ದೇಶೀಯ ನಿರ್ಮಿತ 100 ಎಲ್ ಸಿಎ ಮಾರ್ಕ್ 1ಎಎಸ್ ಯುದ್ಧ ವಿಮಾನ ಖರೀದಿಸಲಿರುವ ವಾಯುಪಡೆ

ಹತ್ವದ ಘೋಷಣೆಯಲ್ಲಿ ದೇಶೀಯ ವಾಯುಪಡೆ ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐಎಎಫ್ 100 ದೇಶೀಯ ನಿರ್ಮಿತ ಎಲ್ ಸಿಎ ಮಾರ್ಕ್ 1ಎ ಫೈಟರ್ ಜೆಟ್ ಗಳನ್ನು ಖರೀದಿಸುವುದಾಗಿ ಹೇಳಿದೆ. ನವದೆಹಲಿ: ಮಹತ್ವದ ಘೋಷಣೆಯಲ್ಲಿ ದೇಶೀಯ ವಾಯುಪಡೆ ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐಎಎಫ್ 100 ದೇಶೀಯ ನಿರ್ಮಿತ ಎಲ್ ಸಿಎ ಮಾರ್ಕ್ 1ಎ ಫೈಟರ್ ಜೆಟ್ ಗಳನ್ನು ಖರೀದಿಸುವುದಾಗಿ ಹೇಳಿದೆ.
ಸ್ಪೇನ್ ನಲ್ಲಿ ಮೊದಲ ಸಿ-295 ಸೇನಾ ಸಾಗಣೆ ವಿಮಾನವನ್ನು ಸ್ವೀಕರಿಸಿ ಮಾತನಾಡಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿರುವ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರು ಈ ಘೋಷಣೆ ಮಾಡಿದ್ದಾರೆ. ವಾಯುಪಡೆಯಲ್ಲಿ ಮಿಗ್ ಸರಣಿಯ ವಿಮಾನಗಳ ಬದಲಿಗೆ ಬಳಕೆ ಮಾಡುವುದಕ್ಕಾಗಿ ಎಲ್ ಸಿಎಯನ್ನು ಅಭಿವೃದ್ಧಿಗೊಳಿಸಲಾಗಿತ್ತು. ಮಿಗ್ ಸರಣಿಯ ವಿಮಾನಗಳು ಹಳೆಯದಾಗುತ್ತಿದ್ದು, ನಮ್ಮ ಭತ್ತಳಿಕೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಲ್ ಸಿಎ ಶ್ರೇಣಿ ಯುದ್ಧವಿಮಾನಗಳು ಇರುವುದು ಅಗತ್ಯವಾಗಿದೆ. ಆದ್ದರಿಂದ, ನಾವು ಈಗಾಗಲೇ ಒಪ್ಪಂದ ಮಾಡಿಕೊಂಡಿರುವ 83 LCA ಮಾರ್ಕ್ 1A ಗಳನ್ನು ಹೊರತುಪಡಿಸಿ, ನಾವು ಸುಮಾರು 100 ವಿಮಾನಗಳ ಖರೀದಿಗೆ ಯೋಜಿಸುತ್ತಿದ್ದೇವೆ” ಎಂದು ಏರ್ ಚೀಫ್ ಮಾರ್ಷಲ್ ಚೌಧರಿ ಏರ್ಬಸ್ ವಿಮಾನ ತಯಾರಿಕಾ ಸೌಲಭ್ಯದಲ್ಲಿ ಎಎನ್‌ಐ ಗೆ ಹೇಳಿದ್ದಾರೆ.
Please follow and like us:

tmadmin

Leave a Reply

Your email address will not be published. Required fields are marked *

Next Post

ಏಷ್ಯಾಕಪ್​ನಲ್ಲಿ ಬಾಂಗ್ಲಾ ವಿರುದ್ಧ ಸೋಲು.. ಟೀಮ್​ ಇಂಡಿಯಾ ಕಳೆದುಕೊಂಡಿದ್ದೇನು?

Sat Sep 16 , 2023
ಈ ಬದಲಾವಣೆಯಿಂದ ತಂಡಕ್ಕೆ ಹೆಚ್ಚಿನ ಹೊಡೆತ ಆಗಿದೆ ಎಂದು ಹೇಳಲಾಗದು. ಆದರೆ ನಿನ್ನೆ ಪಂದ್ಯವನ್ನು ಗೆದ್ದಿದ್ದರೆ ಭಾರತ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಅಗ್ರಸ್ಥಾನದ ತಂಡವಾಗಿ ಹೊರಹೊಮ್ಮುತ್ತಿತ್ತು. ಈ ಸುವರ್ಣ ಅವಕಾಶ ತಂಡದ ಸೋಲಿನಿಂದಾಗಿ ಕೈತಪ್ಪಿದಂತಾಗಿದೆ. ಅಲ್ಲದೇ ನಿನ್ನೆ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಮಣಿಸಿದ್ದು, ಅಗ್ರಸ್ಥಾನಕ್ಕೇರಲು ಭಾರತಕ್ಕೆ ಸುಲಭ ಮಾರ್ಗದಂತಾಗಿತ್ತು. ಆದರೆ 6 ರನ್​ನ ಸೋಲು ನಂ.1 ಸ್ಥಾನವನ್ನು ಕಸಿದುಕೊಂಡಿತು. ಇತ್ತೀಚೆಗೆ ನವೀಕರಿಸಲಾದ ಏಕದಿನ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆ ಆಯಿತು. ಏಷ್ಯಾಕಪ್​ನಲ್ಲಿ […]

Advertisement

Wordpress Social Share Plugin powered by Ultimatelysocial