SANDALWOOD:’ಬಡವ ರಾಸ್ಕಲ್’ ಸಿನಿಮಾ ಧನಂಜಯ್ ಹೇಳಿದ್ದೇನು?

ಡಾಲಿ ಧನಂಜಯ್ ನಟಿಸಿ ಮೊದಲ ಬಾರಿಗೆ ನಿರ್ಮಾಣ ಸಹ ಮಾಡಿರುವ ‘ಬಡವ ರಾಸ್ಕಲ್’ ಸಿನಿಮಾ ಡಿಸೆಂಬರ್ 24 ರಂದು ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ಬಿಡುಗಡೆ ಆದಾಗಿನಿಂದಲೂ ಬಿಡುವಿಲ್ಲದೆ ರಾಜ್ಯದ ಹಲವು ಜಿಲ್ಲೆ, ತಾಲ್ಲೂಕುಗಳನ್ನು ಸುತ್ತಿರುವ ಡಾಲಿ ಧನಂಜಯ್ ‘ಬಡವ ರಾಸ್ಕಲ್’ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳ ಬಳಿ ಹೋಗಿ ಪ್ರೇಕ್ಷಕರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ, ಸಿನಿಮಾಕ್ಕೆ ಹೆಚ್ಚಿನ ಪ್ರಚಾರ ನೀಡಿದ್ದಾರೆ.

ಡಾಲಿ ಧನಂಜಯ್ ಹಾಗೂ ತಂಡದ ಶ್ರಮದಿಂದ ‘ಬಡವ ರಾಸ್ಕಲ್’ ಸಿನಿಮಾ ಹಿಟ್ ಆಗಿದೆ. ಸಿನಿಮಾವು ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯಲು ಯಶಸ್ವಿಯಾಗಿದೆ ಎನ್ನಲಾಗುತ್ತಿದೆ. ಜೊತೆಗೆ ‘ಬಡವ ರಾಸ್ಕಲ್’ ಸಿನಿಮಾ ದೊಡ್ಡ ಮೊತ್ತದ ಹಣ ಗಳಿಸಿದೆ ಎನ್ನಲಾಗುತ್ತಿದೆ. ಗಾಂಧಿ ನಗರದಲ್ಲಿ ಅಂತೂ ಡಾಲಿಯ ಮೊದಲ ನಿರ್ಮಾಣದ ಸಿನಿಮಾ 15 ಕೋಟಿ ಹಣ ಗಳಿಸಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ನಿರ್ಮಾಪಕ, ನಟ ಡಾಲಿ ಅವರೇ ಮಾತನಾಡಿದ್ದಾರೆ.

ಮಾಧ್ಯಮದೊಟ್ಟಿಗೆ ಮಾತನಾಡಿರುವ ಡಾಲಿ ಧನಂಜಯ್, ”ಬಡವ ರಾಸ್ಕಲ್’ ಸಿನಿಮಾ ಅಷ್ಟೋಂದೆಲ್ಲ ಗಳಿಕೆ ಮಾಡಿದೆ ಎನಿಸೋದಿಲ್ಲ. ಹಾಗೇನಾದರೂ 15 ಕೋಟಿ ಗಳಿಸಿದ್ದಿದ್ದರೆ ನಾನು ಹೆಲಿಕಾಪ್ಟರ್‌ನಲ್ಲಿ ರಾಜ್ಯ ಪ್ರವಾಸ ಮಾಡಿ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿರುತ್ತಿದೆ. ಆದರೆ ಸಿನಿಮಾ ಸೇಫ್ ಆಗಿದೆ, ಇಂಥ ಇನ್ನಷ್ಟು ಹೆಜ್ಜೆಗಳನ್ನು ಇಡಲು ಧೈರ್ಯವನ್ನು ಪ್ರೇಕ್ಷಕರು ನೀಡಿದ್ದಾರೆ” ಎಂದಿದ್ದಾರೆ.

ಕಲೆಕ್ಷನ್‌ ಬಗ್ಗೆ ಪೂರ್ಣ ಮಾಹಿತಿ ಇಲ್ಲ: ಡಾಲಿ
”ನಿಜ ಹೇಳಬೇಕೆಂದರೆ ಸಿನಿಮಾದ ಕಲೆಕ್ಷನ್ ಬಗ್ಗೆ ಪೂರ್ಣ ಮಾಹಿತಿ ನನಗೆ ಇಲ್ಲ. ಅದರ ಬಗ್ಗೆ ಸಿನಿಮಾದ ವಿತರಕರನ್ನೇ ಕೇಳಬೇಕು. ನನಗೂ ಸಹ ಅವರೊಟ್ಟಿಗೆ ಚರ್ಚಿಸಲು ಸಮಯವಾಗಿಲ್ಲ. ಇಷ್ಟು ದಿನ ರಾಜ್ಯ ಪ್ರವಾಸ ಮಾಡಿದ್ದೇನೆ. ಇನ್ನು ಮುಂದೆ ವಿತರಕರೊಟ್ಟಿಗೆ ಕೂತು ಮಾತನಾಡಿ ಸಿನಿಮಾದ ಕಲೆಕ್ಷನ್‌ ಮಾಹಿತಿ ಪಡೆಯಬೇಕು. ಆಗ ನಿಮಗೂ (ಮಾಧ್ಯಮಗಳಿಗೆ) ಹೇಳುವೆ ಸಿನಿಮಾದ ಕಲೆಕ್ಷನ್ ಎಷ್ಟಾಗಿದೆ ಎಂದು” ಎಂದಿದ್ದಾರೆ ಡಾಲಿ ಧನಂಜಯ್.

”ಸಿನಿಮಾ ಗೆದ್ದಿದೆ ಆ ಮೂಲಕ ಇನ್ನಷ್ಟು ಕನಸುಗಳನ್ನು ಕಾಣುವ ಅದನ್ನು ತೆರೆಗೆ ತರುವ ಧೈರ್ಯ ಬಂದಿದೆ. ಯಾರನ್ನೇ ಕೇಳಿದರು ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಐದು ಜನ, ಎಂಟು ಜನ ಹೋಗಿದ್ದೆವು ಎನ್ನುತ್ತಿದ್ದಾರೆ, ಖುಷಿಯಾಗುತ್ತಿದೆ. ಅದಕ್ಕಾಗಿಯೇ ಪ್ರೇಕ್ಷಕರಿಗೆ ಧನ್ಯವಾದ ಹೇಳಲೆಂದೇ ರಾಜ್ಯ ಪ್ರವಾಸ ಮಾಡಿದೆವು, ಇನ್ನೂ ಕೆಲವು ಕಡೆ ಹೋಗುವುದಕ್ಕಿತ್ತು, ಬೆಳಗಾವಿಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಮಾಡುವ ಯೋಜನೆಯೂ ಇತ್ತು. ಅಷ್ಟರಲ್ಲಿಯೇ ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಫ್ಯೂ ಘೋಷಣೆ ಆಯಿತಾದ್ದರಿಂದ ಮಾಡಲಾಗಲಿಲ್ಲ” ಎಂದರು ಧನಂಜಯ್.

ವೀಕೆಂಡ್ ಲಾಕ್‌ಡೌನ್ ಆದೇಶ ಪುನರ್‌ ಪರಿಶೀಲಿಸಿ: ಡಾಲಿ

ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್‌ಡೌನ್‌ನಿಂದ ತಮ್ಮ ಸಿನಿಮಾಕ್ಕೆ ಸಮಸ್ಯೆ ಆದ ಬಗ್ಗೆ ಮಾತನಾಡಿದ ಡಾಲಿ, ”ನೈಟ್ ಕರ್ಫ್ಯೂ ಆದಾಗಿನಿಂದಲೂ ನೈಟ್ ಶೋಗಳು ರದ್ದಾದವು, ಅದರಿಂದ ನಮ್ಮ ಸಿನಿಮಾಕ್ಕೆ ತುಸು ಸಮಸ್ಯೆ ಎದುರಾಯಿತು. ಈಗ 50-50 ಮಾಡಿದ್ದಾರೆ ಮತ್ತು ವೀಕೆಂಡ್ ಲಾಕ್‌ಡೌನ್ ಸಹ ಮಾಡಿದ್ದಾರೆ. ಇದರಿಂದ ಇನ್ನಷ್ಟು ತೊಂದರೆ ಆಗಲಿದೆ. ಆದರೆ ಕೊರೊನಾ ಇರುವ ಕಾರಣ ಇದನ್ನೆಲ್ಲ ನಾವು ಅನುಸರಿಸಲೇ ಬೇಕಾಗಿದೆ. ಆದರೆ ವೀಕೆಂಡ್ ಲಾಕ್‌ಡೌನ್ ಚಿತ್ರರಂಗಕ್ಕೆ ದೊಡ್ಡ ಸಮಸ್ಯೆ ಎದುರಾಗಲಿದೆ. ವಾರಾಂತ್ಯದಲ್ಲಿಯೇ ಸಿನಿಮಾಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚು. ವೀಕೆಂಡ್ ಲಾಕ್‌ಡೌನ್ ಆದೇಶವನ್ನು ಸರ್ಕಾರ ಪುನರ್‌ ಪರಿಶೀಲಿಸುವಂತಾದರೆ ಒಳ್ಳೆಯದು” ಎಂದಿದ್ದಾರೆ ಡಾಲಿ ಧನಂಜಯ್.

ಅಮೃತಾ ಐಯ್ಯರ್ ನಾಯಕಿ

ಡಾಲಿ ಧನಂಜಯ್ ನಟಿಸಿರುವ ‘ಬಡವ ರಾಸ್ಕಲ್’ ಸಿನಿಮಾ ಡಿಸೆಂಬರ್ 24 ರಂದು ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಡಾಲಿ ಜೊತೆ ನಾಯಕಿಯಾಗಿ ಅಮೃತಾ ಐಯ್ಯಂಗಾರ್ ನಟಿಸಿದ್ದರು. ಸಿನಿಮಾದಲ್ಲಿ ರಂಗಾಯಣ ರಘು, ತಾರಾ, ನಾಗಭೂಷಣ್ ಹಾಗೂ ಇತರರು ನಟಿಸಿದ್ದರು. ಸಿನಿಮಾವನ್ನು ಶಂಕರ್ ಗುರು ನಿರ್ದೇಶನ ಮಾಡಿದ್ದಾರೆ. ‘ಬಡವ ರಾಸ್ಕಲ್’ ಸಿನಿಮಾವನ್ನು ಶಿವರಾಜ್ ಕುಮಾರ್, ‘ಕೆಜಿಎಫ್’ ಸಿನಿಮಾದ ನಿರ್ದೇಶಕದ ಪ್ರಶಾಂತ್ ನೀಲ್ ಇತರ ಸೆಲೆಬ್ರಿಟಿಗಳು ನೋಡಿ ಇಷ್ಟಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

'ಚಕ್ಡಾ ಎಕ್ಸ್ ಪ್ರೆಸ್' ಚಿತ್ರದ ಮೂಲಕ ಅನುಷ್ಕಾ ಶರ್ಮಾ ಕಮ್ ಬ್ಯಾಕ್, ಟೀಸರ್ ಬಿಡುಗಡೆ;

Thu Jan 6 , 2022
ಮುಂಬೈ: 2018ರ ಝೀರೋ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನಷ್ಕಾ ಶರ್ಮಾ ಅವರು ಈಗ ಕ್ರಿಕೆಟ್ ಜಗತ್ತಿನ ಕಥೆಯ ಮೂಲಕ ಕಮ್ ಬ್ಯಾಕ್ ಆಗುತ್ತಿದ್ದಾರೆ. ಮುಂಬರುವ ಕ್ರೀಡಾ ಸಿನಿಮಾ ಚಕ್ಡಾ ‘ಎಕ್ಸ್‍ಪ್ರೆಸ್‍ನಲ್ಲಿ ಅಭಿನಯಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದ್ದಾರೆ. ಹೌದು ಅವರ ಮುಂದಿನ ಸಿನಿಮಾ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಜುಲನ್ ಗೋಸ್ವಾಮಿಯವರ ಜೀವನಾಧಾರಿತ ಕಥೆಯಾಗಿದೆ. […]

Advertisement

Wordpress Social Share Plugin powered by Ultimatelysocial