ರಾಜ್ಯದಲ್ಲಿ ಶರವೇಗದಲ್ಲಿ ಓಡುತ್ತಿರುವ ಕೊರೊನಾ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ ಕರ್ನಾಟಕದಲ್ಲಿ 9.25 ಲಕ್ಷಕ್ಕೂ ಹೆಚ್ಚು ಕೊರೊನಾ ಪರೀಕ್ಷೆ ಮಾಡಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರತಿದಿನ ದಶಲಕ್ಷ ಜನಸಂಖ್ಯೆಗೆ ಕನಿಷ್ಠ 140 ಟೆಸ್ಟ್ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಕರ್ನಾಟಕ 297 ಟೆಸ್ಟ್ ಮಾಡುವ ಮೂಲಕ ಈ ಗುರಿ ತಲುಪಿರುವ ಭಾರತದ ಟಾಪ್ 10 ರಾಜ್ಯಗಳ ಪೈಕಿ ಸ್ಥಾನ ಪಡೆದಿದೆ ಮತ್ತು ರಾಜ್ಯದಲ್ಲಿ ಈವರೆಗೆ 9.25 ಲಕ್ಷಕ್ಕೂ ಹೆಚ್ಚು ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದ್ದು, ಅವೆಲ್ಲವೂ ನಿಖರ ವರದಿ ನೀಡುವ RT-PCR ಟೆಸ್ಟ್ ಆಗಿವೆ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು ಜಿಲ್ಲೆಯ  ದೇವದುರ್ಗ ತಾಲ್ಲೂಕಿನ ಪಂಪಣ್ಣ

Fri Jul 17 , 2020
ರಾಯಚೂರು ಜಿಲ್ಲೆಯ  ದೇವದುರ್ಗ ತಾಲ್ಲೂಕಿನ ಪಂಪಣ್ಣ 16 ವರ್ಷ ಸೈನಿಕರಿಗೆ ತರಬೇತಿ ನೀಡಿ ಮರಳಿ ದೇವದುರ್ಗಕ್ಕೆ ಬಂದಿರುವ  ಹೆಮ್ಮೆಯ ಸೈನಿಕ. ದೇವದುರ್ಗದ ಸರ್ಕಾರಿ ಕ್ರೀಡಾಂಗಣದಲ್ಲಿ ಯುವಕರಿಗೆ ಪಂಪಣ್ಣರವರು ಉಚಿತ ಸೈನಿಕ  ತರಬೇತಿ ನೀಡುತ್ತಿದ್ದಾರೆ. ನೂರಾರು ಚಟಗಳ ದುರಭ್ಯಾಸದಿಂದ ಹಾಳಾಗುತ್ತಿರುವ ಇಂದಿನ ಯುವಕರಿಗೆ  ತಮ್ಮ ದೇಹ ಮತ್ತು ದೇಶದ ರಕ್ಷಕರಾಗುವಂತೆ ಹುರಿದುಂಬಿಸಿ ಸೈನಿಕ ತರಬೇತಿ ನೀಡುತ್ತಿದ್ದಾರೆ. ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿರುವ ನಮ್ಮ ಭಾರತ ದೇಶದ ಯುವಕರನ್ನು ಮಾನಸಿಕವಾಗಿ ದೈಹಿಕವಾಗಿ […]

Advertisement

Wordpress Social Share Plugin powered by Ultimatelysocial