಗಳಲ್ಲಿ ಶತಕ ಪೂರೈಸಿದ ಡಿಕಾಕ್ ತಮ್ಮ ಹಲವು ದಾಖಲೆಗಳನ್ನು ಬರೆದಿದ್ದಾರೆ. […]

Advertisement

Wordpress Social Share Plugin powered by Ultimatelysocial