ಕೃಷಿ ವಲಯದ ಮೇಲೆ ಗಮನಹರಿಸಬೇಕಾದ ನಿಷಯಗಳೇನು? 2022 ಬಜೆಟ್

ನವದೆಹಲಿ, ಜನವರಿ 28: ಭಾರತದಲ್ಲಿ 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ನಂತರ ರೈತರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ರೈತರ ಕಣ್ಣು ಕೆಂಪಾಗಿಸಿದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಈಗ ರೈತರಿಗೆ ನೀಡಿರುವ ಭರವಸೆಗಳನ್ನು ಎಷ್ಟರ ಮಟ್ಟಿಗೆ ಸಾಕಾರ ರೂಪಕ್ಕೆ ತರುತ್ತಾರೆ ಎಂಬುದಕ್ಕೆ ಬಜೆಟ್ ಸಾಕ್ಷಿ ಆಗಲಿದೆ

ಕೃಷಿ ಕ್ಷೇತ್ರದಲ್ಲಿ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ತಂತ್ರಜ್ಞಾನದಂತಹ ಕೆಲವು ಕ್ಷೇತ್ರಗಳ ಮೇಲೆ ಸಂಪೂರ್ಣ ಗಮನಹರಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಂಡಿಸಲಿರುವ 2022-23ರ ಕೇಂದ್ರ ಬಜೆಟ್‌ಗಾಗಿ ಭಾರತೀಯ ಕೃಷಿ ವಲಯ ಎದುರು ನೋಡುತ್ತಿದೆ.

ಕೃಷಿ ವಲಯದಲ್ಲಿ ಉತ್ಪಾದನೆ ಹೆಚ್ಚಿಸುವ ಕ್ರಮ:

ಭಾರತದಲ್ಲಿ 2020 ಮತ್ತು 2021ನೇ ಎರಡೂ ವರ್ಷಗಳಲ್ಲಿ ಉತ್ಪಾದನೆಯಲ್ಲಿ ಕೃಷಿ ವಲಯವು ಅತ್ಯಂತ ಪ್ರಶಾವಶಾಲಿ ಎನಿಸಿದೆ. ಮಾನ್ಸೂನ್ ಮಳೆಯು ಕೃಷಿ ವಲಯದಲ್ಲಿ ಉತ್ಪಾದನೆ ಹೆಚ್ಚಿಸುವುದಕ್ಕೆ ಪ್ರಮುಖ ಪಾತ್ರ ವಹಿಸಿತು. ಇದರ ಜೊತೆಗೆ ಉತ್ಪಾದನೆ ಹಾಗೂ ಪೂರೈಕೆಯ ಸರಪಳಿಯನ್ನು ಸರಳವಾಗಿ ನಿರ್ವಹಿಸುವುದ ಮತ್ತು ಉತ್ತೇಜನಕ್ಕೆ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಬೇಕಾದ ಅಗತ್ಯವಿದೆ. ಕೃಷಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತೇಜನವು ಕೆಲವು ಪೂರಕ ವ್ಯವಹಾರಗಳಿಗೆ ಸಹಾಯ ಮಾಡುತ್ತದೆ.

ಕನಿಷ್ಠ ಬೆಂಬಲ ಬೆಲೆಯ ನಿರೀಕ್ಷೆ:

ಕನಿಷ್ಠ ಬೆಂಬಲ ಬೆಲೆಯ ನಿರೀಕ್ಷೆ:

ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಸಗೊಬ್ಬರಗಳ ಬೆಲೆ ಏರಿಕೆಯಿಂದಾಗಿ ರೈತರ ಉತ್ಪಾದನಾ ವೆಚ್ಚವು ಹೆಚ್ಚಳವಾಗುತ್ತಿದೆ. ಅದಾಗ್ಯೂ, ಮಾರುಕಟ್ಟೆಗಳಲ್ಲಿ ರೈತರ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಈ ಹಿನ್ನೆಲೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ. ವಿವಾದಿತ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ರೈತರು ನಡೆಸಿದ ಪ್ರತಿಭಟನೆ ಸಂದರ್ಭಗಳಲ್ಲಿ ಇದೇ ಕನಿಷ್ಠ ಬೆಂಬಲ ಬೆಲೆಯ ವಿಷಯವೇ ಪ್ರಮುಖ ಅಂಶವಾಗಿತ್ತು. ಹೀಗಾಗಿ ಕೇಂದ್ರ ಬಜೆಟ್‌ನಲ್ಲಿ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.

ನಿರ್ಮಲಾ ಸೀತಾರಾಮನ್ ನಾಲ್ಕನೇ ಬಜೆಡ್ ಮೇಲೆ ಅಪಾರ ನಿರೀಕ್ಷೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಂಸ್ಕರಿಸಿದ ಎಣ್ಣೆಗಿಂತ ಸಾಂಪ್ರದಾಯಿಕ ತುಪ್ಪ ಆರೋಗ್ಯಕರ: ಹೊಸ ಅಧ್ಯಯನ

Fri Jan 28 , 2022
ಸಾಸಿವೆ ಎಣ್ಣೆ, ತುಪ್ಪ ಮತ್ತು ತೆಂಗಿನ ಎಣ್ಣೆಯ ಅಗತ್ಯವಿರುವ ಭಾರತೀಯ ಸಾಂಪ್ರದಾಯಿಕ ಶೈಲಿಯ ಅಡುಗೆಯು ನಿಮ್ಮ ಆರೋಗ್ಯಕ್ಕೆ ಸಂಸ್ಕರಿಸಿದ ಎಣ್ಣೆಗಿಂತ ಉತ್ತಮವಾಗಿದೆ ಎಂದು ಇಂಡಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಅಧ್ಯಯನದ ಪ್ರಕಾರ, ಸಂಸ್ಕರಿಸಿದ ತೈಲಗಳು ಮಾನವರನ್ನು ಪರಿಧಮನಿಯ ಹೃದಯ ಕಾಯಿಲೆಯ (CHD) ಅಪಾಯಕ್ಕೆ ಒಳಪಡಿಸುತ್ತವೆ, ಇದು ಪ್ರಪಂಚದಾದ್ಯಂತ ಮತ್ತು ನಿರ್ದಿಷ್ಟವಾಗಿ ಭಾರತದಲ್ಲಿ ಸಾವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಭಾರತೀಯ ವೈದ್ಯಕೀಯ ಕಾಲದ ಪ್ರಕಾರ, CHD ಮತ್ತು […]

Advertisement

Wordpress Social Share Plugin powered by Ultimatelysocial