ರಾಜಸ್ಥಾನದಲ್ಲಿ ಮುಗಿಯದ ರಾಜಕೀಯ ತಿಕ್ಕಾಟ

ರಾಜಸ್ಥಾನ ರಾಜಕೀಯ ತಿಕ್ಕಾಟ ಮುಗಿದಂತೆ ಕಾಣುತ್ತಿಲ್ಲ . ಜೊತೆಗೆ ಸಚಿನ್ ಪೈಲೆಟ್ ಸೇರಿ ೧೮ ಶಾಸಕರ ಅನರ್ಹತೆಯ ಕುರಿತು ಇನ್ನು ವಿಚಾರಣೆ ನಡೆಯುತ್ತಿದೆ.ಇದರ ನಡುವೆ ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಗಳ ನಡುವೆ ತಿಕ್ಕಾಟ ಜೋರಾಗಿದ್ದು ಮುಖ್ಯಮಂತ್ರಿ ಗೆಹ್ಲೋಟ್ ಅವರು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನ ರಾಜಭವನದ ಮುಂದೆಯೇ ಶನಿವಾರ ಧರಣಿ ಕೂತಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದೀಗ, ಅನಿವಾರ್ಯತೆ ಸೃಷ್ಟಿಯಾದರೆ ಕಾಂಗ್ರೆಸ್ ಶಾಸಕರು ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇವೆ. ಅಗತ್ಯಬಿದ್ದರೆ ಪ್ರಧಾನಿ ನಿವಾಸದ ಮುಂದೆಯೂ ಧರಣಿ ಕೂರಲಿದ್ದಾವೆ ಎಂದು ಹೇಳಿದ್ದಾರೆ. ಅಧಿವೇಶನ ಕರೆಯಲು ರಾಜ್ಯಪಾಲ ಕಲ್ರಾಜ್ ಮಿಶ್ರಾ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ರಾಜಭವನದ ಮುಂಭಾಗದ ಹುಲ್ಲುಹಾಸಿನ ಮೇಲೆ ಧರಣಿ ಕುಳಿತಿದ್ದರು. ಜೊತೆಗೆ ಅಧಿವೇಶನ ಕರೆಯಿರಿ ಎಂದು ಘೋಷಣೆಗಳನ್ನೂ ಕೂಗಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ವಿಷಾದ ವ್ಯಕ್ತ ಪಡಿಸಿದ ಎ.ಆರ್.ರೆಹಮಾನ್

Sun Jul 26 , 2020
ಎ ಆರ್ ರೆಹಮಾನ್ ಅವರು ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕ. ಅಂತವರಿಗೇ ಅವಕಾಶಗಳ ಕೊರತೆಯಾಗುತ್ತಿದೆ ಎಂದರೆ ಆಶ್ಚರ್ಯವಲ್ಲವೆ. ಇತ್ತೀಚಿನ ಕೆಲವು ವರ್ಷಗಳಿಂದ ಈ ಸಂಗೀಯ ನಿರ್ದೇಶಕನಿಗೆ ಸಿಗುವ ಸಿನೇಮಾಗಳ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿದೆ. ಇದಕ್ಕೆ ಅವರು ತನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವ ಗ್ಯಾಂಗ್ ಇದೆ. ಆದ್ದರಿಂದ ತಮಗೆ ಅವಕಾಶಗಳ ಕೊರತೆಯಾಗುತ್ತದೆ ಎಂದು ದೂರಿದ್ದಾರೆ. ರೇಡಿಯೊ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹೀಗೆ ತಮ್ಮ ವಿಷಾದ ವ್ಯಕ್ತ ಪಡಿಸಿದ್ದಾರೆ. “ಇತ್ತೀಚಿನ […]

Advertisement

Wordpress Social Share Plugin powered by Ultimatelysocial