ಕೊರೊನಾ ವಿರುದ್ಧ ಗೆದ್ದು ಬಂದ ರೈತ ಕುಟುಂಬ

ಗದ್ದೆಯಲ್ಲಿ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕುಟುಂಬಕ್ಕೆ ಕೊರೊನಾ ವಕ್ಕರಿಸಿ ಮನೆಯವರೆಲ್ಲಾ ಕೋವಿಡ್ ಆಸ್ಪತ್ರೆ ಸೇರಿದರು. ಆದರೆ ಗದ್ದೆ ಮಾತ್ರ ಪಾಳು ಬೀಳಲಿಲ್ಲ ತಾಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದ ಬಡ ಕುಟುಂಬಕ್ಕೆ ಸೇರಿದ ಅರ್ಧಕ್ಕೆ ನಿಂತಿದ್ದ ನಾಟಿ ಕಾರ್ಯವನ್ನು ಗ್ರಾಮಸ್ಥರೆಲ್ಲ ಸೇರಿ ಮುಗಿಸಿ ನೆರವಾಗಿದ್ದಾರೆ. ಮಾನವೀಯತೆ ಗ್ರಾಮೀಣ ಭಾಗದಲ್ಲಿ ಈಗಲೂ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ತಲ್ತಾರೆಶೆಟ್ಟಳ್ಳಿ ಗ್ರಾಮದ ಪುಟ್ಟಯ್ಯಗೆ ೨ ಎಕರೆ ಗದ್ದೆ ಇದ್ದು, ಪ್ರತಿವರ್ಷ ಭತ್ತ ಬೆಳೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಈ ಬಾರಿ ನಾಟಿಗೆ ಸಜ್ಜಾಗುತ್ತಿರುವಾಗ ಅವರೂ ಸೇರಿ ಪತ್ನಿ, ಮಗಳು, ಅಳಿಯ ಎಲ್ಲರಿಗೂ ಕೋವಿಡ್ ಬಂದು ಆಸ್ಪತ್ರೆ ಸೇರಿದ್ದರು. ಇಂಥ ಸಂಕಷ್ಟದಲ್ಲಿ ಗ್ರಾಮದ ಜನರೆಲ್ಲಾ ಸೇರಿ ಉಳುಮೆ ಮಾಡಿ, ನಾಟಿ ಮಾಡಿ ಮುಗಿಸಿದ್ದರು. ಹತ್ತು ದಿನ ಚಿಕಿತ್ಸೆ ಪಡೆದು, ಕೊರೊನಾ ಗೆದ್ದು ಮನೆಗೆ ಬಂದ ಕುಟುಂಬವನ್ನು ಗ್ರಾಮಸ್ಥರು ಹಾರ ಹಾಕಿ ಸ್ವಾಗತಿಸಿದಾಗ ಆಶ್ಚರ್ಯ ಕಾದಿತ್ತು, ಗದ್ದೆಯಲ್ಲಿ ನಾಟಿ ಆಗಿದ್ದನ್ನು ಕಂಡು ಸಂತಸಗೊoಡ ರೈತ ಪುಟ್ಟಯ್ಯ ಗ್ರಾಮಸ್ಥರಿಗೆ ಕೃತಜ್ಞತೆ ಅರ್ಪಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಬೆಂಬಲಿಗರ ಫೇಸ್ಬುಕ್ ವಾರ್

Sun Aug 2 , 2020
ಬಾಗಲಕೋಟೆ ಜಿಲ್ಲೆಯ ಹುನಗುಂದ ಮತಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಬೆಂಬಲಿಗರು ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನಪವರ ಬೆಂಬಲಿಗರ ನಡವೆ ಹಳೆಯ ವಿಷಯ ಕೆದಕಿ ಫೇಸ್ಬುಕ್ ವಾರ್ ನಡೀತಿದ್ದು, ರ‍್ಷಗಳ ಹಿಂದೆ ವಿಜಯಾನಂದ ಕಾಶಪ್ಪನವರ ಬೆಂಗಳೂರಿನಲ್ಲಿ ನಡೆದಿದ್ದ sಞಥಿ bಚಿಡಿ ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದ ಸುದ್ದಿಗಳನ್ನು ಹಾಕಿ ವಾರ್ ನಡೆಸುತ್ತಿದ್ದಾರೆ. ಎಷ್ಟೋ ದಿನಗಳ ಹಿಂದೆ ನಡೆದಿದ್ದ ಘಟನೆಗಳು ಈಗ್ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ ಮರುಕಳಿಸುತ್ತಿವೆ ಎನ್ನುವುದು ನಿಗೂಢವಾಗಿದೆ. ಅದ್ರಲ್ಲೂ […]

Advertisement

Wordpress Social Share Plugin powered by Ultimatelysocial