ಮುಕೇಶ್‌ ಅಂಬಾನಿಗೆ ಮತ್ತೆ ಭಾರತದ ನಂ 1 ಶ್ರೀಮಂತ ಪಟ್ಟ..!

ನವದೆಹಲಿ: ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಪ್ರತಿಷ್ಠಿತ ನಿಯತಕಾಲಿಕ ಫೋಬ್ರ್ಸ್ ಪತ್ರಿಕೆಯು ಪ್ರಕಟಿಸಿದ್ದು, ರಿಯಾಲೆನ್ಸ್ ಸಂಸ್ಥೆಯ ಮಾಲೀಕ ಮುಕೇಶ್ ಅಂಬಾನಿ ಅವರು ದೇಶದ ನಂಬರ್ 1 ಶ್ರೀಮಂತರಾಗಿ ಮುಂದುರೆದಿದ್ದಾರೆ. ಕಳೆದ 14 ವರ್ಷದಿಂದಲೂ ಫೋಬ್ರ್ಸ್ ಪಟ್ಟಿಯಲ್ಲಿ ನಂಬರ್ 1 ಶ್ರೀಮಂತರಾಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿ ಕಳೆದ ವರ್ಷದಲ್ಲಿ ತಮ್ಮ ಗಳಿಕೆಯನ್ನು 4 ಬಿಲಿಯನ್ ಡಾಲರ್ಗೆ ಏರಿಸಿಕೊಳ್ಳುವ ಮೂಲಕ ಒಟ್ಟಾರೆ 92.7 ಮಿಲಿಯನ್ ಡಾಲರ್ ಒಡೆಯರಾಗಿದ್ದಾರೆ.

ಭಾರತದ ಟಾಪ್ 10 ಶ್ರೀಮಂತರ ಪಟ್ಟಿ :

1) ಮುಕೇಶ್ ಅಂಬಾನಿ ( 92.7 ಬಿಲಿಯನ್ ಡಾಲರ್), 2) ಗೌತಮ್ ಅದಾನಿ ( 74.8 ಬಿಲಿಯನ್ ಡಾಲರ್), 3)ಶಿವಾನಾಡರ್ ( 31 ಬಿಲಿಯನ್ ಡಾಲರ್), 4) ರಾಧಾಕೃಷ್ಣನ್ ಧಾಮಾನಿ ( 29.4 ಬಿಲಿಯನ್ ಡಾಲರ್), 5) ಕ್ಯುರಸ್ ಪೊನ್ನವಾಲಾ ( 19ಬಿಲಿಯನ್ ಡಾಲರ್), 6) ಲಕ್ಷ್ಮೀಮಿತ್ತಲ್ (18.8ಬಿಲಿಯನ್ ಡಾಲರ್), 7) ಸಾವಿತ್ರಿ ಜಿಂದಾಲ್ ( 18ಬಿಲಿಯನ್ ಡಾಲರ್), ಉದಯ್ ಕೊಟಕ್ ( 16.5 ಬಿಲಿಯನ್ ಡಾಲರ್), 9) ಪಾಲ್ನೋನ್ಜಿ ಮಿಸ್ತ್ರಿ ( 16.4 ಬಿಲಿಯನ್ ಡಾಲರ್), 10) ಕುಮಾರ್ ಬಿರ್ಲಾ ( 15.8 ಬಿಲಿಯನ್ ಡಾಲರ್).

 

Please follow and like us:

Leave a Reply

Your email address will not be published. Required fields are marked *

Next Post

BSY ಆಪ್ತನ ಮನೆ ಮೇಲೆ ಐಟಿ ದಾಳಿಗೆ ಯಡಿಯೂರಪ್ಪನವರ ಮೊದಲ ಪ್ರತಿಕ್ರಿಯೆ;

Thu Oct 7 , 2021
ಶಿವಮೊಗ್ಗ: ಆಪ್ತ ಸಹಾಯಕನಾಗಿದ್ದ ಉಮೇಶ್ ನಿವಾಸ, ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ವಿಚಾರಕ್ಕೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ನವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇ ತಪ್ಪು ಮಾಡಿದರೂ ಐಟಿ ಅಧಿಕಾರಿಗಳು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಶಿವಮೊಗ್ಗದ ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ತಪ್ಪು ಯಾರೇ ಮಾಡಿದ್ದರೂ ಐಟಿ ಅಧಿಕಾರಿಗಳು ಯಾರನ್ನೂ ಬಿಡಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಉಮೇಶ್ ನಾನು ಸಿಎಂ ಆಗಿದ್ದಾಗಲೂ ಆಪ್ತ ಸಹಾಯಕನಾಗಿ […]

Advertisement

Wordpress Social Share Plugin powered by Ultimatelysocial