ಅಂಬಾನಿ, ಅದಾನಿಗಿಂತಲೂ ನನ್ನ ಸಮಯದ ಮೌಲ್ಯ ಹೆಚ್ಚು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.

 

ಪಣಜಿ, ಗೋವಾನನ್ನ ಸಮಯದ ಮೌಲ್ಯವು, ಶ್ರೀಮಂತ ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ, ಆದಿತ್ಯ ಬಿರ್ಲಾ ಅವರಿಗಿಂತಲೂ ಹೆಚ್ಚು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.

ಅಲ್ಲದೇ, ಸಾಧು ಸಂತರ ಸಮಯದ ಮೌಲ್ಯವು ಎಲ್ಲರಿಗೆ ಒಳ್ಳೆಯದನ್ನು ಉಂಟು ಮಾಡುತ್ತದೆ ಎಂದೂ ಹೇಳಿದ್ದಾರೆ. ಗೋವಾದಲ್ಲಿರುವ (Baba Ramdev in Goa) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿರುವ ಅನೇಕ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ.

ಹರಿದ್ವಾರದಿಂದ ನಾನು ಇಲ್ಲಿಗೆ(ಗೋವಾ) ಮೂರು ದಿನಗಳಿಗಾಗಿ ಬಂದಿದ್ದೇನೆ. ನನ್ನ ಸಮಯದ ಮೌಲ್ಯವು ಅದಾನಿ, ಅಂಬಾನಿ, ಟಾಟಾ ಮತ್ತು ಬಿರ್ಲಾ ಅವರಿಗಿಂತಲೂ ಹೆಚ್ಚು. ಕಾರ್ಪೊರೇಟ್ ಕಂಪನಿಗಳು ತಮ್ಮ ಸಮಯದ ಪೈಕಿ ಶೇ.99ರಷ್ಟು ಸಮಯವನ್ನು ಸ್ವಹಿತಾಸಕ್ತಿಗಾಗಿ ವ್ಯಯಿಸುತ್ತವೆ. ಶ್ರೀಗಳು ಅದೇ ಸಮಯವನ್ನು ಸಂಪೂರ್ಣವಾಗಿ ಜನರ ಒಳತಿಗಾಗಿ ವ್ಯಯಿಸುತ್ತಾರೆ ಎಂದು ಹೇಳಿದರು.

ಪಣಜಿಯಲ್ಲಿ ಅಚಾರ್ಯ ಬಾಲಕೃಷ್ಣ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಸಚಿವ ಶ್ರೀಪಾದ ನಾಯಿಕ್ ಅವರೂ ಇದ್ದರು.

ಆರ್ಥಿಕವಾಗಿ ಅನಾರೋಗ್ಯಪೀಡಿತವಾಗಿದ್ದ ಪತಂಜಲಿ ಕಂಪನಿಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ 40 ಸಾವಿರ ಕೋಟಿ ರೂ. ಮೌಲ್ಯದ ಕಂಪನಿಯನ್ನಾಗಿ ರೂಪಿಸುವಲ್ಲಿ ಆಚಾರ್ಯ ಬಾಲಕೃಷ್ಣ ಅವರ ಪ್ರಮುಖಪಾತ್ರವಿದೆ. ಬಾಲಕೃಷ್ಣ ಅವರ ವೃತ್ತಿಪರತೆ ಆಡಳಿತ, ಪಾರದರ್ಶಕ ನಿರ್ವಹಣೆ ಮತ್ತು ಹೊಣೆಗಾರಿಕೆಯು ಶ್ಲಾಘನಾರ್ಹವಾಗಿದೆ ಎಂದು ಅವರು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿ. ಆರ್. ನಾಗರಾಜ್ ಕನ್ನಡದ ಮಹತ್ವದ ವಿದ್ವಾಂಸರು.

Mon Feb 20 , 2023
ದೊಡ್ಡಬಳ್ಳಾಪುರ ರಾಮಯ್ಯ ನಾಗರಾಜ್ 1954ರ ಫೆಬ್ರವರಿ 20ರಂದು ದೊಡ್ಡಬಳ್ಳಾಪುರದಲ್ಲಿ ಜನಿಸಿದರು. ತಂದೆ ರಾಮಯ್ಯ. ತಾಯಿ ಅಕ್ಕಯ್ಯಮ್ಮ. ನಾಗರಾಜ್ ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಆನರ್ಸ್ ಪದವಿಯನ್ನು ಅಲ್ಲಿಯೇ ಪಡೆದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪ್ರಾಪ್ತವಾಯಿತು. ಸ್ವಲ್ಪ ಕಾಲ ಸಂಶೋಧಕ ವೃತ್ತಿಯಲ್ಲಿದ್ದು ಅವರು ಅಲ್ಲಿಯೇ ಕನ್ನಡ ಅಧ್ಯಾಪಕರಾದರು; ಪ್ರವಾಚಕರಾದರು, ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಆದರು.ವಿದಾರ್ಥಿ ಜೀವನದಿಂದಲೂ […]

Advertisement

Wordpress Social Share Plugin powered by Ultimatelysocial