ಉದಾಸಿ ಕುಟುಂಬಕ್ಕೆ ಕೈ ತಪ್ಪಿದ  ಚುನಾವಣಾ ಟಿಕೆಟ್‌;“ಮೂರು ಪಕ್ಷಗಳಿಗೆ ಅಗ್ನಿ ಪರೀಕ್ಷೆ”..!

ಸಿಂಧಗಿ ಮತ್ತು ಹಾನಗಲ್‌ ಉಪಚುನಾವಣೆಯ ದಿನಾಂಕವೂ ಪ್ರಕಟವಾಗಿದೆ .ಯಾವ ಯಾವ ಪಕ್ಷದಿಂದ ಯಾವ ಅಭ್ಯಾರ್ಥಿ ಸ್ಪರ್ಧಿಸಲಿದ್ದಾರೆ ಎಂಬುದು ಕೂಡ ಈಗಾಗಲೇ ಫೈನಲ್‌ ಆಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌  ತಮ್ಮ ಅಭ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ರೆ ಬಿಜೆಪಿ ,ಮಾತ್ರ ತಮ್ಮ ಅಭ್ಯಾರ್ಥಿಗಳ ಪಟ್ಟಿಯನ್ನು ನಿಗೂಢವಾಗಿ ಇಟ್ಟಿತ್ತು ಆದರೆ ಬಿಜೆಪಿ ಕೂಡ ಈಗಾಗಲೇ ಹಾನಗಲ್‌ ಸಿಂಧಗಿ ಉಪ ಚುನಾವಣೆಯ ಅಭ್ಯಾರ್ಥಿಗಳನ್ನು ಘೋಷಣೆ ಮಾಡಿದೆ .

ಕಾಂಗ್ರೆಸ್‌ ನಲ್ಲಿ ಈಗಾಗಲೇ  ಶ್ರೀನಿವಾಸ ಮಾನೆ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಒಂದು ಕಡೆ ಜೆಡಿಎಸ್‌ ಕೂಡ ಈಗಾಗಲೇ ತನ್ನ ಅಭ್ಯಾರ್ಥಿಯನ್ನು ಘೊಷಣೆ ಮಾಡಿದೆ.ನೂತನ ಸಿಎಂ ಬಸವರಾಜ್‌ ಬೊಮ್ಮಾಯಿ ಹಾವೇರಿ  ಜಿಲ್ಲೆಯವರೇ ಆಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ  ನಡೆ ಕುತೂಹಲ ಮೂಡಿಸಿದೆ..ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಚುನಾವಣಾ ಸಿದ್ಧತೆ ಮಾಡಿಕೊಳ್ಳುತ್ತಿದೆ..

ಸಚಿವರಾಗಿದ್ದಾಗ ಜನ ಪ್ರಿಯ ಗಳಿಸಿದ್ದ ಶಾಸಕ ಸಿ.ಎಂ ಉದಾಸಿ ಅವರ ನಿಧನದಿಂದಾಗಿ ತೆರವಾದ ಶಾಸಕ ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದ್ದು,ಕೋವಿಡ್‌  ಹಿನ್ನೆಲೆಯಲ್ಲಿ ಆಯೋಗ ಯಾವಾಗ ಚುನಾವಣೆ  ಘೊಷಣೆ  ಮಾಡಲಿದೆ ಎಂದು ಗೊಂದಲ ಶುರುವಾಗಿತ್ತು . ಆದರೆ ಈಗ ಚುನಾವಣೆಯನ್ನು ಘೋಷಣೆ ಮಾಡಿದ್ದು, ಇನ್ನು ಹಾನಗಲ್‌ ಕ್ಷೇತ್ರವು ಬಿಜೆಪಿ ಉದಾಸಿ ಅವರ ಭದ್ರಕೋಟೆಯಾಗಿತ್ತು.ಆದರೆ ಸಿ.ಎಂ  ಉದಾಸಿ ನಿಧನದ ನಂತರ ಬಿಜೆಪಿ ಅಭ್ಯಾರ್ಥಿ ಯಾರು ಎಂಬುದು ಎಲ್ಲರಲ್ಲೂ ಕೂತೂಹಲ ಮೂಡಿತ್ತು..

 ಸಿ.ಎಂ ಉದಾಸಿ ಅವರ ನಿಧನದ ಅನುಕಂಪದ ಹಿನ್ನೆಲೆಯಲ್ಲಿ ಅವರ ಕುಟುಂಬದವರಿಗೆ ಅವಕಾಶ ನೀಡಿ ಅನುಕಂಪದ ಅಲೆಯಲ್ಲಿ ಪ್ರಯೋಜನೆಯನ್ನು ಗಿಟ್ಟಿಸಿಕೊಳ್ಳಲು ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಫ್ಲಾನ್‌ ಮಾಡಿದ್ದರು. ಆದರೆ ಹೈಕಮಾಂಡ್‌ ಮಾತ್ರ ಉದಾಸಿ ಕುಟುಂಬಕ್ಕೆ ಟಿಕೆಟ್‌ ನೀಡಲು ಹಿಂದೇಟು ಹಾಕಿತ್ತು. ಅದಕ್ಕೆ ಈಗ ಬಿಜೆಪಿ ಅಭ್ಯರ್ಥಿಯಾಗಿ ಹಾನಗಲ್‌ ಮತ್ತು ಸಿಂದಗಿಯ ಅಭ್ಯಾರ್ಥಿಯಾಗಿ ಹಾನಗಲ್‌ ನ ನಿಂದ ಶಿವರಾಜ್‌ ಸಜ್ಜನ್‌ – ಸಿಂಧಗಿಯಿಂದ ರಮೇಶ್‌ ಭೂಸನೂರ್‌ ಅಭ್ಯಾರ್ಥಿಯನ್ನು ಕಣಕ್ಕಿಳಿಸಲು ಸಿದ್ಧವಾಗಿದೆ..

 ರಾಜ್ಯದ ಹಾನಗಲ್‌ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು  ಈಗಾಗಲೇ ಪ್ರಕಟಿಸಿದೆ. ಹಾನಗಲ್‌ ನಿಂದ  ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಸಿಂಧಗಿಯಿಂದ ಅಶೋಕ್ ಮನಗೊಳಿ ಅವರಿಗೆ  ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದೆ…ಇವರು ಸಿಂಧಗಿ ಕ್ಷೇತ್ರದ ಜೆಡಿಎಸ್‌ ಶಾಸಕರಾಗಿದ್ದ ಎಂ ಸಿ ಮನಗೊಳಿ ಅವರ ಪುತ್ರ ಅಶೋಕ್‌ ಮನಗೊಳಿ ಇತ್ತೀಚಿಗಷ್ಟೇ  ಜೆಡಿಸ್‌ ತೊರೆದು ಕಾಂಗ್ರೆಸ್‌ ಗೆ ಸೇರ್ಪಡೆಯಾಗಿದ್ದರು.ಇನ್ನು ಕಾಂಗ್ರೆಸ್‌ ನಲ್ಲಿ ಅವರಿಗೇ ಟಿಕೆಟ್‌ ಎಂದು ಮೌಖಿಕವಾಗಿ ಹೇಳಿಕೆ ನೀಡಲಾಗಿತ್ತು .ಆದರೆ ಈಗ ಅಧಿಕೃತವಾಗಿಯೇ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದಾರೆ.

ಬಿಜೆಪಿ ಮತ್ತು ,ಕಾಂಗ್ರೆಸ್‌ ಈ ಮೂರು ಪಕ್ಷಗಳು ಈಗಾಗಲೇ ತಮ್ಮ ತಮ್ಮ ಅಭ್ಯಾರ್ಥಿಗಳನ್ನು ಘೋಷಣೆ ಮಾಡಿದೆ.ಇತ್ತ ಜೆಡಿಸ್‌ ಕೂಡ ಸಿಂಧಗಿ ಮತ್ತು ಹಾನಗಲ್‌  ಕ್ಷೇತ್ರದ ಅಭ್ಯಾರ್ಥಿಗಳನ್ನು ಘೊಷಣೆ ಮಾಡಿದೆ…ಈಗಾಗಲೇ ಹಾನಗಲ್‌ ಕ್ಷೇತ್ರದಲ್ಲಿ ನಯಾಜ್‌ ಅವರನ್ನು ಹಾನಗಲ್‌ ಅಭ್ಯಾರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ.. ಇನ್ನು ಸಭೆಯೊಂದರಲ್ಲಿ ಮುಂದಿನ 2023 ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ 30-35 ಸೀಟುಗಳನ್ನು ನೀಡುವುದಾಗಿ ಹೆಚ್‌ ಡಿ ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ರೂ.ಇದೀಗ ತಮ್ಮ ಮಾತಿನಂತೆ ಸಿಂದಗಿ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯಾಗಿ ಶ್ರೀಮತಿ ನಜಿಯಾ ಶಕೀಲಾ ಅಂಗಡಿ ರವರನ್ನು ಘೋಷಣೆ ಮಾಡಿದ್ದಾರೆ…

ಒಟ್ಟಾರೆಯಾಗಿ ಈ ಮೂರು ಪಕ್ಷಗಳು ಸಿಂಧಗಿ ಮತ್ತು ಹಾನಗಲ್‌ ಉಪ ಚುನಾವಣೆಯ ಅಭ್ಯಾರ್ಥಿಗಳನ್ನು ಘೋಷಣೆ ಮಾಡಿದ್ದಾರೆ.ಇನ್ನು ಅಕ್ಟೋಬರ್‌ 30ರಂದು ಚುನಾವಣೆಯಲ್ಲಿ ಮೂರು ಪಕ್ಷಗಳು ಜಿದ್ದಾ ಜಿದ್ದಿಗೆ ಬೀಳುವ ಸಾಧ್ಯತೆಗಳು ತುಂಬಾ ಇದ್ದು, ಇನ್ನು ಯಾರೇರಲಿದ್ದಾರೆ ಸಿಂಧಗಿ ಮತ್ತು ಹಾನಗಲ್‌ ನ ಅಧಿಪತಿ ಎಂದು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *

Next Post

ತೂಕ ಹೆಚ್ಚಿಸಿ ಇಳಿಸಿಕೊಂಡ ಪ್ರಿಯಾಂಕ...!

Thu Oct 7 , 2021
ನಟಿ ಪ್ರಿಯಾಂಕ ತಿಮ್ಮೇಶ್ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ ಹೊಸ ಚಿತ್ರಕ್ಕಾಗಿ ತಮ್ಮ ತೂಕ ಹೆಚ್ಚಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟರು ಸಾಕಷ್ಟು ಸುದ್ದಿಯಾದ ನಟಿ ಪ್ರಿಯಾಂಕಾ ತಿಮ್ಮೆಶ್. ಹೊರಗೆ ಬರುತ್ತಿದ್ದಂತೆ ಹೊಸ ಸಿನಿಮಾಗೆ ಬಂದ ಆಫರ್ ಒಪ್ಪಿಕೊಂಡು ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಈ ಚಿತ್ರಕ್ಕಾಗಿ ತುಸು ಜಾಸ್ತಿಯೇ ಆದ ಪ್ರಿಯಾಂಕ ಈಗ ಮತ್ತೆ ಸಣ್ಣಗಾಗಿ ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. […]

Advertisement

Wordpress Social Share Plugin powered by Ultimatelysocial