ಸುಪ್ರೀಂ ಕೋರ್ಟ್ ಮೂಲಕ ನಿರ್ಧಾರ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಸಿಸಿಐ ಸಂಕಷ್ಟದಲ್ಲಿದ್ದಾಗ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದ ಸೌರವ್ ಗಂಗೂಲಿ ಅಧಿಕಾರಾವಧಿ ಮುಗಿದಿದೆ. ಆದ್ದರಿಂದ ಅವರು ಅಧ್ಯಕ್ಷರಾಗಿ ಮುಂದುವರಿಯುತ್ತಾರೋ, ಇಲ್ಲವೋ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಸದ್ಯ ಅವರನ್ನು ಮುಂದುವರಿಸುವುದು ಬಿಡುವುದು ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ. ಲೆಕ್ಕಾಚಾರದ ಪ್ರಕಾರ ಗಂಗೂಲಿಯ ಒಂಬತ್ತು ತಿಂಗಳ ಆಡಳಿತ ಮುಗಿದಿದೆ. ಬಿಸಿಸಿಐ ಹೊಸ ಸಂವಿಧಾನದ ಪ್ರಕಾರ ಅವರಿನ್ನು ೩ ವರ್ಷ ಕಡ್ಡಾಯ ವಿಶ್ರಾಂತಿ ತೆಗೆದುಕೊಳ್ಳಬೇಕು.

ರಾಜ್ಯಸಂಸ್ಥೆಗಳಲ್ಲಾಗಲೀ, ಬಿಸಿಸಿಐಯನ್ನು ಸೇರಿಸಿಯಾಗಲೀ ವ್ಯಕ್ತಿಯೊಬ್ಬರು ಸತತ ೬ ವರ್ಷ ಅಧಿಕಾರ ನಡೆಸಿದ್ದರೆ ಅವರು ವಿಶ್ರಾಂತಿ ಪಡೆಯಬೇಕು ಎಂದು ಹೊಸ ನಿಯಮಗಳು ಹೇಳುತ್ತವೆ. ಬಿಸಿಸಿಐ ಅಧ್ಯಕ್ಷರಾಗುವುದಕ್ಕೆ ಮುನ್ನವೇ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ೫ ವರ್ಷ ೩ ತಿಂಗಳು ಅಧಿಕಾರ ಮುಗಿಸಿದ್ದರು. ಈಗ ಬಿಸಿಸಿಐನಲ್ಲಿ ೯ ತಿಂಗಳು ಕಳೆದಿದ್ದಾರೆ. ಅಲ್ಲಿಗೆ ಮುಂದಿನ ದಾರಿ ಪ್ರಶ್ನಾರ್ಥಕವಾಗಿದೆ. ಕಡ್ಡಾಯ ವಿಶ್ರಾಂತಿ ನಿಯಮ ಬದಲಿಸಿ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ. ಅದನ್ನು ಒಪ್ಪಿಕೊಂಡರೆ ಗಂಗೂಲಿ ಮುಂದುವರಿಯುತ್ತಾರೆ. ಇಲ್ಲವಾದರೆ ಅವರು ಐಸಿಸಿ ಮುಖ್ಯಸ್ಥರಾಗಲೂ ಯತ್ನಿಸಬಹುದು.

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ವರದಿ ತೋರಿಸಿ, ಮನೆಗೆ ಬನ್ನಿ

Tue Jul 28 , 2020
ರಾಜಧಾನಿಯ ಜನ ಜಾಗತಿಕ ಮಹಾಮಾರಿ ಕೋವಿಡ್ ವಿರುದ್ಧ ಗೆದ್ದುಬರುತ್ತಿದ್ದಾರೆ. ಅಂತಹವರಿಗೆ ಹೂಮಳೆಗರೆದು ಅದ್ದೂರಿಯಾಗಿಯೂ ಬೀಳ್ಕೊಡಲಾಗುತ್ತಿದೆ. ಆದರೆ, ಈ ಕೋವಿಡ್ ಕಲಿಗಳಿಗೆ ಈಗ ಮನೆಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ಹೌದು, ಕೋವಿಡ್ ಗೆದ್ದುಬಂದವರಿಗೆ ನಗರದಲ್ಲಿರುವ ಮನೆಗಳ ಮಾಲೀಕರ ಮನ ಗೆಲ್ಲುವುದೇ ಸವಾಲಾಗಿದೆ. ಕೋವಿಡ್-೧೯ ಆರೈಕೆ ಕೇಂದ್ರದಿAದ ಗುಣಮುಖರಾಗಿ ಮನೆಗೆ ಬಂದರೆೆ ವ್ಯಕ್ತಿಗೆ “ಪ್ರವೇಶವಿಲ್ಲ’ ಎಂಬ ಸಿದ್ಧ ಉತ್ತರ ಸಿಗುತ್ತಿದೆ. ಕೆಲವೆಡೆ ಮನೆ ಖಾಲಿ ಮಾಡಿಸುತ್ತಿದ್ದಾರೆ. ಇನ್ನು ಹಲವೆಡೆ “ನೆಗೆಟಿವ್ ವರದಿ ತೋರಿಸಿ ಒಳಗೆ […]

Advertisement

Wordpress Social Share Plugin powered by Ultimatelysocial