ಸಂಸದ ಎಸ್.ಮುನಿಸ್ವಾಮಿ ಕೋವಿಡ್ ಆಸ್ಪತ್ರೆಗೆ ಭೇಟಿ

ಕೋಲಾರದ ಕೋವಿಡ್ ಆಸ್ಪತ್ರೆಯ ಬಗ್ಗೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆ ಸಂಸದ ಎಸ್.ಮುನಿಸ್ವಾಮಿ ಕೋವಿಡ್ ವರ‍್ಡ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗೆ ತೆರಳಿದ ಅವರು, ಖುದ್ದು ರೋಗಿಗಳನ್ನ ಮಾತನಾಡಿಸಿ ಸೌಲಭ್ಯಗಳ ಮಾಹಿತಿ ಪಡೆದರಲ್ಲದೆ, ಪಿಪಿಇ ಕಿಟ್, ವೆಂಟಿಲೇಟರ್, ಬೆಡ್ಗಳ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ವೀಕ್ಷಣೆ ಮಾಡಿದ್ರು. ಕೋಲಾರದ ಕೋವಿಡ್ ಆಸ್ಪತ್ರೆಯಲ್ಲಿ ಇರುವ ೩೦೦ ಕ್ಕೂ ಹೆಚ್ಚು ಕೊರೊನಾ ಸೋಂಕಿರನ್ನು ಸ್ವತಹ ಮಾತನಾಡಿಸಿ ತಮಗೆ ಸಿಗುತ್ತಿರುವ ಸೌಲಭ್ಯಗಳ ಕುರಿತು ಖುದ್ದು ಮಾಹಿತಿ ಪಡೆದರು. ಕಳೆದ ಕೆಲವು ದಿನಗಳಿಂದ ಕೋವಿಡ್ ಆಸ್ಪತ್ರೆಯಲ್ಲಿ ಊಟ-ತಿಂಡಿ, ಶುಚಿತ್ವ ಮತ್ತು ನೀರಿನ ಸಮಸ್ಯೆಗಳ ಬಗ್ಗೆ ಮೇಲಿಂದ ಮೇಲೆ ದೂರುಗಳು ಬರುತ್ತಿದ್ದವು. ಈ ಬಗ್ಗೆ ಮಾಧ್ಯಮಗಳಿಂದ ಬೆಳಕಿಗೆ ಬಂದ ಪರಿಣಾಮ ಸಂಸದರು ದಿಢೀರನೇ ಭೇಟಿ ನೀಡಿ ಕೋವಿಡ್ ಆಸ್ಪತ್ರೆ ಪರಿಶೀಲನೆ ನಡೆಸಿದ್ರು. ಇನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಮಾಹಿತಿ ಪಡೆದ ಸಂಸದರು ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಬರದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ರು. ಜಿಲ್ಲಾಸ್ಪತ್ರೆಯಲ್ಲಿ ವೆಂಟಲೇಟರ್ ಉಪಯೋಗಿಸಲು ತಜ್ಞರಿಗೆ ತರಬೇತಿ ನೀಡಲಾಗಿದೆ. ಪಿಪಿಇ ಕಿಟ್ ಸೇರಿದಂತೆ ಯಾವುದೆ ರೀತಿಯ ಬೆಡ್ ಗಳ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವಾಹನಗಳನ್ನ ಸೀಜ್ ಮಾಡಿದ ಪೊಲೀಸರು

Sun Jul 26 , 2020
ಭಾನುವಾರದ ಲಾಕ್‌ಡೌನ್‌ಗೆ ಸಂಬAಧ ಪಟ್ಟಂತೆ ಭಾನುವಾರ ಪೊಲೀಸರು ಬಾರಿ ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಕೆಂಗೇರಿ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದೆ ವಾಹನಗಳನ್ನ ಸೀಜ್ ಮಾಡಿದರು. ಕೆಂಗೇರಿ ಚೆಕ್ ಪೋಸ್ಟ್ ನಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡಲಾಗಿದೆ. ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸಿ ಪರಿಶೀಲಿಸಿದ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.ಕಾರ್, ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ರಾಜ್ಯದ ಹಲವೆಡೆ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನ […]

Advertisement

Wordpress Social Share Plugin powered by Ultimatelysocial