ಹೊರ ರಾಜ್ಯದಿಂದ ಬರುವವರಿಗೆ 7 ದಿನ ಕ್ವಾರಂಟೈನ್

ಹೊರ ರಾಜ್ಯಗಳಿಂದ ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವವರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಕ್ವಾರಂಟೈನ್‌ ನಿರ್ವಹಣೆ ಮಾಡಲಾಗುತ್ತಿದೆ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ ಅವರು, ‘ಹೊರ ರಾಜ್ಯದಿಂದ ಬರುವವರನ್ನು ಕ್ವಾರಂಟೈನ್‌ ಇಲ್ಲದೇ ಮನೆಗೆ ಕಳುಹಿಸುವುದರಿಂದ ಸೋಂಕು ಹರಡುವ ಅಪಾಯವಿದೆ. ಅಲ್ಲದೇ, ಹೊರಗಿನಿಂದ ಬಂದವರನ್ನು ಅನುಮಾನದಿಂದ ನೋಡುವ, ದೂರ ಇಡುವ ಮತ್ತು ವೈಮನಸ್ಸು ಸೃಷ್ಟಿಸುವುದಕ್ಕೂ ಕಾರಣವಾಗಬಹುದು. ಇದೆಲ್ಲವನ್ನೂ ತಡೆಯಲು ಸ್ಥಳೀಯವಾಗಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ವಸಂತ್ ರೈಜಿ ಇನ್ನಿಲ್ಲ

Sat Jun 13 , 2020
ಭಾರತದ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರೈಜಿಯವರು ಇಂದು ಅಗಲಿದ್ದಾರೆ. ಅಂದಹಾಗೇ 100 ವರ್ಷ ವಯಸ್ಸಾಗಿದ್ದ ಅವರಿಗೆ ವಯೋಸಹಜ ಕಾರಣದಿಂದ ಇಂದು ಬೆಳಗಿನ ಜಾವ 2.20 ರ ಸರಿಸುಮಾರಿಗೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ. 1939 ರಲ್ಲಿ ನಾಗ್ಪುರದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತಂಡದ ಪರ ಸೆಂಟ್ರಲ್ ಪ್ರಾವಿನ್ಸಸ್ ಪರ ಆಡುವ ಮೂಲಕ ಕ್ರಿಕೆಟ್ ರಂಗಕ್ಕೆ ಕಾಲಿಟ್ಟಿದ್ದರು. ಹಾಗೂ 1940 ರಲ್ಲಿ 9 ಪ್ರಥಮ […]

Advertisement

Wordpress Social Share Plugin powered by Ultimatelysocial