ವರ್ಗಾವಣೆಗೆ ನಿಯಮಗಳಡಿ ಅಸ್ತು ಎಂದ ಸರ್ಕಾರ

ಬೆಂಗಳೂರು ಸಿಟಿ ಪೊಲೀಸರಿಗೆ ಸರ್ಕಾರದಿಂದ ಸಿಹಿಸುದ್ದಿ ಹೊರಡಿಸಲಾಗಿದೆ. ಬೆಂಗಳೂರು ಕಮೀಷನರೇಟ್ ನಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಅನುಮತಿ ಇರಲಿಲ್ಲ.ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ನೆನಪೋಲೆ ಹೊರಡಿದ್ದಾರೆ. ಇದರಲ್ಲಿ ಬೆಂಗಳೂರು ಸಿಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ, ಕೋರಿಕೆ ಮೇರೆಗೆ ಜ್ಯೇಷ್ಠತೆ ಬಿಟ್ಟುಕೊಡುವ ಷರತ್ತಿಗೊಳಪಟ್ಟು, ಇತರೆ ಜಿಲ್ಲೆ ಹಾಗೂ ನಗರಗಳಿಗೆ ವರ್ಗಾವಣೆಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಆದ್ರೇ ಜಿಲ್ಲೆಯಲ್ಲಿ ಪೊಲೀಸರಿಗೆ, ಕೆಲವು ನಿಯಮಗಳ ಆಧಾರದ ಮೇಲೆ ಅಂತರ ಜಿಲ್ಲೆಯ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಅವುಗಳೆಂದರೆ, ಜಿಲ್ಲಾ ವರ್ಗಾವಣೆ ಕೋರುವ ಸಿಬ್ಬಂದಿಗಳು ಬೆಂಗಳೂರು ನಗರ ಘಟಕದ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ಹೊಂದಿ, 7 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳು ಸೇವೆ ಸಲ್ಲಿಸಿರಬೇಕು. ಸಶಸ್ತ್ರ ಮೀಸಲು ಪಡೆ, ಎಸಿಪಿ, ಕೆಎಸ್ಐಎಫ್ ಸಿಬ್ಬಂದಿಗಳಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಹಲವಾರು ದಶಕಗಳಿಂದಲೂ ಬಿದ್ರಿ ಕಲಾಕೃತಿಗಳ ರಚನೆ- ಬೀದರ್ ಜಿಲ್ಲೆ ಕೀರ್ತಿ ಹಬ್ಬಿಸಿದ ಬಿದ್ರಿ ಕಲಾಕೃತಿ

Wed Oct 7 , 2020
ಬೀದರ್ ಬಿದ್ರಿ ಕಲೆಯಿಂದಾಗಿಯೂ ರಾಷ್ಟ್ರಮಟ್ಟದಲ್ಲಿ ಹೆಸರಾಗಿದೆ. ಹಲವಾರು ದಶಕಗಳಿಂದಲೂ ಬಿದ್ರಿ ಕಲಾಕೃತಿಗಳ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡ ಅನೇಕರು ಕರ್ನಾಟಕ ಸರ್ಕಾರದ ಪ್ರಶಸ್ತಿ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಿಟ್ಟಿಸಿ ಬೀದರ ಜಿಲ್ಲೆಯ ಕೀರ್ತಿ ಹಬ್ಬಿಸಿದ್ದಾರೆ. ಇಂತಹ ಮಹತ್ವದ ಪಾರಂಪರಿಕ ಕಲೆಗಳಲ್ಲೊಂದಾದ ಪ್ರಸಿದ್ಧ ಬಿದ್ರಿ ಕಲೆಗೆ ಪುನಶ್ಚೇತನ ಮತ್ತು ಈ ಬಿದ್ರಿ ಕಲೆಯ ಕರಕುಶಲಗಾರರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಕುರಿತಂತೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರತ್ನಪ್ರಭ ಅವರು ಹಾಗೂ ಬೀದರ್ […]

Advertisement

Wordpress Social Share Plugin powered by Ultimatelysocial