ಕಿಡಿಕಾರಿದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ

ಮಾಜಿ ಡಬಲ್ಸ್‌ ಬ್ಯಾಡ್ಮಿಂಟನ್‌ ಆಟಗರ‍್ತಿ ಜ್ವಾಲಾ ಗುಟ್ಟಾ ಹಾಲಿ ಭಾರತದ ಬ್ಯಾಡ್ಮಿಂಟನ್‌ ಕೋಚ್‌ ಪುಲ್ಲೇಲ ಗೋಪಿಚಂದ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಾಧ್ಯಮವೊಂದರ ಜತೆಗೆ ಮಾತನಾಡಿರುವ ಜ್ವಾಲಾ ಗುಟ್ಟಾ, “ಗೋಪಿಚಂದ್‌ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾಗ ಇತರೆ ರಾಜ್ಯದ ಬ್ಯಾಡ್ಮಿಂಟನ್‌ ಆಟಗಾರರು ಕೂಡ ಇರುತ್ತಿದ್ದರು, ದೇಶದ ವಿವಿಧ ಭಾಗಗಳಿಂದ ಉನ್ನತ ಆಟಗಾರರು ಹೊರ ಹೊಮ್ಮುತ್ತಿದ್ದರು. ಆದರೆ ಕಳೆದ ೧೦ರಿಂದ ೧೨ ರ‍್ಷಗಳ ಅವಧಿಯಲ್ಲಿ ಹೈದರಾಬಾದ್‌ ಅಥವಾ ತೆಲುಗಿನ ಆಟಗಾರರು ಮಾತ್ರ ಭಾರತ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ನರ‍್ದಿಷ್ಟ ಅಕಾಡೆಮಿಯ ಆಟಗಾರರನ್ನೇ ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ. ಮುಂದುವರಿದು ಮಾತನಾಡಿರುವ ಅವರು, “ಭಾರತ ಪದಕ ಗೆದ್ದರೆ ಅದಕ್ಕೆ ಗೋಪಿಚಂದ್‌ ಅವರ ತರಬೇತಿ ಕಾರಣ, ನಾವು ಉತ್ತಮವಾಗಿ ಆಡಲು ಸಾಧ್ಯವಾಗದೆ ಹೋದರೆ ಅದಕ್ಕೆ ವ್ಯವಸ್ಥೆ ಕಾರಣ ಎನ್ನುವ ಪರಿಸ್ಥಿತಿ ಇದೆ, ಬ್ಯಾಡ್ಮಿಂಟನ್‌ ನಲ್ಲಿರುವ ಆಂತರಿಕ ರಾಜಕೀಯದಿಂದಾಗಿ ವಿದೇಶಿ ತರಬೇತುದಾರರು ತಮ್ಮ ಅಧಿಕಾರಾವಧಿಯನ್ನು ಪರ‍್ಣಗೊಳಿಸಲಿಲ್ಲ, ಭಾರತೀಯ ಆಟಗಾರರ ಸಹಿತ ವಿವಿಧ ಕಡೆಯಿಂದ ಅವಮಾನ ಅನುಭವಿಸಿದ್ದರಿಂದ ನೊಂದು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಇದಕ್ಕೆಲ್ಲಾ ಪ್ರತ್ಯಕ್ಷರ‍್ಶಿಯಾಗಿ ನಾನೇ ಸಾಕ್ಷಿಯಾಗಿದ್ದೇನೆ ಎಂದು ಜ್ವಾಲಾ ತಿಳಿಸಿದ್ದಾರೆ. ನಾನು ಅನುಭವಿಸಿರುವ ಕಿರುಕುಳಕ್ಕೆ ಗೋಪಿಚಂದ್‌ ಅವರೇ ಕಾರಣವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ

Thu Jun 11 , 2020
ರಾಜ್ಯ ಸಚಿವ ಸಂಪುಟ ಸಭೆ ಆರಂಭವಾಗಿದೆ. ವಿಧಾನಸೌಧದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಂಪುಟ ಸಭೆ ನಡೆಯುತ್ತಿದೆ. ವಿಧಾನಪರಿಷತ್ ಸದಸ್ಯರ ಆಯ್ಕೆ, ಹೊರರಾಜ್ಯದವರ ಕ್ವಾರಂಟೈನ್ ವಿಚಾರ, ನೇಕಾರರ ಸಮಸ್ಯೆ ಹಾಗೂ ಶಾಲಾ ಆರಂಭ ಮತ್ತು ಶುಲ್ಕದ ವಿಚಾರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.     Please follow and like us:

Advertisement

Wordpress Social Share Plugin powered by Ultimatelysocial