ಕೋವಿಡ್ ಸೇನಾನಿಗಳನ್ನು ಆಹ್ವಾನಿಸಲು ಯೋಜನೆ

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಸಮಾರಂಬಗಳಿಗೆ ಕೊವಿಡ್ ಸೇನಾನಿಗಳನ್ನು ಮತ್ತು ಸೋಕಿನಿಂದ ಗುಣಮುಖರಾದವರನ್ನು ಆಹ್ವಾನಿಸಿ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ ಪತ್ರ ಬರೆದಿದೆ. ಅಧಿಕೃತ ಸಮಾರಂಭಹಳಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು ಎಂದೂ ಸಹ ಪತ್ರದಲ್ಲಿ ಸೂಚಿಸಲಾಗಿದೆ. ‘ಈ ವರ್ಷವೂ ಸ್ವಾತಂತ್ರ್ಯ ದಿನವನ್ನು ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಆಚರಿಸಲಾಗುವುದು. ಆದರೂ, ಕೊವಿಡ್‌ ಸಾಂಕ್ರಾಮಿಕ ರೋಗದ ಹರಡುವಿಕೆ ತಡೆಯಲು ವಿವಿಧ ಕಾರ್ಯಕ್ರಮಗಳು ಅಥವಾ ಚಟುವಟಿಕೆಗಳನ್ನು ಆಯೋಜಿಸುವಾಗ ಕೆಲ ತಡೆಗಟ್ಟುವಿಕೆ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.’ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಗೃಹಸಚಿವಾಲಯ ಸೂಚಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಹೊಸ ಬಣ್ಣದಲ್ಲಿ ಕಾಣಿಸಲಿದೆ ವೆಬ್ ಸೈಟ್

Fri Jul 24 , 2020
ಭಾರತ ಸರ್ಕಾರ, ಪ್ರಧಾನಮಂತ್ರಿಯ ಅಧಿಕೃತ ವೆಬ್ ಸೈಟ್ pmindia.gov.in ನಲ್ಲಿ ಬದಲಾವಣೆ ಮಾಡಲಿದೆ. ಪ್ರಧಾನ ಮಂತ್ರಿ ವೆಬ್ ಸೈಟ್ ಹೊಸ ಬಣ್ಣದಲ್ಲಿ ಕಾಣಿಸಲಿದೆ. ಸರ್ಕಾರ ಹೊರಡಿಸಿದ ಪ್ರಸ್ತಾವನೆಯ ಪ್ರಕಾರ, ಈಗ ವೆಬ್ ಸೈಟ್ ವಿಶ್ವಸಂಸ್ಥೆಯ 6 ಅಧಿಕೃತ ಭಾಷೆಗಳಲ್ಲಿ ಮತ್ತು 22 ಭಾರತೀಯ ಭಾಷೆಗಳಲ್ಲಿ ವಿಕ್ಷಿಸಬಹುದು. ಪ್ರಸ್ತುತ, ಭಾರತದ ಪ್ರಧಾನ ಮಂತ್ರಿಯ ವೆಬ್ ಸೈಟ್ 12 ಭಾಷೆಗಳಲ್ಲಿ ಲಭ್ಯವಿದ್ದು, ರಾಷ್ಟ್ರೀಯ   ಇ-ಆಡಳಿತ ವಿಭಾಗ ನೀಡಿದ ಆರ್‌ಎಫ್‌ಪಿ ಪ್ರಕಾರ, ವೆಬ್‌ಸೈಟ್‌ಗಳ ವಿನ್ಯಾಸ, […]

Advertisement

Wordpress Social Share Plugin powered by Ultimatelysocial