ಮಂಡ್ಯದಲ್ಲಿ ಐವರು ಶಾಲಾ ಮಕ್ಕಳಿಗೆ ಕೋವಿಡ್ ಸೋಂಕು ಧೃಡ ; ಒಂದು ವಾರ ಶಾಲೆ ಸೀಲ್ ಡೌನ್

ಮಂಡ್ಯದಲ್ಲಿ ಐವರು ಶಾಲಾ ಮಕ್ಕಳಿಗೆ ಕೋವಿಡ್ ಸೋಂಕು ಧೃಡ  ;  ಒಂದು ವಾರ ಶಾಲೆ ಸೀಲ್ ಡೌನ್

ಮಂಡ್ಯ :- ಜಿಲ್ಲೆಯಲ್ಲಿ ಕೆಲ ತಿಂಗಳುಗಳಿಂದ ರಜೆ ಮೇಲಿದ್ದ ಹೆಮ್ಮಾರಿ ಕೊರೋನಾ ಮತ್ತೆ ರುದ್ರ ನರ್ತನ ಮಾಡುತ್ತಿದ್ದು, ಇಂದು ಐವರು ಶಾಲಾ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಮದ್ದೂರು ತಾಲ್ಲೂಕಿನ ಹಳ್ಳಿಕೆರೆ ಗ್ರಾಮದ ಸರ್ಕಾರಿ ಶಾಲೆಯ ಐವರು ಶಾಲಾ ಮಕ್ಕಳಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಂದು ಸಾಮೂಹಿಕ ಕೊವಿಡ್ ಪರೀಕ್ಷಾ ನಡೆಸಿದ ವೇಳೆ ಐವರು ಮಕ್ಕಳಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ.

ಸೋಂಕು ಕಾಣಿಸಿಕೊಂಡ ವೇಳೆ ಮಕ್ಕಳಲ್ಲಿ ಸಣ್ಣಪುಟ್ಟ ರೋಗ ಲಕ್ಷಣಗಳು ಕಂಡುಬಂದಿವೆ. ತಕ್ಷಣವೇ ಶಾಲಾ ಮಕ್ಕಳನ್ನು ತಾಲ್ಲೂಕು ಆಸ್ಪತ್ರೆಯಲ್ಲಿರುವ ಐಸೋಲೇಷನ್ ವಾರ್ಡ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಕ್ಕಳ ಸಂಪರ್ಕದಲ್ಲಿದ್ದವರನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿದ್ದಾರೆ.

ಹಳ್ಳಿಕೆರೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಮಾರ್ಗ ಸೂಚಿಗಳನ್ನು ತಪ್ಪದೆ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Dinakar-ಅಪ್ಪು ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್..!

Wed Dec 29 , 2021
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ ಎರಡು ತಿಂಗಳುಗಳಾಗಿವೆ. ಕಡೆಯದಾಗಿ ಜೇಮ್ಸ್ ಸಿನಿಮಾದಲ್ಲಿ ನಟಿಸಿದ್ದರು. ಜೇಮ್ಸ್ ನಂತರ ದಿನಕರ್ ತೂಗೂದೀಪ ಜೊತೆ ಸಿನಿಮಾ ಮಾಡಲು ಮುಂದಾಗಿದ್ದರು. ದಿನಕರ್ ಜೊತೆ ಒಂದೊಳ್ಳೆ ಸಿನಿಮಾ ಮಾಡಾಲು ರೆಡಿಯಾಗಿದ್ದ ಅಪ್ಪು ಸಿನಿಮಾ ಬಗ್ಗೆ ಎಲ್ಲಾ ವಿಷಯಗಳನ್ನು ಮತ್ತು ಯಾವ ರೀತಿಯಲ್ಲಿ ಮೂಡಿಬರಲಿದೆ, ಯಾರೇಲ್ಲಾ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ವಿಚಾರಗಳನ್ನು ದಿನಕರ್ ಜೊತೆ ಚರ್ಚಿಸಿದ್ದರು. ಈ ಕಾಂಬಿನೇಷನ್ ಸಿನಿಮಾವನ್ನು ಜಯಣ್ಣ-ಭೋಗಣ್ಣ ನಿರ್ಮಾಣಮಾಡಲು ಮುಂದಾಗಿದ್ದರು. ಈ […]

Advertisement

Wordpress Social Share Plugin powered by Ultimatelysocial