ವಾರ್ಡ್ ನಂಬರ್ ೨೪ರಲ್ಲಿ ಬರುವ ಹೈದರ್ ಕಾಲೋನಿ

ಬೀದರ್ ನಗರದ ವಾರ್ಡ್ ನಂಬರ್ 24 ರಲ್ಲಿ ಬರುವ ಹೈದರ್ ಕಾಲೋನಿಯಲ್ಲಿ ಸುಮಾರು 10 ವರ್ಷದಿಂದ ಯಾವುದೇ ರಸ್ತೆ, ಒಳಚರಂಡಿ ಕಾಮಗಾರಿಗಳು ನಡೆಯದೆ ಮಳೆ ನೀರಿನಿಂದ ತುಂಬಾ ಕೆಸರು ತುಂಬಿ ಜನರು ನಡೆದಾಡುವುದು ಕಷ್ಟವಾಗಿದೆ. ನಗರದ ಕೆಲವು ಕಾಲೋನಿಗಳಲ್ಲಿ  ವಾಸವಾಗಿದ್ದ ಜನರು ತಮ್ಮ ಅಳಲನ್ನು ತೋಡಿಗೊಳ್ಳುತ್ತ, ಕಳೆದ 16 ವರ್ಷಗಳಿಂದ ನಾವು ಇಲ್ಲಿ ವಾಸವಾಗಿದ್ದೇವೆ. ಇಲ್ಲಿ ರಸ್ತೆ ಇಲ್ಲಾ, ಒಳಚರಂಡಿ ವ್ಯವಸ್ಥೆ ಇಲ್ಲಾ ಇದರಿಂದ ನಮಗೆ ತುಂಬಾ ತೊಂದರೆಯುತಾಗುತ್ತಿದೆ. ಎಷ್ಟೋ ಸಲ ದ್ವಿಚಕ್ರ ವಾಹನಗಳು ಜಾರಿ ಅನೇಕರಿಗೆ ಗಾಯಗಳಾಗಿವೆ. ಯಾವೋಬ್ಬ ಅಧಿಕಾರಿಯು ಇದರ ಕುರಿತು ಗಮನ ಹರಿಸುತ್ತಿಲ್ಲ,  ಅನೇಕ ಬಾರಿ  ನಗರಸಭೆಯ ಅಧಿಕಾರಿಗಳು ಬಂದು ನೋಡುತ್ತಾರೆ ವಿನಃ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ದಯಮಾಡಿ ನಮಗೆ ರಸ್ತೆ ಡಾಂಬರೀಕರಣ ಮತ್ತು ಒಳಚರಂಡಿ ವ್ಯವಸ್ಥೆ ಮಾಡಿಕೊಡಿ ಎಂದು ತಮ್ಮ ಕಷ್ಟವನ್ನು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ, ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಸರ್ವ ಪ್ರಯತ್ನ

Mon Jul 27 , 2020
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಿಜಯಪುರ, ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ ಇಲ್ಲಿ ವಿಮಾನ ಹಾರಾಟ ನಡೆಸುವ ಮಹಾದಾಸೆ ಇದ್ದು, ಅದನ್ನು ಈಡೇರಿಸಲು ಸರ್ವ ಪ್ರಯತ್ನ ನಡೆಸುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ವಿಜಯಪುರ ಹೊರ ವಲಯದ ಬುರಣಾಪುರ- ಮದಭಾವಿ ಗ್ರಾಮದ ಜಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಜತೆ ಜಿಲ್ಲೆಯ ಅಭಿವೃದ್ಧಿಯಾಗಬೇಕಾಗಿದೆ. ವಿಮಾನ ನಿಲ್ದಾಣ […]

Advertisement

Wordpress Social Share Plugin powered by Ultimatelysocial