ಕಾಂಗ್ರೆಸ್‌ ಮಾಜಿ ಸಚಿವ ಡಿ.ಬಿ ಇನಾಮ್ದಾರ್ ಇನ್ನಿಲ್ಲ| DB Inamdar passes away

 

ಬೆಂಗಳೂರು : ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್‌ ಮಾಜಿ ಸಚಿವ ಡಿ.ಬಿ ಇನಾಮ್ದಾರ್‌ (D.B. Inamdar)ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾಂಗ್ರೆಸ್‌ ಮಾಜಿ ಸಚಿವ ಡಿ.ಬಿ ಇನಾಮ್ದಾರ್‌ 2023ರ ವಿಧಾನ ಸಭೆ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆದ್ರೆ ಅನಾರೋಗ್ಯ ಕಾರಣದಿಂದ ಅವರ ಬದಲಿಗೆ ಬಾಬಾಸಾಹೇಬ್ ಪಾಟೀಲ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಕಳೆದ ಒಂದು ತಿಂಗಳಿನಿಂದಲೂ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಡಿ.ಬಿ ಇನಾಮ್ದಾರ್‌ ಶ್ವಾಸಕೋಶ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡ ರಾತ್ರಿ ವಿಧಿವಶರಾಗಿದ್ದಾರೆ.

ಪ್ರವಾಸಿಗರಿಗೆ ಬಿಗ್‌ ಶಾಕ್‌ : ಮೇ 10ರಂದು ʼಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧʼ

ಶಿವಮೊಗ್ಗ: ಮೇ 10ರಂದು ವಿಧಾನಸಭಾ ಚುನಾವಣೆ ಹಿನ್ನೆಲೆ ಕಡ್ಡಾಯ ಮತದಾನ ಮಾಡುವ ನಿಟ್ಟಿನಲ್ಲಿ ಜೋಗ ಜಲಪಾತ ವೀಕ್ಷಣೆಗೆ ನಿಷೇಧ ಹೇರಲಾಗಿದೆ .

ಬೇಸಿಗೆಯ ಬಿರು ಬೀಸಿಲಿನಿಂದ ತತ್ತರಿಸಿದ ಜನರು ಜೋಗ ಜಲಪಾತವನ್ನು ನೋಡುವ ಮೂಲಕ ಕಣ್ತುಂಬಿಕೊಳ್ಳಲು ಹೋಗುವುದು ಸಹಜ. ಅದರಲ್ಲೂ ಇದೀಗ ಬೇಸಿಗೆಯಲ್ಲಿ ರಜೆ ದಿನವನ್ನು ಕಾಯುವವರೇ ಹೆಚ್ಚು. ಮುಂದಿನ ಮೇ 10ರಂದು ವಿಧಾನಸಭಾ ಚುನಾವಣೆ ಹಿನ್ನೆಲೆ ಬಹತೇಕ ಕಚೇರಿಗಳಿಗೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಈ ನಿಟ್ಟಿನಲ್ಲಿ ರಜೆಘೋಷಣೆ ಮಾಡಿರುವುದರಿಂದ ಮತದಾನ ಮಾಡದೇ ಪ್ರವಾಸಿ ತಾಣಗಳಿಗೆ ಹೋಗುವವರು ಇರುತ್ತಾರೆ . ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ ಜೋಗ ಜಲಪಾತ ವೀಕ್ಷಣೆಯನ್ನು ನಿರ್ಬಂಧ ಹೇರಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊರ ಭಾಗದಲ್ಲಿ ಜೋಗ ನಿರ್ವಾಹಣಾ ಪ್ರಾಧಿಕಾರವು ಬ್ಯಾನರ್‌ ಹಾಕುವ ಮೂಲಕ ಕಡ್ಡಾಯ ಮತದಾನ ಮಾಡುವ ಕಾರಣಕ್ಕಾಗಿ ಜೋಗ ಜಲಪಾತ ವೀಕ್ಷಣೆಗೆ ನಿಷೇಧ ಎಂಬ ಎಚ್ಚರಿಕೆ ಸಂದೇಶವನ್ನು ಪ್ರಕಟನೆ ಮೂಲಕ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಐಟಿ ಅಧಿಕಾರಿಗಳ ದಾಳಿ..!

Tue Apr 25 , 2023
  ಹುಬ್ಬಳ್ಳಿಯಲ್ಲಿ ಐಟಿ ಅಧಿಕಾರಿಗಳ ದಾಳಿ..! ಹುಬ್ಬಳ್ಳಿಯ ನಾರಾಯಣ ಆಚಾರ್ಯ ಎಂಬುವವರ ಮನೆ ಕಚೇರಿ ಮೇಲೆ ದಾಳಿ ನಡೆಸಿ ಐಟಿ(IT) ಅಧಿಕಾರಿಗಳು. ಜೆಪಿ ನಗರದ ಕೃಷ್ಣಕಾಂತಾ ಎಂಬ ಹೆಸರಿನ ಮನೆ ಮೇಲೆ ಮತ್ತು ನೀಲಿಜಿನ್ ರಸ್ತೆಯಲ್ಲಿರೋ ಕಚೇರಿ‌ ಮೇಲೆ ದಾಳಿ ಅಂಕಿತಾ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ನಡೆಸುತ್ತಿದ್ದ ನಾರಾಯಣ ಆಚಾರ್ಯ. ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಸಿಕೊಂಡ ಐಟಿ(IT) ಅಧಿಕಾರಿಗಳು, ಮುಂದುವರೆಸಿದ ತನಿಖೆಯನ್ನು ಹಾಗೂ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. https://play.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial