ಕೇಂದ್ರ ಬಜೆಟ್-2022 ಮಂಡನೆಗೆ ಮುನ್ನ ಏರಿಕೆ ಕಂಡುಬಂದ ಷೇರುಪೇಟೆ ಸಂವೇದಿ ಸೂಚ್ಯಂಕ

ನವದೆಹಲಿ: ಇಂದು ಫೆಬ್ರವರಿ 1 ಮಂಗಳವಾರ ಕೇಂದ್ರ ಬಜೆಟ್ -2022 ಮಂಡನೆಯಾಗಲಿದೆ. ಕೇಂದ್ರ ಬಜೆಟ್ ಮಂಡನೆಗೆ ಮುಂಚಿತವಾಗಿ ಮುಂಬೈ ಷೇರುಪೇಟೆಯ ಆರಂಭಿಕ ವ್ಯವಹಾರಗಳಲ್ಲಿ ದೇಶೀಯ ಷೇರು ಸಂವೇದಿ ಸೂಚ್ಯಂಕಗಳು ಧನಾತ್ಮಕವಾಗಿ ಏರಿಕೆ ಹಾದಿಯಲ್ಲಿ ಹೆಚ್ಚಿನ ವಹಿವಾಟು ನಡೆಸಿದವು.ಎಸ್‌ಜಿಎಕ್ಸ್ ನಿಫ್ಟಿ ಸಹ ಧನಾತ್ಮಕ ಆರಂಭಿಕವನ್ನು ಕಂಡಿವೆ. SGX ನಿಫ್ಟಿ ಫ್ಯೂಚರ್ಸ್ ಎಂದು ಕರೆಯಲ್ಪಡುವ ಸಿಂಗಾಪುರ್ ಎಕ್ಸ್‌ಚೇಂಜ್‌ನಲ್ಲಿ ನಿಫ್ಟಿ ಫ್ಯೂಚರ್ಸ್ 126.25 ಪಾಯಿಂಟ್‌ಗಳು ಅಂದರೆ 0.73 ಶೇಕಡಾ ಜಿಗಿದು 17,494 ಕ್ಕೆ ತಲುಪಿದೆ. ಇಂದು ಬೆಳಗಿನ ವಹಿವಾಟು ಆರಂಭದಲ್ಲಿ ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಹೆಚ್ಚಿನ ವಹಿವಾಟು ಕಂಡವು.ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸೋಮವಾರ ಎಲ್ಲಾ ವಲಯಗಳ ಖರೀದಿಯಲ್ಲಿ ನಿನ್ನೆ ಮುನ್ನಡೆ ಕಂಡವು. 30 ಘಟಕಗಳ ಬಿಎಸ್‌ಇ ಸೂಚ್ಯಂಕವು ಇಂದು 814 ಪಾಯಿಂಟ್ ಗಳು ಅಂದರೆ ಶೇಕಡಾ 1.42ರಷ್ಟು ಏರಿಕೆಯಾಗಿ 58,014ಕ್ಕೆ ಸ್ಥಿರವಾಯಿತು; ಎನ್‌ಎಸ್‌ಇ ನಿಫ್ಟಿ 238 ಪಾಯಿಂಟ್‌ಗಳು ಅಂದರೆ 1.39 ಶೇಕಡಾ ಹೆಚ್ಚಾಗಿ 17,340 ಕ್ಕೆ ತಲುಪಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 9.2 ರಷ್ಟು ಬೆಳವಣಿಗೆಯಾಗಲಿದೆ ಎಂದು ನಿನ್ನೆ ವಿತ್ತ ಸಚಿವೆ ಮಂಡಿಸಿದ್ದ ಆರ್ಥಿಕ ಸಮೀಕ್ಷೆಯು ಅಂದಾಜು ಮಾಡಿರುವುದರಿಂದ ಹೂಡಿಕೆದಾರರಲ್ಲಿ ಆಶಾಭಾವನೆ ವ್ಯಕ್ತವಾಗಿದೆ. ಅದು ಕೂಡ ಇಂದಿನ ಷೇರುಪೇಟೆ ಸಂವೇದಿ ಸೂಚ್ಯಂಕಕ್ಕೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಬಹುದು.ಕೋವಿಡ್ -19 ಸಾಂಕ್ರಾಮಿಕ ಮತ್ತು ನಂತರದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗಳ ಪರಿಣಾಮದಿಂದಾಗಿ 2020-21 ರಲ್ಲಿ ದೇಶದ ಆರ್ಥಿಕತೆಯು ಶೇಕಡಾ 7.3ರಷ್ಟು ಕುಸಿದಿದ್ದವು.ಬಜೆಟ್ ದಿನದಂದು ದೇಶೀಯ ಸೂಚ್ಯಂಕಗಳು ಏರಿಕೆಯಾಗಬಹುದು ಎಂದು ಷೇರುಮಾರುಕಟ್ಟೆ ವಿಶ್ಲೇಷಕರು ಅಂದಾಜು ಮಾಡಿದ್ದಾರೆ.ಇತ್ತೀಚಿನ ವರದಿಯಂತೆ ಸೆನ್ಸೆಕ್ಸ್ 736 ಪಾಯಿಂಟ್‌ಗಳ ಏರಿಕೆಯೊಂದಿಗೆ ಪ್ರಸ್ತುತ 58,760.24 ನಲ್ಲಿದೆ. ನಿಫ್ಟಿ 195 ಪಾಯಿಂಟ್‌ಗಳ ಏರಿಕೆ, ಪ್ರಸ್ತುತ 17,535 ರಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊಬೈಲ್ ನಲ್ಲಿ ಕೇಂದ್ರ ಬಜೆಟ್-2022; ಡೌನ್ ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ...

Tue Feb 1 , 2022
ನವದೆಹಲಿ: ಈ ಬಾರಿಯ ಬಜೆಟ್ ಕೂಡ ಡಿಜಿಟಲ್ ಆಗಲಿದ್ದು ಪ್ರತಿ ಬಜೆಟ್ ಮಾಹಿತಿಯೂ ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತೆ ಮಾಡಲು ಸರ್ಕಾರ ಆಯಪ್ ಬಿಡುಗಡೆ ಮಾಡಿದೆ.ಬಜೆಟ್ ಮಾಹಿತಿಯು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರವು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸಂಪೂರ್ಣ ಬಜೆಟ್ ಅನ್ನು ವೀಕ್ಷಿಸಲು ಈ ಅಪ್ಲಿಕೇಶನ್ ನಿಂದ ಸಾಧ್ಯವಾಗಲಿದೆ.ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾಮಾನ್ಯ ಬಜೆಟ್ ಅನ್ನು ಬೆಳಗ್ಗೆ 11 […]

Advertisement

Wordpress Social Share Plugin powered by Ultimatelysocial