ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್

ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ನಲ್ಲಿ ಅಕ್ರಮ ಸಂಬಂಧ ಆರೋಪದ ಹಿನ್ನೆಯಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕ ರೆಡ್ ಹ್ಯಾಂಡ್ ಆಗಿ ಸಿಕ್ಕು, ವಯಸ್ಸಲ್ಲದ ವಯಸ್ಸಲ್ಲಿ ಹೆಣವಾಗಿದ್ದಾನೆ. ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ಗ್ರಾಮದಲ್ಲಿ ಮದ್ಯರಾತ್ರಿ ಘಟನೆ ನಡೆದಿದೆ. 25 ವರ್ಷದ ಅಮರನಾಥ ಸೊಲ್ಲಾಪುರ 35 ವರ್ಷದ ಸುನೀತಾ ತಳವಾರ್ ಕೊಲೆಯಾದವರು. ಇನ್ನು ನಿನ್ನೆ ರಾತ್ರಿ ಮಹಿಳೆ ಸುನಿತಾಳೊಂದಿಗೆ ಸರಸ ಸಲ್ಲಾಪಕ್ಕೆ ಬಂದಿದ್ದ ಪ್ರಿಯಕರ ಅಮರನಾಥ್ ತೋಟದ ಮನೆಯಲ್ಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಮಹಿಳೆಯ ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆಕೆಯ ತಂದೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.. ಕೊಲೆ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರದ ದಲಿತ ಸಂಘರ್ಷ ಸಮಿತಿಯ ಮನವಿ

Wed Jul 22 , 2020
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ರಾಜ್ಯದ ಡಿ ಎಸ್ ಎಸ್ ಸಂಘಟನೆ ದೀನರ,ದುರ್ಬಲ, ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಎದುರಿಸುತ್ತಾ ಕೊಲೆ,ಸುಲಿಗೆ ,ಸಾಮಾಜಿಕ ಬಹಿಷ್ಕಾರ, ಇನ್ನಿತರೆ ಪ್ರಕರಣಗಳಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ವಿಜಯಪುರ ಜಿಲ್ಲೆ ಉಪವಿಭಾಗದ ಅಧಿಕಾರಿ ಡಿ ವೈ ಎಸ್ ಪಿ ಶ್ರೀ.ಎಂ.ಬಿ ಸಂಕದ ಅವರು ದಲಿತರ ಮೇಲೆ ದೌರ್ಜನ್ಯ ನಡೆಯಲು ನೇರ ಕಾರಣರಾಗಿದ್ದಾರೆ. ಇವರ ಕರ್ತವ್ಯದಲ್ಲಿ ಬಹುತೇಕ ದೌರ್ಜನ್ಯ […]

Advertisement

Wordpress Social Share Plugin powered by Ultimatelysocial