ಮಾಳವಿಕಾ ಅವಿನಾಶ್‌ ಬರ್ತ್ ಡೇ ಸಂಭ್ರಮ

 

ಮಾಳವಿಕಾ ಅವಿನಾಶ್ (Malavika Avinash) ಕನ್ನಡ ಚಿತ್ರರಂಗ (Sandalwood) ಕಂಡ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು. ಬಾಲ ನಟಿಯಾಗಿ, ನಾಯಕ ನಟಿಯಾಗಿ ಬಳಿಕ ಪೋಷಕ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ನೆನಪಿನಲ್ಲುಳಿಯುವ ಪಾತ್ರ ಮಾಡಿದವರು ಮಾಳವಿಕಾ. ಬರೀ ಸಿನಿಮಾಗಳಲ್ಲಷ್ಟೇ ಅಲ್ಲ, ಕಿರುತೆರೆಯಲ್ಲೂ ತಮ್ಮ ಛಾವು ಮೂಡಿಸಿದವರು.
ಧಾರಾವಾಹಿಗಳಲ್ಲಿ ನಟಿಯಾಗಿ, ರಿಯಾಲಿಟಿ ಶೋಗಳ (Reality Show) ಜಡ್ಜ್ ಆಗಿ. ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ ‘ಬಿಗ್‌ ಬಾಸ್‌’ನ (Big Boss) ಸ್ಪರ್ಧಿಯಾಗಿ ಮಾಳವಿಕಾ ಕನ್ನಡಿಗರ ಮನೆ-ಮನವನ್ನು ತಲುಪಿದವರು. ರಾಜಕಾರಣಿಯಾಗಿ (Politician) ತಮ್ಮದೇ ಛಾಪು ಮೂಡಿಸಿದವರು. ಕನ್ನಡದ ಜನಪ್ರಿಯ ಪತ್ರಿಕೆಗಳ ಅಂಕಣಕಾರ್ತಿಯಾಗಿಯೂ ಓದುಗರನ್ನು ತಲುಪಿದವರು. ಕನ್ನಡದಲ್ಲಷ್ಟೇ ಅಲ್ಲ ತಮಿಳು ಹಾಗೂ ಮಲಯಾಳಂ ಸಿನಿಮಾ, ಧಾರಾವಾಹಿಗಳಲ್ಲೂ ಮಾಳವಿಕಾ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಇಂತಹ ಪ್ರತಿಭಾನ್ವಿತ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಮಾಳವಿಕಾ ಅವಿನಾಶ್‌ಗೆ ಶುಭಾಶಯಗಳ ಮಹಾಪೂರ

45 ವರ್ಷಗಳನ್ನು ಕಳೆದಿರುವ ಮಾಳವಿಕಾ, ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟಿ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿರೋ ಮಾಳವಿಕಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಖ್ಯಾತ ಪೋಷಕ ನಟರೂ ಆಗಿರುವ ಪತಿ ಅವಿನಾಶ್ ಪತ್ನಿಗೆ ಶುಭಕೋರಿದ್ದಾರೆ. ನಟಿಯರಾದ ಶ್ರುತಿ, ಸುಧಾರಾಣಿ ಸೇರಿದಂತೆ ಚಿತ್ರರಂಗದ ಸ್ನೇಹಿತೆಯರು, ಸಿನಿರಂಗದ ಗಣ್ಯರು, ರಾಜಕಾರಣಿಗಳು, ಬಿಜೆಪಿ ನಾಯಕರು ಹಾರೈಸಿದ್ದಾರೆ. ಜೊತೆಗೆ ಅಭಿಮಾನಿಗಳೂ ಸಹ ತಮ್ಮ ನೆಚ್ಚಿನ ನಟಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.

ತಮಿಳು ಮೂಲ, ಬೆಳೆಸಿದ್ದು ಕನ್ನಡದ ನೆಲ

ಮಾಳವಿಕಾ ಅವರು 28 ಜನವರಿ 1976 ರಂದು ತಮಿಳು ಮೂಲದ ಕುಟುಂಬದಲ್ಲಿ ಜನಿಸಿದರು. ತಂದೆ ಗಣೇಶನ್ ಬ್ಯಾಂಕ್‌ನಲ್ಲಿ ಕೆಲಸ ಮಾಡ್ತಿದ್ರೆ, ತಾಯಿ ಸಾವಿತ್ರಿ ಗಾಯಕಿ ಮತ್ತು ನೃತ್ಯಗಾರ್ತಿಯಾಗಿದ್ದರು. ಹೀಗಾಗಿ ಕಲೆ, ಸಾಹಿತ್ಯ, ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಮಾಳವಿಕಾ, ಚಿಕ್ಕ ವಯಸ್ಸಲ್ಲಿ ಕಲೆಯಲ್ಲಿ ಸಾಧನೆ ಮಾಡಿದವರು.

ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶ
ಒಮ್ಮೆ ಕೃಷ್ಣನ ವೇಷತೊಟ್ಟು ನೃತ್ಯ ಪ್ರದರ್ಶನ ಮಾಡಿದ ಮಾಳವಿಕಾರನ್ನು ಖ್ಯಾತ ನಿರ್ದೇಶಕ ಜಿ.ವಿ.ಅಯ್ಯರ್ ಗುರುತಿಸಿದ್ರು. ಬಳಿಕ ತಮ್ಮ ಕೃಷ್ಣಾವತಾರ ಸಿನಿಮಾದಲ್ಲಿ ಕೃಷ್ಣನ ಪಾತ್ರ ನೀಡಿದರು. ಅಲ್ಲಿಂದ ಮಾಳವಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಮತ್ತೊಂದೆಡೆ ವಿದ್ಯಾಭ್ಯಾಸ ಮುಂದುವರೆಸಿ, ಕಾನೂನು ಪದವಿಯನ್ನೂ ಪಡೆದರು.

ನಟಿಯಾಗಿ ಬಡ್ತಿ, ಪೋಷಕ ನಟಿಯಾಗಿಯೂ ಹೆಜ್ಜೆ ಗುರುತು

ಬಾಲನಟಿಯಾಗಿ ಗುರುತಿಸಿಕೊಂಡ ಮಾಳವಿಕಾ ಬಹುಬೇಗನೆ ನಾಯಕಿ ಸ್ಥಾನಕ್ಕೆ ಬಡ್ತಿ ಪಡೆದರು. ರವಿತೇಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಿರೋಯಿನ್ ಆದ್ರು. ಬರೀ ಕನ್ನಡ ಸಿನಿಮಾದಲ್ಲಷ್ಟೇ ಅಲ್ಲದೇ, ಮಲಯಾಳಂ, ತಮಿಳು ಸಿನಿಮಾಗಳಲ್ಲೂ ನಾಯಕಿ ಸ್ಥಾನ ಪಡೆದರು. ಅದಾದ ಮೇಲೆ ಸ್ವಲ್ಪ ಸಮಯದ ನಂತರ ಪೋಷಕ ನಟಿಯಾಗಿಯೂ ನಟಿಸಿದರು. ಸೈನೈಡ್, ಮಿಸ್ಟರ್ ಆಯಂಡ್ ಮಿಸೆಸ್ ರಾಮಾಚಾರಿ, ಕೆಜೆಎಫ್-1 ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ, ಪಾತ್ರಕ್ಕೆ ಜೀವ ತುಂಬಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬರೋಬ್ಬರಿ 6 ತಿಂಗಳ ಹೋರಾಟದ ಬಳಿಕ ಕೊರೊನಾ ಗೆದ್ದ ಅರಬ್​ ರಾಷ್ಟ್ರದ ಭಾರತೀಯ ಮುಂಚೂಣಿ ಸಿಬ್ಬಂದಿ..!

Fri Jan 28 , 2022
ಅರಬ್​ ರಾಷ್ಟ್ರದಲ್ಲಿದ್ದ 38 ವರ್ಷದ ಭಾರತೀಯ ಮುಂಚೂಣಿ ಸಿಬ್ಬಂದಿ ಕೊನೆಗೂ ಕೋವಿಡ್​ 19 ಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್​ 19 ಸೋಂಕಿಗೆ ಒಳಗಾಗಿದ್ದ ಇವರಿಗೆ ಶ್ವಾಸಕೋಶವು ಗಂಭೀರವಾಗಿ ಹಾನಿಗೊಳಗಾಗಿತ್ತು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial