ಸಾರಿಗೆ ಸಂಸ್ಥೆಯ ಮೇಲಾಧಿಕಾರಿಗಳ ವಿರುದ್ಧ ದೂರು

ಬೀದರ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಮೇಲಾಧಿಕಾರಿಗಳ ದುರ್ನಡತೆ ಬಗ್ಗೆ ಸಚಿವರಿಗೆ, ಈಶಾನ್ಯ ಸಾರಿಗೆ ಸಂಸ್ಥೆಯ ನೌಕರರು ದೂರು ನೀಡಿದ್ದಾರೆ. ಇಂದು ಸಚಿವ ಪ್ರಭು ಚೌಹಾಣ್, ಔರಾದ ಪಟ್ಟಣದ ಪೊಲೀಸ ಠಾಣೆ ಮತ್ತು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರಿಗೆ ನೌಕರರಿಗೆ ಮಾಸ್ಕ್ ವಿತರಿಸಿದರು .ಈ ಸಂಧರ್ಭದಲ್ಲಿ ಔರಾದ ತಾಲ್ಲೂಕು ಘಟಕದ ಸಾರಿಗೆ ಸಂಸ್ಥೆ ನೌಕರರ ಸಂಘದ ಅಧ್ಯಕ್ಷರು ಕರೋನಾ ವೈರಸ್ ನಿಂದ ಲಾಕ್‌ಡೌನ್ ಸಡಿಲಿಕೆ ಆದನಂತರ, ಸಾರಿಗೆ ಸಂಸ್ಥೆ ಅಧಿಕಾರಿಗಳು ನೌಕರರಿಗೆ ನೀಡುತ್ತಿರುವ ಕಿರಕುಳ ಬಗ್ಗೆ ದೂರು ನೀಡಿ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಹಾಗೂ ಸಾರಿಗೆ ಸಂಸ್ಥೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಚಿವರಿಗೆ ಮನವಿಯನ್ನು ಸಲ್ಲಿಸಿದರು

Please follow and like us:

Leave a Reply

Your email address will not be published. Required fields are marked *

Next Post

ಅಪರಾಧಿಗಳ ಮನೆಗೆ ಬಂದ ಪೊಲೀಸರು

Wed Jul 15 , 2020
ಕ್ರಿಮಿನಲ್ ಗಳನ್ನು ಬೆನ್ನತ್ತುವ ಪೊಲೀಸರು ದಿನೇ ದಿನೇ ಅನೇಕ ರೀತಿಯ ಹೊಸ ಬಗೆಯ ತಂತ್ರಗಳನ್ನು ಅಳವಡಿಸಿಕೊಂಡು ಅವರನ್ನು ಹಿಡಿಯಲು ಬಲೆ ಬೀಸುವುದನ್ನು ಕೇಳಿದ್ದೇವೆ. ಇತ್ತೀಚೆಗೆ ಬಿಹಾರದ ಭಾಗಲ್ಪುರ ಪೊಲೀಸರು ತಲೆತಪ್ಪಿಸಿಕೊಂಡಿರುವ ಕ್ರಿಮಿನಲ್ಗಳನ್ನು ಬೇಟೆಯಾಡಲೆಂದು ಮ್ಯೂಸಿಕ್ ಬ್ಯಾಂಡ್ ಜೊತೆಗೆ ಅವರ ಮನೆಗಳತ್ತ ತೆರಳಿ, ಬಂದು ಶರಣಾಗತರಾಗಲು ಸೂಚಿಸಿದ್ದಾರೆ. ಸಂಗೀತದ ಮೂಲಕ ಸಮನ್ಸ್ ನೀಡಲಾದ ಈ ಕ್ರಿಮಿನಲ್ಗಳು ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದಾರೆ. ಈ ಕ್ರಿಮಿನಲ್ಗಳಿಗೆ ಅವರ ಕುಟುಂಬಗಳ ಮೂಲಕ ವರ‍್ನಿಂಗ್ ನೀಡಿದ್ದು, ಬೇಗ […]

Advertisement

Wordpress Social Share Plugin powered by Ultimatelysocial