ಅತ್ಯಂತ ವೇಗದ ಪ್ರಯಾಣ ವ್ಯವಸ್ಥೆಯಾದ “ಹೈಪರ್‌ ಲೂಪ್‌”..!

ಅತ್ಯಂತ ವೇಗದ ಪ್ರಯಾಣ ವ್ಯವಸ್ಥೆಯಾದ “ಹೈಪರ್‌ ಲೂಪ್‌’ ಯುಎಇ ಗಿಂತಲೂ ಮೊದಲು ಭಾರತ ಅಥವಾ ಸೌದಿ ಅರೇಬಿಯಾದಲ್ಲಿ ಬಳಕೆಗೆ ಬರುವ ಸಾಧ್ಯತೆ ಹೆಚ್ಚಿದೆ. ಹೀಗೆಂದು ಹೈಪರ್‌  ಲೂಪ್‌ ನಿರ್ಮಾಣದಲ್ಲಿ ತೊಡಗಿರುವ ಡಿಪಿ ವರ್ಲ್ಡ್ ಕಂಪನಿಯ ಮುಖ್ಯಸ್ಥರಾದ ಸುಲ್ತಾನ್‌ ಅಹ್ಮದ್‌ ಬಿನ್‌ ಸುಲಾಯೇಂ ಹೇಳಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ  ದುಬೈ ಎಕ್ಸ್‌ಪೋ 2020 ರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈಪರ್‌ ಲೂಪ್‌ ಬರಲು ದಶಕಗಳೇನೂ ಬೇಕಾಗಿಲ್ಲ. ಈ ದಶಕದ ಅಂತ್ಯದೊಳಗೆ ವಿಶ್ವದ ಹಲವು ಭಾಗಗಳಲ್ಲಿ ಇದು ಬಳಕೆಯಲ್ಲಿರಲಿದೆ. ಸೌದಿ ಅರೇಬಿಯಾ ಅಥವಾ ಭಾರತ ಮೊದಲ ಬಳಕೆದಾರರಾಗಲಿದ್ದಾರೆ. ಟ್ರಕ್‌ನಲ್ಲಿ ಚಲಿಸಲು ಬೇಕಾಗುವ ಖರ್ಚಿನಲ್ಲಿ ವಿಮಾನದ ವೇಗದಲ್ಲಿ ನಾಗರಿಕರು ಪ್ರಯಾಣಿಸಬಹುದು ಎಂದು ಅವರು ಹೇಳಿದ್ದಾರೆ.ಸೀಲ್‌ ಆಗಿರುವ ಟ್ಯೂಬ್‌ ನಿರ್ಮಿಸಿ ಅದರಲ್ಲಿ ಗಾಳಿಯ ಒತ್ತಡವಿಲ್ಲದಂತೆ ಮಾಡಲಾಗುತ್ತದೆ. ಮನುಷ್ಯರನ್ನು ಹೊತ್ತ ಪಾಡ್‌ ಗಳು ಅದರಲ್ಲಿ ಅತ್ಯಂತ ವೇಗವಾಗಿ ಚಲಿಸಬಲ್ಲವು. ಇದರಲ್ಲಿ ಮನುಷ್ಯರ ಪ್ರಯಾಣ ಪರೀಕ್ಷೆಯನ್ನು ಡಿಪಿ ವರ್ಲ್ಡ್ ಸಂಸ್ಥೆ ಕಳೆದ ನವೆಂಬರ್‌  ನಲ್ಲೇ ಮಾಡಿದೆ. ಅ.1ರಂದು ಆರಂಭವಾಗಿರುವ ದುಬೈ ಎಕ್ಸ್‌ಪೋ ಒಟ್ಟು ಆರು ತಿಂಗಳ ಕಾಲ ನಡೆಯಲಿದೆ. ಈ ಎಕ್ಸ್‌ಪೋನಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಯವರಿಗೂ ಆಮಂತ್ರಣ ಕಳುಹಿಸಲಾಗಿದೆ. ಮೋದಿಯವರು ಆಮಂತ್ರಣ ಸ್ವೀಕರಿಸಿ, ದುಬೈಗೆ ತೆರಳಿ, ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬಿಗ್‌ ಬಜೆಟ್‌ ಮೂವಿ ಮುಂಚೆ ಸೌಂಡ್ ಮಾಡಲು ಬರುತ್ತಿದೆ ನಿನ್ನ ಸನಿಹಕೆ..!

Mon Oct 4 , 2021
  ‌ ಮುಂಬರುವ ಕನ್ನಡ ಚಿತ್ರ ನಿನ್ನ ಸನಿಹಕೆ ಅಕ್ಟೋಬರ್ 8 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವು ನಟ ಸೂರಜ್ ಗೌಡರ ಚೊಚ್ಚಲ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಕಾಣಿಸಿಕೊಂಡ ಚಿತ್ರವಾಗಿದೆ. ಮತ್ತು ಈ ಸಿನಿಮಾದಲ್ಲಿ ರಾಜಕುಮಾರ ಪ್ಯಾಮಿಲಿಯ ಸುಂದರ ಹುಡುಗಿ ನಾಯಕಿಯಾಗಿ ನಟನೆ ಮಾಡಿದ್ದಾರೆ. ಅಕ್ಟೋಬರ್ 7 ರಂದು ಬೆಂಗಳೂರಿನ ಖ್ಯಾತ ಮಾಲ್‌ವೊಂದರಲ್ಲಿ ‘ನಿನ್ನ ಸನಿಹಕೆ‘ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಈ ವಿಶೇಷ ಪ್ರದರ್ಶನದಲ್ಲಿ ಶಿವರಾಜ್ ಕುಮಾರ್, […]

Advertisement

Wordpress Social Share Plugin powered by Ultimatelysocial