ರೈಲ್ವೇ-ಎಸ್‌ಬಿಐಯಿಂದ ರುಪೇ ಸಂಪರ್ಕ ರಹಿತ ಕ್ರೆಡಿಟ್ ಕಾರ್ಡ್

ಭಾರತೀಯ ರೈಲ್ವೇ ಇಲಾಖೆ ಹಾಗೂ ಎಸ್‌ಬಿಐ ಕಾರ್ಡ್ ಜಂಟಿಯಾಗಿ ಸಂಪರ್ಕರಹಿತ ಕ್ರೆಡಿಟ್ ಕಾರ್ಡ ವಂದನ್ನ ಬಿಡುಗಡೆ ಮಾಡಿವೆ. ಇದು ದೇಶೀಯ ರುಪೇ ಆಧಾರಿತ ಕಾರ್ಡ್. ಕೇಂದ್ರ ರೈಲ್ವೇ ಸಚಿವ ಪೀಯೂಷ್ ಗೋಯಲ್ ಈ ಕಾರ್ಡನ್ನು ಬಿಡುಗಡೆಗೊಳಿಸಿ, ಎಲ್ಲ ವಲಯಗಳಲ್ಲೂ ದೇಶ ಆತ್ಮನಿರ್ಭರಗೊಳ್ಳಲು ಈ ಹೆಜ್ಜೆಇಡಲಾಗಿದೆ ಎಂದಿದ್ದಾರೆ. ಈ ಕಾರ್ಡ್ ಬಳಸುವಾಗ ಅದನ್ನು ಪಾಯಿಂಟ್ ಆಫ್ ಸೇಲ್ ಮೆಷಿನ್‌ನಲ್ಲಿ ಉಜ್ಜ ಬೇಕೆಂದಿಲ್ಲ. ಬದಲಿಗೆ ಪಿಒಎಸ್ ಸನಿಹ ಹಿಡಿದರೆ ಸಾಕು, ತತ್‌ಕ್ಷಣ ಸಂಪರ್ಕಗೊಳ್ಳುತ್ತದೆ. ಎನ್‌ಎಫ್ಸಿ ತಂತ್ರಜ್ಞಾನ: ಈ ಕ್ರೆಡಿಟ್ ಕಾರ್ಡನ್ನು ಎನ್‌ಎಫ್ಸಿ ಅಥವಾ ನಿಯರ್ ಫೀಲ್ಡ್ ಕಮ್ಯುನಿ­ಕೇಶನ್ ಎಂಬ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ಎನ್‌ಎಫ್ಸಿ ಒಂದು ಚಿಪ್ ಆಧಾರಿತ ವ್ಯವಸ್ಥೆ. ಇದು ಸನಿಹದ ಇದೇ ರೀತಿಯ ವ್ಯವಸ್ಥೆ ಇರುವ ಸಾಧನಗಳೊಂದಿಗೆ ಸಂಪರ್ಕಗೊಳ್ಳುವ ಶಕ್ತಿ ಹೊಂದಿರುತ್ತದೆ. ಬ್ಲೂಟೂತ್ ಆಧಾರಿತ ಸೇವೆಗಳು ಹೀಗೆಯೇ ಕಾರ್ಯಾಚರಣೆ ನಡಸುತ್ತವೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.

Please follow and like us:

Leave a Reply

Your email address will not be published. Required fields are marked *

Next Post

ಆ.೧೫ರವರೆಗೆ ತಾಜ್‌ಮಹಲ್ ಓಪನ್ ಇಲ್ಲ

Wed Jul 29 , 2020
ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಜುಲೈ ೬ ರಿಂದ ಎಲ್ಲಾ ಪ್ರವಾಸಿ ತಾಣಗಳನ್ನ ರಾಜ್ಯ ಹಾಗೂ ಜಿಲ್ಲಾಡಳಿತ ಒಪ್ಪಿಗೆ ಮೇರೆಗೆ ತೆರೆಯಲಾಗುತ್ತದೆ ಎಂದು ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದರು. ಜುಲೈ ೬ ರಂದು ೨ ಸಾವಿರಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ತೆರೆಯಲಾಗಿತ್ತು. ಆದರೆ ಆಗ್ರಾದಲ್ಲಿ ತಾಜ್ ಮಹಲ್ ಸೇರಿ ಕೆಲವೇ ಸ್ಮಾರಕಗಳು ಇನ್ನೂ ತೆರೆದಿಲ್ಲ. ಸೋಂಕನ್ನು ಗಮನದಲ್ಲಿಟ್ಟುಕೊಂಡು ತಾಜ್ಮಹಲ್ ಸ್ಮಾರಕ ಆಗಸ್ಟ್ ೧೫ರ ನಂತರದಲ್ಲಿ ತೆರೆಯುವ ಸಾಧ್ಯತೆ ಇದ್ದು, ಅದಕ್ಕಿಂತಲೂ […]

Advertisement

Wordpress Social Share Plugin powered by Ultimatelysocial