ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

 

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕುರಿತಂತೆ ಜಾಹೀರಾತು ನೀಡಿರುವಂತ ಬಿಎಂಆರ್ ಸಿಎಲ್, ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಸಿಸ್ಟಂ, ಓ ಆಂಡ್ ಎಂ ವಿಭಾಗದಲ್ಲಿ ಅಭಿಯಂತರರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಹ ಮತ್ತು ಅನಿಭವಿ ನಿವೃತ್ತ ಸಿಬಂದಿಗಳಿಂದ ಅರ್ಜಿ ಆಹ್ವಾನಿಸಿರೋದಾಗಿ ತಿಳಿಸಿದೆ.

ಹುದ್ದೆಗಳ ವಿವರ

  1. ಉಪ ಮುಖ್ಯ ಅಭಿಯಂತರರು, ಉಪ ಪ್ರಧಾನ ವ್ಯವಸ್ಥಾಪಕರು – 07 ಹುದ್ದೆಗಳು
  2. ಕಾರ್ಯನಿರ್ವಹಾಕ ಅಭಿಯಂತರರು, ವ್ಯವಸ್ಥಾಪಕರು – 03 ಹುದ್ದೆಗಳು
  3. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ವ್ಯವಸ್ಥಾಪಕರು – 04 ಹುದ್ದೆಗಳು.

ಒಟ್ಟು 14 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 21-03-2023 ಕೊನೆಯ ದಿನಾಂಕವಾಗಿದೆ. ಅದಕ್ಕೆ ಬೇಕಾಗಿರುವ ದಾಖಲೆಗಳೊಂದಿಗೆ ಸಹಿ ಮಾಡಿದ ಪ್ರತಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 25-03-2023 ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.bmrc.co.in/careereSection ಗೆ ಭೇಟಿ ನೀಡಿ ಪಡೆಯಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ಕಟ ರಾಶಿ ಭವಿಷ್ಯ.

Thu Feb 23 , 2023
ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಆರ್ಥಿಕವಾಗಿ ಇಂದು ನೀವು ಸಾಕಷ್ಟು ಬಲವಾಗಿ ಕಾಣುವಿರಿ, ಗ್ರಹ ಮತ್ತು ನಕ್ಷತ್ರಗಳ ಚಲನೆಯಿಂದ ಇಂದು ನಿಮಗಾಗಿ ಹಣವನ್ನು ಸಂಪಾದಿಸುವ ಅನೇಕ ಅವಕಾಶಗಳು ಉಂಟಾಗುತ್ತವೆ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಂಡು ನೀವು ಒಳೆಯದನ್ನು ಅನುಭವಿಸಬಹುದು ಆದರೆ ಕೊಲವೊಮ್ಮೆ ನೀವು ನಿಮ್ಮ ಅಹಂಕಾರವನ್ನು ಮುಂದೆ ಇಟ್ಟುಕೊಂಡು ಕುಟುಂಬ ಸದಸ್ಯರಿಗೆ ಪ್ರಮುಖ ವಿಷಯಗಳನ್ನು ಹೇಳುವುದಿಲ್ಲ. ನೀವು ಹಾಗೆ ಮಾಡಬಾರದು. ಅದನ್ನು ತೊಂದರೆ ಇನ್ನಷ್ಟು ಹೆಚ್ಚಾಗುತ್ತದೆ ಕಡಿಮೆಯಾಗುವುದಿಲ್ಲ. ಇಂದು […]

Advertisement

Wordpress Social Share Plugin powered by Ultimatelysocial