ಮೈಸೂರು: ಸೋಮವಾರದಿಂದ ಶಾಲೆಗಳು ಪುನರಾರಂಭ|Mysore |

ಮೈಸೂರು: ಮೈಸೂರು ನಗರ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಜ.24 ರಿಂದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪುನರಾರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಶನಿವಾರ ಆದೇಶ ಹೊರಡಿಸಿದ್ದು, ‘ತಾಲ್ಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಮತ್ತು ವಸತಿ ಶಾಲೆಗಳಲ್ಲಿ ಸೋಮವಾರದಿಂದ (ಜ.24) 1 ರಿಂದ 9ನೇ ತರಗತಿಯವರೆಗೆ ಎಂದಿನಂತೆ ಭೌತಿಕ ತರಗತಿಗಳು ನಡೆಯಲಿವೆ’ ಎಂದು ತಿಳಿಸಿದ್ದಾರೆ.

ಮಕ್ಕಳಲ್ಲಿ ಕೋವಿಡ್‌ ಸೋಂಕು ಹರಡುವುದನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಮೈಸೂರು ತಾ‌ಲ್ಲೂಕಿನಲ್ಲಿ 1ರಿಂದ 9ನೇ ತರಗತಿಯವರೆಗೆ ಶಾಲೆಗಳನ್ನು ಜ.12 ರಿಂದ ಬಂದ್‌ ಮಾಡಲಾಗಿತ್ತು. ಆನ್‌ಲೈನ್‌ ತರಗತಿಗಳು ಮಾತ್ರ ನಡೆಯುತ್ತಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಶಾಂತ್ ಸಿಂಗ್ ರಜಪೂತ್ ಸಹಿ ಮಾಡಿದ ಚಿತ್ರದಲ್ಲಿ ಕೆಲಸ ಮಾಡಲು ರೂಮಿ ಜಾಫರಿ;

Sat Jan 22 , 2022
ಸುಶಾಂತ್ ಸಿಂಗ್ ರಜಪೂತ್ ಮೇ 2020 ರಲ್ಲಿ ರೂಮಿ ಜಾಫರಿ ಅವರ ಚಲನಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಬೇಕಿತ್ತು. ಆದರೆ ದುರದೃಷ್ಟವಶಾತ್ COVID-19 ಸಂಭವಿಸಿತು ಮತ್ತು ನಂತರ ನಟನು ತನ್ನ ಸ್ವರ್ಗೀಯ ವಾಸಸ್ಥಾನಕ್ಕೆ ಹೋದನು, ಅದನ್ನು ತುಂಬಲು ಸಾಧ್ಯವಿಲ್ಲ. ನಟನ ನಿಧನದ ನಂತರ, ಸುಶಾಂತ್ ಅವರ ನೆಚ್ಚಿನ ಸ್ಕ್ರಿಪ್ಟ್ ಅನ್ನು ಮುಂದುವರಿಸದಿರಲು ರೂಮಿ ನಿರ್ಧರಿಸಿದ್ದರು, ಏಕೆಂದರೆ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ ಚಲನಚಿತ್ರ ನಿರ್ಮಾಪಕರು ಈಗ ಅದನ್ನು 2022 ರಲ್ಲಿ ಪುನರುಜ್ಜೀವನಗೊಳಿಸಲು […]

Advertisement

Wordpress Social Share Plugin powered by Ultimatelysocial