ಬಿಜೆಪಿ ಇದೀಗ ಒಡೆದ ಮನೆಯಾಗಿದೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌

ಹುಬ್ಬಳ್ಳಿಬಿಜೆಪಿ ಒಡೆದ ಮನೆಯಾಗಿದ್ದು, ಹಾನಗಲ್  ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿಯನ್ನು ಹೊರ ಹಾಕಿ ಅಲ್ಲಿನ ಮುಖಂಡರು ಸಭೆ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಅಭ್ಯರ್ಥಿ ಬೇಡವಾಗಿದ್ದು, ಅವರನ್ನು ಸೋಲಿಸಲು ಜನರೇ ಮುಂದಾಗಿದ್ದಾರೆ ಉಪ ಚುನಾವಣೆಯನ್ನು ಪ್ರತಿಯೊಬ್ಬ ನಾಯಕರು ಮಾಡು ಇಲ್ಲವೇ ಮಡಿ ಎಂದು ನಿರ್ಧರಿಸಿ ಪ್ರಾಮಾಣಿಕವಾಗಿ ಚುನಾವಣೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ಕಾಂಗ್ರೆಸ್ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಗಾಗಿ 20 ದಿನ ಮೀಸಲಿಡುವ ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ನಾಯಕರಿಗೆ ಮಾತ್ರ ಜವಬ್ದಾರಿ ನೀಡುವಂತೆ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ ಅವರು ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿನ ಕಾರ್ಯಕರ್ತರ, ಜನರು ಉತ್ಸಾಹ ನೋಡಿದರೆ ಚುನಾವಣೆ ಇಮ್ಮಡಿಗೊಳಿಸಿದೆ. ನಾಯಕರಿಂದ ವಿನಾಕಾರಣ ಸುತ್ತದೆ ಪ್ರಾಮಾಣಿಕವಾಗಿ ಮತಯಾಚಿಸಬೇಕು ಎಂದು ಹೇಳಿದರು.

ಮಾಚಿ ಸಚಿವ ಹೆಚ್‌ .ಕೆ.ಪಾಟೀಲ ನೇತೃತ್ವದಲ್ಲಿ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಜನರು ಬಿಜೆಪಿ ಸೋಲಿಸಲು ಮುಂದಾಗಿದ್ದಾರೆ. ಇದು ಮುಖ್ಯಮಂತ್ರಿಗಳ ಕ್ಷೇತ್ರ ಗೆಲವು ಸಾಧ್ಯವೋ ಎನ್ನುವ ಆಂತಕ ಬೇಡ. ಬಿಜೆಪಿ ಇದೀಗ ಒಡೆದ ಮನೆಯಾಗಿದೆ. ಜವಾಬ್ದಾರಿ ಪಡೆದವರು ತಮ್ಮ ಸ್ವಂತ ಖರ್ಚಿನಲ್ಲೇ ಚುನಾವಣೆ ಮಾಡಬೇಕು. ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಪಕ್ಷ ಗಮನಿಸುತ್ತದೆ. ವಿನಯ ಕುಲಕರ್ಣಿ ಅವರಿಗೂ ಜವಾಬ್ದಾರಿ ನೀಡಲಾಗುವುದು. ಆಕಾಂಕ್ಷಿಯಾಗಿದ್ದ ಮನೋಹರ ತಹಶೀಲ್ದಾರ್ಅವರಿಗೆ ಪಕ್ಷ ದೊಡ್ಡ ಜವಾಬ್ದಾರಿ ನೀಡಲಿದೆ.

ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಎಸ್‌. ಆರ್‌.ಪಾಟೀಲ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಸವಾಲಾಗಿ ಸ್ವೀಕರಿಸಿದ್ದಾರೆಂದು ಹೇಳುತ್ತಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಕೇಂದ್ರದ ಎಲ್ಲಾ ಸಚಿವರಿದ್ದರೂ ಮಮತಾ ಬ್ಯಾನರ್ಜಿ ಮುಂದೆ ಏನೂ ನಡೆಯಲಿಲ್ಲ. ಹಾನಗಲ್ಲ, ಸಿಂದಗಿ ಎರಡು ಕ್ಷೇತ್ರದಲ್ಲಿ ಗೆಲುವು ನಿಶ್ಚಿತವಾಗಿದೆ. ಎಫ್ಐಆರ್ಇಲ್ಲದೆ 48 ಗಂಟೆಗಳ ಕಾಲ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಹಿಂದೆ ಇಂದಿರಾ ಗಾಂಧಿಯವರನ್ನು ಅಂದಿನ ಸರಕಾರ ಬಂಧಿಸಿತ್ತು. ನಂತರ ಪಕ್ಷದ ಅಧಿಕಾರಕ್ಕೆ ಬಂದಿತ್ತು. ಹಿಂದಿನ ಘಟನೆ ಇದೀಗ ಪುನರಾವರ್ತನೆಯಾಗಿದ್ದು, ಇತಿಹಾಸ ಮರುಕಳಿಸಲಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಮುಂದಿನ ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಎರಡು ಹೋಳಾಗಲಿದೆ;ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ

Fri Oct 8 , 2021
 ಮುಂದಿನ ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಎರಡು ಹೋಳಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಸಿಂಧಗಿ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಈಶ್ವರಪ್ಪ ಸಚಿವ  ಕೆ ಸ್‌ ಈಶ್ವರಪ್ಪ  ಈವರೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಾನು ಸಿಎಂ ನಾನು ಸಿಎಂ ಎನ್ನುತ್ತಿದ್ದರು. ಒಬ್ಬರು ಎಡಕ್ಕೆ ಎಳೆದರೆ, ಇನ್ನೊಬ್ಬರು ಬಲಕ್ಕೆ ಎಳೆಯುತ್ತಾರೆ. ಇದೀಗ ಅನಿವಾರ್ಯವಾಗಿ ಒಂದಾಗಿದ್ದಾರೆ ಎಂದು ವ್ಯಂಗ್ಯ […]

Advertisement

Wordpress Social Share Plugin powered by Ultimatelysocial