ಆಸೆಪಟ್ಟು ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ದುರಂತ ಅಂತ್ಯ

ಡುಕ್ಕಿ: ಪರೋಟ ತಿಂದ ಬಳಿಕ ಫುಡ್​ ಅಲರ್ಜಿಯಿಂದಾಗಿ ಪಿಯು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡಪುಳದಲ್ಲಿ ನಡೆದಿದೆ.

ನಯನಮರಿಯಾ (16) ಮೃತ ವಿದ್ಯಾರ್ಥಿನಿ. ಈಕೆ ತೋಡಪುಳ ಸಮೀಪದ ವಾಜತೊಪ್ಪುವಿನ ನಿವಾಸಿ.

ಪರೋಟ ತಿಂದ ಬಳಿಕ ಉಂಟಾದ ಅಲರ್ಜಿಗೆ ಇಡುಕ್ಕಿ ಮೆಡಿಕಲ್​ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ವಾಜತೊಪ್ಪುವಿನ ಸೆಂಟ್​ ಜಾರ್ಜ್​ ಹೈಯರ್​ ಸೆಕೆಂಡರಿ ಸ್ಕೂಲ್​ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು.

ಮೈದಾ ಮತ್ತು ಗೋಧಿಯಿಂದ ಮಾಡಿದ ಆಹಾರಗಳನ್ನು ಸೇವಿಸಿದಾಗಲೆಲ್ಲ ನಯನಾಗೆ ಅಲರ್ಜಿ ಬರುತ್ತಿತ್ತಂತೆ. ಆದಾಗ್ಯೂ, ತುಂಬಾ ದಿನಗಳ ಬಳಿಕ ಇತ್ತೀಚೆಗಷ್ಟೇ ಮತ್ತೆ ಮೈದಾ ಅಥವಾ ಗೋಧಿಯಿಂದ ಮಾಡಿದ ಆಹಾರವನ್ನು ಸೇವಿಸಿದ್ದಳು ಮತ್ತು ಆಕೆಗೆ ಏನೂ ಆಗಿರಲಿಲ್ಲ.

ಏನೂ ಆಗಲಿಲ್ಲ ಎಂಬ ನಂಬಿಕೆಯಿಂದಲೇ ಇತ್ತೀಚೆಗೆ ನಯನಾ ಮೈದಾದಿಂದ ಮಾಡಿ ಪರೋಟವನ್ನು ತಿಂದಿದ್ದಳು. ಬಳಿಕ ಅನಾರೋಗ್ಯದಿಂದ ಬಳಲಿದ ನಯನಾಳನ್ನು ಇಡುಕ್ಕಿ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಯಿತು. ವೆಂಟಿಲೇಟರ್​ನಲ್ಲಿ ಇಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ (ಫೆ. 10) ಮಧ್ಯಾಹ್ನ ಕೊನೆಯುಸಿರೆಳೆದಿದ್ದಾಳೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಡಿತ ದೀನದಯಾಳ ಉಪಾಧ್ಯಾಯರು ವಿದ್ವಾಂಸರು.

Sat Feb 11 , 2023
  ಪಂಡಿತ ದೀನದಯಾಳ ಉಪಾಧ್ಯಾಯರು 1916ರ ಸೆಪ್ಟೆಂಬರ್ 25ರಂದು ಮಥುರಾ ಜಿಲ್ಲೆಯ ನಾಗ್ಲಾ ಚಂದ್ರಬಾನ್ ಎಂಬ ಹಳ್ಳಿಯಲ್ಲಿ ಜನಿಸಿದರು. ಮೂರು ವರ್ಷದವರಾಗಿದ್ದಾಗ ತಮ್ಮ ತಂದೆಯನ್ನೂ ಎಂಟನೆಯ ವಯಸ್ಸಿನಲ್ಲಿ ತಾಯಿಯನ್ನೂ, ಹತ್ತನೆಯ ವಯಸ್ಸಿನಲ್ಲಿ ತಾತನನ್ನೂ ಕಳೆದುಕೊಂಡ ದೀನ ದಯಾಳರು ತಮ್ಮ ಸೋದರ ಮಾವನ ಮನೆಯಲ್ಲಿ ಬದುಕು ಸಾಗಿಸಿದರು. ಸೋದರ ಮಾವನ ಪತ್ನಿ ದೀನ ದಯಾಳರಿಗೂ ಮತ್ತು ಅವರ ಕಿರು ಸಹೋದರನಿಗೂ ತನ್ನ ಮಕ್ಕಳಂತೆಯೇ ಮಾತೃ ವಾತ್ಸಲ್ಯ ನೀಡಿದರು. ಮುಂದಿನ ಕೆಲವು ವರ್ಷಗಳಲ್ಲೇ […]

Advertisement

Wordpress Social Share Plugin powered by Ultimatelysocial