ಲೈಸೆನ್ಸ್ ರದ್ದು ಮಾಡಲು ಡಿ.ಸಿ ಚಿಂತನೆ

ಖಾಸಗಿ ಆಸ್ಪತ್ರೆ ನಿರ್ಲಕ್ಷö್ಯದಿಂದ ಕೊರೊನಾ ಸೋಂಕಿತರೊಬ್ಬರು ನಿನ್ನೆ ತಡರಾತ್ರಿ ನರಳಾಡಿವಂತಾದ ಘಡನೆ ಹುಬ್ಬಳಿಯಲ್ಲಿ ನಡೆದಿದೆ. ಕಿಮ್ಸ್ ಆಸ್ಪತ್ರೆಗೆ ಕೋವಿಡ್ ಚಿಕಿತ್ಸೆ ಹೊರೆಯಾಗುತ್ತಿದೆ ಎಂಬುವ ಉದ್ದೇಶದಿಂದ ಧಾರವಾಡ ಜಿಲ್ಲೆಯ ೨೨ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಜಿಲ್ಲಾಡಳಿತ ನಿರ್ದೇಶನ ನೀಡಿತ್ತು. ನಗರದ ವಿವೇಕಾಂನದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋವಿಡ್ ಚಿಕಿತ್ಸೆಗೆ ಸೂಚನೆ ನೀಡಲಾಗಿದ್ದರೂ ಕೂಡ ಆಸ್ಪತ್ರೆಯ ವೈದ್ಯರು ಸಂಕಿತ ವ್ಯಕ್ತಿಯನ್ನು ಕಿಮ್ಸ್ ಆಸ್ಪತ್ರೆ ಕಳಿಸಿದ್ದಾರೆ. ಹೀಗಾಗಿ ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿಯೇ ಸೋಂಕಿತ ವ್ಯಕ್ತಿ ನರಳಾಡುವಂತಾಯ್ತು. ನಂತರ ರೋಗಿಯನ್ನು ಕಿಮ್ಸ್ ನಲ್ಲೇ ದಾಖಲಿಸಿಕೊಳ್ಳಲಾಗಿದೆ. ಈ ಸುದ್ದಿ ತಿಳಿದ ಹುಬ್ಬಳ್ಳಿ ಜಿಲ್ಲಾಧಿಕಾರಿ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚರಂಡಿಗಳು ಇಲ್ಲದೆ ರಸ್ತೆಯಲ್ಲಾ ನೀರು

Tue Jul 7 , 2020
ಸಿಸಿ ರಸ್ತೆ ಚರಂಡಿ ಇಲ್ಲದೆ ದಿನನಿತ್ಯ ಊರಿನಲ್ಲಿ ಜನರು ರಸ್ತೆಯ ಮೇಲೆ ತಿರುಗಾಡಲು ಹರಸಾಹಸ ಪಡುವಂತಾಗಿದೆ ಎಂದು ರೈತ ಸಂಘದ ಮುಖಂಡ ಬಸವರಾಜ ಬಿರಾದಾರ ಹೇಳಿದರು. ರಾಯಚೂರು ಜಿಲ್ಲೆಯ ಚಿಂಚೋಡಿ ಗ್ರಾಮದಲ್ಲಿ ಮತನಾಡಿದ ಅವರು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತದೆ. ಆದರೆ ಯೋಜನೆಗಳು ಅನುಷ್ಠಾನಗೊಳ್ಳುವ ಹಂತದಲ್ಲಿ ಮಾತ್ರ ಕೆಲ ಅಧಿಕಾರಿಗಳ ನಿರ್ಲಕ್ಷತನಕ್ಕೆ ಕಾಮಗಾರಿಗಳು ಹಳ್ಳ ಹಿಡಿಯುತ್ತವೆ. ಗ್ರಾಮದಲ್ಲಿ ಚರಂಡಿಗಳು ಇಲ್ಲದೆ ರಸ್ತೆಯಲ್ಲೆಲ್ಲಾ ಗಲೀಜು ನೀರು […]

Advertisement

Wordpress Social Share Plugin powered by Ultimatelysocial