ಕೆಜಿಎಫ್ ಟ್ರೆಂಡ್ ಈಗ RCB ಅಭಿಮಾನಿಗಳಲ್ಲೂ ಶುರುವಾಗಿದೆ…

ದೇಶಾದ್ಯಂತ ಹೆಚ್ಚು ಚರ್ಚೆಯಲ್ಲಿರುವ ಎರಡು ವಿಷಯಗಳು ಅಂದ್ರೆ ಒಂದು ಐಪಿಎಲ್(IPL) ಮತ್ತೊಂದು ಕೆಜಿಎಫ್(KGF) ಸಿನಿಮಾ.. ಕೆಜಿಎಫ್ ಸಿನಿಮಾ ಚಾಪ್ಟರ್ ಟು (KGF-2)ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು(Fans) ಕುತೂಹಲದಿಂದ ಕಾಯುತ್ತಿದ್ದಾರೆ.. ಮತ್ತೊಂದು ಕಡೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಈ ಬಾರಿಯಾದರೂ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.
ವಿಶೇಷ ಅಂದ್ರೆ ಕೆಜಿಎಫ್ ಸಿನಿಮಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕೇಂದ್ರಬಿಂದು ಕರ್ನಾಟಕ(Karnataka). ಕರ್ನಾಟಕದ ಸಿನಿಮಾ ಹಾಗೂ ಕರ್ನಾಟಕದ ತಂಡ ರಾಷ್ಟ್ರೀಯ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಹೀಗಾಗಿಯೇ ಅಸಂಖ್ಯಾತ ಅಭಿಮಾನಿಗಳು ಕೆಜಿಎಫ್ ಸಿನಿಮಾ ಹಾಗೂ ಆರ್ಸಿಬಿ ತಂಡಕ್ಕೆ ಇದೆ.. ಜೊತೆಗೆ ಸಿನಿಮಾ ಬಿಡುಗಡೆ ಹಾಗೂ ಈ ಬಾರಿಯ ಐಪಿಎಲ್ ಗಾಗಿ ಕಾದು ಕುಳಿತಿರುವ ಅಭಿಮಾನಿಗಳು ಸಾಕಷ್ಟು ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ.. ಕ್ರೇಜ್ ನ್ನು ಮತ್ತಷ್ಟು ಹೆಚ್ಚಳ ಮಾಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಮಾಡಿದೆ..
RCB ಗೂ ಶುರುವಾಯ್ತು KGF ಕ್ರೇಜ್
ಕಳೆದ ಫೆಬ್ರವರಿ 12 13 ರಂದು ಬೆಂಗಳೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಘಟಾನುಘಟಿ ಆಟಗಾರರನ್ನು ತನ್ನ ತಂಡಕ್ಕೆ ಸೇರ್ಪಡೆ ಮಾಡಿದೆ.
ಅದರಲ್ಲೂ ಎಬಿ ಡಿವಿಲಿಯರ್ಸ್ ನಿವೃತ್ತಿ ಬಳಿಕ ಅವರ ಸ್ಥಾನವನ್ನು ತುಂಬುವ ಆಟಗಾರರು ಯಾರು ಎಂಬ ಪ್ರಶ್ನೆಗೆ ಹರಾಜು ಪ್ರಕ್ರಿಯೆಯಲ್ಲಿ ಉತ್ತರ ಕಂಡುಕೊಂಡಿರುವ ಬೆಂಗಳೂರು ತಂಡ, ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು ಏಳುಕೋಟಿಗೆ ಖರೀದಿ ಮಾಡಿದೆ. ಇತ್ತ ಫಾಫ್ ಡು ಪ್ಲೆಸಿಸ್ ಬೆಂಗಳೂರು ತಂಡದ ಸೇರ್ಪಡೆಯಾಗುತ್ತಿದ್ದಾರೆ ಅಭಿಮಾನಿಗಳನ್ನು ಈ ಬಾರಿ ಕಪ್ ನಮ್ಮದೇ ಎಂಬ ನಿರೀಕ್ಷೆ ಹೆಚ್ಚಾಗಿದೆ..
ಇದರ ನಡುವೆಯೇ ಅಭಿಮಾನಿಗಳು ಮುಂದಿನ ಐಪಿಎಲ್ ನಲ್ಲಿ ಬೆಂಗಳೂರು ತಂಡಕ್ಕೆ ಹೊಸ ಬ್ಯಾಟಿಂಗ್ ಲೈನ್ ಅಪ್ ನೀಡುತ್ತಿದ್ದು, ಆರ್ ಸಿ ಬಿ ತಂಡವನ್ನು ಕೆಜಿಎಫ್ ತಂಡವಾಗಿ ಮಾರ್ಪಡಿಸಿದ್ದಾರೆ.
ಹೌದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, RCB ಬ್ಯಾಟಿಂಗ್ ಲೈನ್ ಅಪ್ ಇನ್ಮುಂದೆ ಕೆಜಿಎಫ್ ಅಂತ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.
KGF ಅಂದ್ರೆ ಕೊಹ್ಲಿ, ಗ್ಲೇನ್, ಫಾಫ್ ಡು ಪ್ಲೆಸಿಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಪ್ರಕಾರ ಕೆಜಿಎಫ್ ಅಂದರೆ, ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಆಟಗಾರರ ಮ್ಯಾಕ್ಸ್ವೆಲ್, ಹೊಸದಾಗಿ ಆರ್ಸಿಬಿ ತಂಡ ಸೇರ್ಪಡೆಯಾಗಿರುವ ಫಾಫ್ ಡು ಪ್ಲೆಸಿಸ್ .. ಹೀಗಾಗಿ ಆರ್ಸಿಬಿ ಅಭಿಮಾನಿಗಳು ಈ ಮೂವರ ಹೆಸರುಗಳನ್ನು ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್ ಅಂದ್ರೆ ಆರ್ಸಿಬಿ ಅಂತ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ..

ಅಭಿಮಾನಿಗಳ KGF ಟ್ರೆಂಡ್ ಗೆ ಮತ್ತಷ್ಟು ಕಿಚ್ಚು ಹಚ್ಚಿದ RCB ಫ್ರಾಂಚೈಸಿ
ಇನ್ನು ಅಭಿಮಾನಿಗಳು ವಿರಾಟ್ ಕೊಹ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಡು ಪ್ಲೆಸಿಸ್ ಹೆಸರು ಹಿಡಿದುಕೊಂಡು ಕೆಜಿಎಫ್ ಎಂದು ಸಿಕ್ಕಾಪಟ್ಟೆ ಟ್ರೆಂಡ್ ಮಾಡುತ್ತಿದ್ದರೆ ಆರ್ ಸಿ ಬಿ ಫ್ರಾಂಚೈಸಿ ಕೂಡ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕ್ರೇಜ್ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಹೀಗಾಗಿಯೇ ವಿರಾಟ್, maxwell, ಫಾಫ್ ಡು ಪ್ಲೆಸಿಸ್ ಇರೋ ಫೋಟೋ ಹಾಕಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಂತ ಪೋಸ್ಟರ್ ಶೇರ್ ಮಾಡಿದೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಅಭಿಮಾನಿಗಳು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.

ಇನ್ನು ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾ ಹಲವಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಹೀಗಾಗಿಯೇ ಅಭಿಮಾನಿಗಳು ಕೆಜಿಎಫ್ ಚಾಪ್ಟರ್ ಟು ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ.

ಯಶ್ , ಪ್ರಶಾಂತ ನೀಲ್ ಕಾಂಬಿನೇಷನ್ ನ ಈ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಹೋಗುತ್ತಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೂಡ ಉಂಟಾಗಿದೆ.
ಇನ್ನು ವಿಶೇಷ ಅಂದ್ರೆ ಮಾರ್ಚ್ 27 ರಿಂದ ಐಪಿಎಲ್ 2022ರ ಆರಂಭವಾಗುವ ಸಾಧ್ಯತೆಯಿದೆ.. ಹೀಗಾಗಿ ಅಭಿಮಾನಿಗಳು ಕೆಜಿಎಫ್ ಸಿನಿಮಾ ಬಿಡುಗಡೆಗೆ ಕಾದಂತೆ ಹಾಗೂ ಈ ಬಾರಿ ಆರ್ ಸಿ ಬಿ ಕಪ್ ಡಬಹುದು ಎಂಬ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆಯವರ ಹೆಸರು ಸುಪ್ರಸಿದ್ಧವಾದುದು.

Fri Feb 18 , 2022
ದಾದಾ ಸಾಹೇಬ್ ಫಾಲ್ಕೆಯವರ ಮೂಲ ಹೆಸರು ‘ದುಂಡಿರಾಜ್ ಗೋವಿಂದ ಫಾಲ್ಕೆ’ಯೆಂದು. ದುಂಡಿರಾಜರು ಬರೋಡದ ‘ಕಲಾಭವನ’ದ ಶಿಕ್ಷಣ ಮುಗಿಸಿ, ‘ಸರಕಾರಿ ಪ್ರಾಚ್ಯವಸ್ತು ಇಲಾಖೆ’ಯಲ್ಲಿ ಚಿತ್ರಕಾರರಾಗಿ, ಛಾಯಾಚಿತ್ರಗಾರರಾಗಿ 1903 ರಲ್ಲಿ ಖಾಯಂ ನೌಕರಿ ಗಳಿಸಿದರು. ದುಂಡಿರಾಜರು ‘ಫೋಟೋ-ಕೆಮಿಕಲ್ ರಂಗ’ದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ಮಹಾನ್ ಸೃಜನಶೀಲ ಸಾಹಸಿಯಾದ ಈತ ಭಾರತೀಯ ಚಲನ ಚಿತ್ರರಂಗವೆಂಬ ಮಾಯಾಲೋಕವನ್ನು ‘ಹರಿಶ್ಚಂದ್ರ’ ಚಿತ್ರದ ಮೂಲಕ ತೆರೆದಿಟ್ಟರು. ‘ದಾದಾಸಾಹೇಬ್ ಫಾಲ್ಕೆ’ಯವರು. ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾನ್ ತ್ಯಾಗಿ.’ದುಂಡಿರಾಜ್’ […]

Advertisement

Wordpress Social Share Plugin powered by Ultimatelysocial