ಭರ್ಜರಿ 25 ದಿನಗಳ ಬ್ಯಾಟಿಂಗ್‌ ಪೂರೈಸಿದ ಲಂಕೆ – ಅಭಿಮಾನಿಗಳ ಮನಕದ್ದ ಲೂಸ್‌ ಮಾದ ಯೋಗಿ

ಲಾಕ್‌ ಡೌನ್‌ ನಿಂದ ಬೇಸತ್ತು ಮನೆಲ್ಲಿ ಕೂತು ಕೂತು ಬೇಸರಗೊಂಡಿದ್ದ ಸಿನಿಪ್ರೀಯರಿಗೆ ಸಿನಿಮಾಗಳು ರಿಲೀಸ್‌ ಆಗಲು ತಯಾರಾಗಿದ್ದಾವೆ ಎಂದು ತಿಳಿದಿದೆ ತಡ ಚಿತ್ರಗಳು  ಬಿಡುಗಡೆಯಾದ ಮೊದಲನೇಯ ದಿನವೇ ಥೀಯೇಟರ್‌ ಫುಲ್‌ ಜಿಗಿ ಜಿಗಿ. ಒಂದ್‌ ಕಡೆ ಕೊರೊನಾ ಹಾವಳಿ ,ಮತ್ತೊಂದು ಕಡೆ 50% ಪ್ರೇಕ್ಷಕರಿಗಷ್ಟೇ ಅನುಮತಿ ಎಲ್ಲವನ್ನು ಸರಿಸಮಾನವಾಗಿ ತೂಗಿಸಬೇಕಾದ ಪರಿಸ್ಥಿತಿ ಸಿನಿಮಾ ತಂಡದ ಮೇಲಿತ್ತು. ಜೀವದ ಭಯ ಯಾರಿಗೆ ಇರೊಲ್ಲಾ ಹೇಳಿ ಸಿನಿಮಾ ಏನು ,ಬದುಕಿದ್ರೆ ನಾಳೆನೂ ನೋಡಬಹುದು ಅನ್ನೋ ಜನ ಕೂಡ ಇದ್ರು. ಇದರ ನಡುವೆ ಲೂಸ್ ಮಾದ ಯೋಗೀಶ್ ಅಭಿನಯದ ‘ಲಂಕೆ’ ಚಿತ್ರ  ಈ ಎಲ್ಲಾ ಪ್ರಶ್ನೆಗಳಿಗೂ ಬ್ರೇಕ್ ಹಾಕಿದೆ. ಪ್ರೇಕ್ಷಕರನ್ನ ಥಿಯೇಟರ್ ಕಡೆಗೆ ಕರೆದುಕೊಂಡು ಬರುವಲ್ಲಿ ಭರ್ಜರಿ ಯಶಸು ಕಂಡಿದೆ.

ಹೌದು ಲಂಕೆ ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಅದೇ ಖುಷಿಯಲ್ಲಿ ಮುನ್ನುಗ್ಗುತ್ತಿದೆ. 25 ದಿನ ಯಾವುದೇ ಚಿತ್ರ ಒಡಿದ್ರು ಅದು ಸಂತಸದ ವಿಷಯ. ಅದು ಈಗಿನ ಅಪ್ಡೇಟೆಡ್‌ ದುನಿಯಾದಲ್ಲಿ ಪೈರಸಿ ಇಲ್ಲದೇ ಸಿನಿಮಾ ಬಿಡುಗಡೆ ಮಾಡೊದು ಮತ್ತು ಚಿತ್ರ ರಿಲೀಸ್‌ ಆದ ಮೇಲೂ ಪೈರಸಿ ತಡೆಹಿಡಿಯೊದು ತೆಲೆಬಿಸಿ ಕೆಲಸವೇ ಸರಿ. ಅದಲ್ಲದೇ ಲೂಸ್‌ ಮಾದ ಯೋಗಿ ಪ್ಲಾಪ್‌ ಸಿನಿಮಾಗಳ ನಂತರ ಲಂಕೆ ಚಿತ್ರದಲ್ಲಿ ಧೂಳ್‌ ಎಬ್ಬಿಸುತ್ತಾರೆ ಎಂಬ ಕುತೂಹಲಕ್ಕೆ ಇದೀಗ ಸಿನಿಮಾ 25 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಮುಂದೆ ಸಾಗುತ್ತಿದೆ.

ಈ ಚಿತ್ರದಲ್ಲಿ ಲೂಸ್ ಮಾದ ಯೋಗಿಯ ಯುನಿಕ್ ಲುಕ್, ಮ್ಯಾನರಿಸಂ, ಆಕ್ಷನ್ ಸೀನ್ ಗಳಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ .ಹೀಗಾಗಿ ಸಿನಿಮಾ ಗೆಲಲ್ಲು ಕಾರಣ ಎನ್ನಬಹುದು . ಈ ಸಂಗತಿ  ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಈ ಬಗ್ಗೆ ಚಿತ್ರತಂಡ ಕೂಡ ತಮ್ಮ ಸಂತಸವನ್ನು ಸುದ್ದಿಗೋಷ್ಠಿಯಲ್ಲಿ ಮನತುಂಬಿ ಹೊರ ಹಾಕಿದ್ದಾರೆ .ಚಿತ್ರದಲ್ಲಿ ಸಂಚಾರಿ ವಿಜಯ್ ಕೂಡ ವಿಶೇಷ ಗಮನ ಸೆಳೆಯುತ್ತಾರೆ. ದಶಕಗಳ ಹಿಂದೆ ನಡೆದ ನೈಜ ಘಟನೆಯ ಪಾತ್ರವೊಂದಕ್ಕೆ ವಿಜಯ್ ಜೀವ ತುಂಬಿದ್ದು  ಅವರಿಲ್ಲದಿರುವಿಕೆ ಪ್ರೇಕ್ಷಕರ ಮನಸ್ಸಿಗೆ ತೀರಾ ನೋವುಂಟು ಮಾಡಿದೆ.

‘ಲಂಕೆ’ ಚಿತ್ರ ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. 50 ದಿನಗಳತ್ತ ಮುನ್ನುಗ್ಗುತ್ತಿರುವ ಕನ್ನಡದ ‘ಲಂಕೆ’ಗೆ ನಮ್ಮದು ಒಂದು ಇರ್ಲಿ ಅಂತ  ಆಲ್ ದಿ ಬೆಸ್ಟ್.

Please follow and like us:

Leave a Reply

Your email address will not be published. Required fields are marked *

Next Post

ವರುಣನ ಅಬ್ಬರಕ್ಕೆ ರೈತ ಬೆಳೆದ ಬೆಳೆ ಸರ್ವನಾಶ...!

Tue Oct 5 , 2021
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹುಂಡಿಯಲ್ಲಿ ಗ್ರಾಮದಲ್ಲಿ ಅಪಾರವಾದ ಬಾಳೆಗಿಡ ನಾಶವಾಗಿದೆ. ಗುರುಸ್ವಾಮಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಎರಡೂವರೆ ಎಕರೆಯ ಬಾಳೆಗಿಡ ಕಟಾವಿಗೆ ಬಂದಿದ್ದು.ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಆಗಿದೆ….ಸರ್ವೆ ನಂಬರ್ 161 /4 ರಲ್ಲಿ ಬೆಳೆದು ಬಾಳೆಗೊನೆ ಕೇರಳಕ್ಕೆ ಮಾರಾಟ ಮಾಡುತ್ತಿದ್ದ ರೈತ ಗುರುಸ್ವಾಮಪ್ಪ.ಕೊರೊನಾ ಸಮಯದಲ್ಲಿ ಅಪಾರ ನಷ್ಟವನ್ನು ಅನುಭವಿಸಿ ಆರ್ಥಿಕವಾಗಿ ಮೇಲೆತ್ತುವ ಸಂದರ್ಭದಲ್ಲಿ .ಗಾಳಿ ಮಳೆಗೆ […]

Advertisement

Wordpress Social Share Plugin powered by Ultimatelysocial