ಐಸಿಎಂಆರ್ ಫಾಸ್ಟ್ ಟ್ರಾಕ್ ಟ್ರಯಲ್‌ಗೆ ಸಿದ್ಧ

ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್‌ಗೆ ಭಾರತದಲ್ಲೇ ಲಸಿಕೆ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ನೀಡಿದ ಭಾರತೀಯ ಔಷಧಿ ಸಂಶೋಧನಾ ಮಂಡಳಿ ಐಸಿಎಂಆರ್, ಆಗಸ್ಟ್ ೧೫ರೊಳಗೆ ಔಷಧಿ ಬಿಡುಗಡೆ ಮಾಡೋದಕ್ಕೆ ಸಿದ್ಧತೆ ನಡೆಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಐಸಿಎಂಆರ್ ಫಾಸ್ಟ್ ಟ್ರಾಕ್ ಟ್ರಯಲ್‌ಗೆ ಮುಂದಾಗಿದೆ. ಜುಲೈ ೭ರಿಂದ ಕ್ಲಿನಿಕಲ್ ಟ್ರಯಲ್ ಶುರುವಾಗಲಿದೆ. ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಜಂಟಿಯಾಗಿ ಕೋವ್ಯಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್ ನಡೆಸಲು ಮುಂದಾಗಿದ್ದು, ಮುಂದಿನ ತಿಂಗಳು ಔಷಧಿ ಸಾರ್ವಜನಿಕರ ಬಳಕೆಗೆ ಮುಕ್ತವಾಗುವ ನಿರೀಕ್ಷೆಯಿದೆ.

Please follow and like us:

Leave a Reply

Your email address will not be published. Required fields are marked *

Next Post

ನೆರೆ ರಾಷ್ಟçಗಳಿಗೆ ೫೫೬ ವಿಮಾನಗಳು ರವಾನೆ

Fri Jul 3 , 2020
ವಂದೇ ಭಾರತ್ ಮಿಷನ್‌ನ ನಾಲ್ಕನೇ ಹಂತದಲ್ಲಿ ಇಂದಿನಿAದ ಜುಲೈ ೧೫ರವರೆಗೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ೧೭ ದೇಶಗಳಿಗೆ ತನ್ನ ೫೫೬ ವಿಮಾನಗಳನ್ನು ಕಳುಹಿಸಲಿದೆ. ವಂದೇ ಭಾರತ್ ಮಿಷನ್‌ನ ನಾಲ್ಕನೇ ಹಂತದಲ್ಲಿ ಏರ್ ಇಂಡಿಯಾದ ೧೭೦ ವಿಮಾನಗಳು ಹಾರಾಟ ನಡೆಸಲಿದ್ದು, ಕೆನಡಾ, ಅಮೆರಿಕಾ, ಇಂಗ್ಲೆAಡ್, ಕೀನ್ಯಾ, ಶ್ರೀಲಂಕಾ, ಫಿಲಿಪೈನ್ಸ್, ಕಿರ್ಗಿಸ್ತಾನ್, ಸೌದಿ ಅರೇಬಿಯಾ, ಬಾಂಗ್ಲಾದೇಶ, ಥಾಯ್ ಲ್ಯಾಂಡ್, ದಕ್ಷಿಣ ಆಫ್ರಿಕಾ, ರಷ್ಯಾ, ಆಸ್ಟೆçÃಲಿಯಾ, ಮ್ಯಾನ್ಮಾರ್ ಸೇರಿದಂತೆ ಒಟ್ಟು ೧೭ ರಾಷ್ಟçಗಳಲ್ಲಿ […]

Advertisement

Wordpress Social Share Plugin powered by Ultimatelysocial