ರಮೇಶ್ ಅರವಿಂದ್ ಈಗ ಕೊರೊನಾ ವೈರಸ್ ಜಾಗೃತಿ ರಾಯಭಾರಿ

ಕೊರೊನಾ ವೈರಸ್ ಕುರಿತಾದ ನಿಖರ ಮಾಹಿತಿಗಳನ್ನು ಒದಗಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರನ್ನು ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿದೆ.ಕೊರೊನಾ ವೈರಸ್ ಸಂಕಷ್ಟವನ್ನು ನಿಯಂತ್ರಿಸಲು ನೆರವಾಗುವಂತೆ ಅದರ ಕುರಿತು ಜನರಿಗೆ ಅಧಿಕೃತ ಮಾಹಿತಿ ಒದಗಿಸಲು ರಮೇಶ್ ಅರವಿಂದ್ ನೆರವಾಗಲಿದ್ದಾರೆ. ಕೊರೊನಾ ವೈರಸ್ ಸಂಕಷ್ಟವನ್ನು ನಿಭಾಯಿಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ಪರಿಣಾಮಕಾರಿ ಫಲಿತಾಂಶಕ್ಕಾಗಿ ಈ ಸಮಿತಿಗೆ ವಿವಿಧ ವಲಯಗಳ ಜನರನ್ನು ಸೇರಿಸಿಕೊಂಡು ರಾಜ್ಯ ಸರ್ಕಾರ ಅವರಿಗೆ ಈ ಜವಾಬ್ದಾರಿ ನೀಡಿದೆ ಎಂದು ಬಿಬಿಎಂಪಿಗೆ ನೂತನವಾಗಿ ನೇಮಕಗೊಂಡಿರುವ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ತಮ್ಮ ವೈಯಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿರುವುದಾಗಿ ರಮೇಶ್ ಅರವಿಂದ್ ತಿಳಿಸಿದ್ದರು. ಕೋವಿಡ್ 19 ನಿಭಾಯಿಸುವ ಸಲುವಾಗಿ ರಚಿಸಲಾಗಿರುವ ಬಿಬಿಎಂಪಿ ಕೋವಿಡ್ 19 ಟಾಸ್ಕ್‌ ಫೋರ್ಸ್‌ನಲ್ಲಿಯೂ ರಮೇಶ್ ಅರವಿಂದ್ ಭಾಗಿಯಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಡೆಂಗ್ಯೂ ಜ್ವರದ ಭೀತಿಯಲ್ಲಿ ಬೀದರ್ ಜನತೆ

Tue Jul 21 , 2020
ಬೀದರ ಜಿಲ್ಲೆಯಲ್ಲಿ ದಿನ ಕಳೆದಂತೆ ಮಹಾಮಾರಿ ಕೊರೊನಾ ಭೀತಿ ಹೆಚ್ಚುತ್ತಿದೆ. ಈ ನಡುವೆ ಸಾಂಕ್ರಾಮಿಕ ರೋಗ ಡೆಂಗ್ಯೂ ಭಿತಿ ಶುರುವಾಗುತ್ತಿದೆ. ಕಳೆದ ಮೂರು ನಾಲ್ಕು ದಿನದಿಂದ ವರುಣ ಕಣ್ಣಾಮುಚ್ಚಾಲೆಯಾಡುತ್ತಿದ್ದು, ನಗರದ ಬಡಾವಣೆಯ ಚೆರಂಡಿಗಳಲ್ಲಿ ಮಳೆ ನೀರು ಹರಿಯದೆ ರಸ್ತೆಯಲ್ಲಾ ತಲಾವರಿಸುತ್ತಿದೆ. ಇದರ ಜೊತೆಯಲ್ಲಿ ಮನೆಗಳಿಗೂ ಚರಂಡಿಯಲ್ಲಿನ ಹೊಲಸು ನೀರು ಮನೆಗಳಿಗೆ ನುಗ್ಗುವ ಭೀತಿ ಶುರವಾಗಿದೆ. ನಗರದ ಕೇಂದ್ರೀಯ ವಿದ್ಯಾಲಯದ ಕಂಪೌಂಡ ಹತ್ತಿರದ ಹಳೆಯ ಆರ‍್ಶ ಕಾಲೋನಿಯಲ್ಲಿ ಚರಂಡಿಗೆ ಮಳೆ ನೀರು […]

Advertisement

Wordpress Social Share Plugin powered by Ultimatelysocial