ಪತಿಯೊಂದಿಗಿನ ಜಗಳದಿಂದ ಬೇಸತ್ತು 65 ಕಿ.ಮೀ ಕಾಲ್ನಡಿಗೆಯಲ್ಲೇ ಬಂದ ಗರ್ಭಿಣಿ: ಮಗುವಿಗೆ ಜನ್ಮ

ತಿರುಪತಿ (ಆಂಧ್ರಪ್ರದೇಶ): ಕುಟುಂಬ ಅಂದ್ಮೇಲೆ ಜಗಳ‌, ನಂತರ ಒಂದಾಗೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಒಂಬತ್ತು ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಪತಿಯೊಂದಿಗೆ ಜಗಳವಾಡಿ ಬೇಸತ್ತು‌ ಎರಡು ದಿನಗಳ ಕಾಲ ನಿರಂತರವಾಗಿ 65 ಕಿಲೋಮೀಟರ್ ನಡೆದುಕೊಂಡು ಬಂದು ಕೊನೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.ವರ್ಷಿಣಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಈಕೆ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯ ವೈಎಸ್‌ಆರ್ ನಗರದವರಾಗಿದ್ದು, ಉದ್ಯೋಗಕ್ಕಾಗಿ ಪತಿಯೊಂದಿಗೆ ತಿರುಪತಿಗೆ ಬಂದಿದ್ದರು. ಇಬ್ಬರೂ ಕೂಲಿ ಕೆಲಸ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದರು. ಇವರಿಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತು ಗರ್ಭಿಣಿಯಾಗಿದ್ದ ವರ್ಷಿಣಿ 65 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತವರು ಮನೆಗೆ ತೆರಳಿದ್ದರು.

ಆದರೆ, ನಾಯ್ಡುಪೇಟೆ ಸಮೀಪಿಸುತ್ತಿದ್ದಂತೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಆಕೆಯ ಅವಸ್ಥೆ ನೋಡಿದ ವ್ಯಕ್ತಿಯೊಬ್ಬರು 108ಗೆ ಕರೆ ಮಾಡಿದ್ದು, ಸಿಬ್ಬಂದಿ ಬಂದು ನೋಡಿದಾಗ ವರ್ಷಿಣಿ ಅವರ ಸ್ಥಿತಿ ಗಂಭೀರವಾಗಿತ್ತು. ನಂತರ ಆಂಬ್ಯುಲೆನ್ಸ್‌ನಲ್ಲಿ ವರ್ಷಿಣಿ ಮಗುವಿಗೆ ಜನ್ಮ ನೀಡಿದ್ದಾಳೆ. ವರ್ಷಿಣಿ 2 ದಿನಗಳಿಂದ ಊಟ ಮಾಡದೇ ಇರದ ಕಾರಣ ಸುಸ್ತಾಗಿದ್ದು, ಕೂಡಲೇ ಆಕೆಯನ್ನು ನೆಲ್ಲೂರು ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ತಾಯಿ-ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮಗೆ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವ ಅಭ್ಯಾಸವಿದೆಯೇ..? ಹಾಗಾದ್ರೆ ಈ ಸ್ಟೋರಿ ನೋಡಿ

Mon May 16 , 2022
ನಿಮಗೂ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವ ಅಭ್ಯಾಸವಿದೆಯೇದೇಹವನ್ನು ಹೈಡ್ರೀಕರಿಸಿದಂತೆ ಮತ್ತು ರೋಗಗಳಿಂದ ರಕ್ಷಿಸಲು ನಾವು ಪ್ರತಿದಿನ ನೀರನ್ನು ಕುಡಿಯಬೇಕು. ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಸೇವಿಸಬೇಕು ಎಂದು ತಜ್ಞರು ನೀಡುವ ಸಲಹೆಯಾಗಿದೆ. ಇದರೊಂದಿಗೆ ಬೆಳಿಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವುದು ಪ್ರಯೋಜನಕಾರಿ ಎಂದು ಹೆಚ್ಚಿನ ಜನರ ನಂಬಿಕೆಯಾಗಿದೆ. ಹಾಗಾದರೆ ಇದರ ಹಿಂದಿನ ಸತ್ಯ ಏನು ಎಂದು ತಿಳಿಯೋಣ. ಬ್ರಷ್ ಇಲ್ಲದೆ ನೀರು ನಮ್ಮ ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? […]

Advertisement

Wordpress Social Share Plugin powered by Ultimatelysocial