ಅಕ್ಟೋಬರ್ 19 ರಂದು ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ತೆರೆಗೆ..!

 

ವಿದೇಶದಲ್ಲೂ “ಬಿಗ್ ಡ್ಯಾಡಿ” ಹವಾ ಜೋರು

ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ‌‌‌. ಅಕ್ಟೋಬರ್ 19 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ‌. “ಘೋಸ್ಟ್” ಚಿತ್ರ ವಿದೇಶದಲ್ಲೂ ರಿಲೀಸ್ ಆಗಲಿದೆ.

ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ” Big daddy” ಟೀಸರ್ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ.

“ಘೋಸ್ಟ್” ಚಿತ್ರವನ್ನು ನೋಡಲು ಬರೀ ಭಾರತೀಯರಷ್ಟೇ ಅಲ್ಲ. ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ.  ಲಂಡನ್ ನಿಂದ  ಅಭಿಮಾನಿಗಳು ತಾವು ಈ ಚಿತ್ರದ ಬಿಡುಗಡೆಗೆ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡು, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.

ಶಿವರಾಜಕುಮಾರ್, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು “ಘೋಸ್ಟ್”  ಚಿತ್ರದ ತಾರಾಬಳಗದಲ್ಲಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಚಿನ್ನದ ಅಂಗಡಿ ಮಾಲೀಕರೇ ಇವರ ಬಗ್ಗೆ ಎಚ್ಚರವಿರಲಿ..!

Sun Sep 3 , 2023
ಚಿನ್ನದ ಅಂಗಡಿ ಮಾಲೀಕರೇ ಎಚ್ಚರ! ಈ ಖತರ್ನಾಕ್​​​ ಲೇಡಿಗಳ ಕಥೆ ಓದಿದ್ರೆ ಬೆಚ್ಚಿಬೀಳ್ತೀರಾ ಕೆದರಿರೋ ಕೂದಲು.. ಬಾಡಿರೋ ಮುಖ.. ಅಮಾಯಕಳಂತೆ ನಿಂತಿರೋ ಈಕೆ ಹೆಸರು ರತ್ನ ವೇಡಿವೇಲು.. ತನ್ನದ್ದೇನು ತಪ್ಪೇ ಇಲ್ಲದಂತೆ ನಗ್ತಾ ಫೋಟೋಗೆ ಫೋಸ್​​ ಕೊಟ್ಟಿರೋ ಈಕೆ ಹೆಸ್ರು ಕೃಷ್ಣವೇಣಿ. ​​ಇವರಿಬ್ಬರು ಮೂಲತಃ ತಮಿಳುನಾಡಿನ ನಿವಾಸಿಗಳು.. ಹಲವು ಠಾಣೆಗೆ ಬೇಕಾಗಿರೋ ಖತರ್ನಾಕ್​​ ಲೇಡಿಗಳು.. ಬರೋಬ್ಬರಿ 10 ವರ್ಷದ ನಂತರ ಸಾಕ್ಷಿ ಸಮೇತ ಪೊಲೀಸರ ಕೈಯಲ್ಲಿ ಲಾಕ್​ ಆಗ್ಬಿಟ್ಟಿದ್ದಾರೆ. ಹೌದು… […]

Advertisement

Wordpress Social Share Plugin powered by Ultimatelysocial