ಕಾರ್ಗಿಲ್ ವಿಜಯ ದಿವಸಕ್ಕೆ ೨೧ನೇ ವರ್ಷದ ಸಂಭ್ರಮ

ಕಾರ್ಗಿಲ್ ವಿಜಯ ದಿವಸಕ್ಕೆ ಭಾನುವಾರ ೨೧ನೇ ವರ್ಷಾಚರಣೆ ಸಂಭ್ರಮ. ದೇಶದ ರಕ್ಷಣೆ, ಭದ್ರತೆ, ಐಕ್ಯತೆಯನ್ನು ಎತ್ತಿಹಿಡಿದು ಕಾಪಾಡುವಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹುತಾತ್ಮ ಯೋಧರನ್ನು ನೆನೆಯುವ ದಿನ ಇಂದು. ಪಾಕಿಸ್ತಾನ ಸೇನೆ ೧೯೯೯ರಲ್ಲಿ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ಭಾರತದ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತ್ತು. ಆಕ್ರಮಣ ಮಾಡಲು ಬಂದ ಪಾಕಿಸ್ತಾನ ಸೇನೆ ವಿರುದ್ಧ ಭಾರತೀಯ ಸೇನೆಗೆ ಯುದ್ಧ ಮಾಡದೆ ಬೇರೆ ದಾರಿಯಿರಲಿಲ್ಲ. ಕೇಂದ್ರ ಸರ್ಕಾರ ಆಪರೇಷನ್ ವಿಜಯವನ್ನು ಘೋಷಿಸಿತ್ತು. ಎರಡೂವರೆ ತಿಂಗಳ ಕಾಲ ಕಾರ್ಗಿಲ್ ನಲ್ಲಿ ಯುದ್ಧ ನಡೆದು ಕೊನೆಗೆ ಭಾರತೀಯ ಸೇನೆ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟುವಲ್ಲಿ ಜುಲೈ ೨೯, ೧೯೯೯ರಂದು ಯಶಸ್ವಿಯಾಯಿತು ಆದಿನದ ವಿಜಯವನ್ನು ಮತ್ತು ಭಾರತೀಯ ಸೈನಿಕರು ತ್ಯಾಗ, ಬಲಿದಾನಗಳನ್ನು ನೆನೆಯಲು ಪ್ರತಿವರ್ಷ ಜುಲೈ ೨೬ನ್ನು ಕಾರ್ಗಿಲ್ ವಿಜಯ್ ದಿವಸ ಎಂದು ಆಚರಿಸಲಾಗುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಕಾರವಾರದ ಬೈತಖೋಲ್ ಮೀನುಗಾರರ ಬಲೆಗೆ ಅಪರೂಪದ ಅತಿಥಿ

Sun Jul 26 , 2020
ಕಾರವಾರದ ಬೈತಖೋಲ್ ಬಳಿ ಮೀನುಗಾರ ಬಲೆಗೆ ಅತಿ ಅಪರೂಪದ ಜಲಚರ ಸಿಕ್ಕಿದೆ ಈ ಮೀನಿನ ಹೆಸರು ಕೊಂಕಣಿಯಲ್ಲಿ ತೊರ್ಕೆ ಮೀನು ಎಂದು ಕರೆಯುತ್ತಾರೆ. ಈ ಮೀನು ನೋಡಲು ಆಕಳಿನ ಮೂಗಿನ ರೀತಿ ಕಾಣುತ್ತದೆ.ಇದು ಅಳಿವಿನಂಚಿನ ಅಪರೂಪದ ಮೀನು ಆಗಿದೆ. ನಗರದ ಬೈತಖೋಲ್ ಸಮೀಪದ ಲೇಡಿ ಬೀಚ್‌ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರ ಬಲೆಗೆ ಬರೊಬ್ಬರಿ ಅರ್ಧ ಕ್ವಿಂಟಲ್ ತೂಕದ ಆಕಳ ಮೂಗಿನ ತೊರ್ಕೆ ಮೀನು ಸಿಕ್ಕಿದೆ ಇದು ಅಳಿವಿನಂಚಿನ ಅಪರೂಪದ ಮೀನು ಆಗಿದೆ. […]

Advertisement

Wordpress Social Share Plugin powered by Ultimatelysocial