ಮದುರೈ: ಕರೊನಾ ವೈರಸ್ ಲಾಕ್ಡೌನ್ ಸಮಯದಲ್ಲಿ ನಿರ್ಗತಿಕರ ನೆರವಿಗೆ ನಿಂತ ತಮಿಳುನಾಡಿನ ಮಧುರೈ ಮೂಲದ ೧೩ ವರ್ಷದ ಬಾಲಕಿಯನ್ನು ವಿಶ್ವಸಂಸ್ಥೆ ಮೆಚ್ಚಿ, ಗೌರವಿಸಿದೆ. ಬಾಲಕಿ ನೇತ್ರಾಳನ್ನು ಅಭಿವೃದ್ಧಿ ಮತ್ತು ಶಾಂತಿಗಾಗಿ ಇರುವ ವಿಶ್ವಸಂಸ್ಥೆ ಅಸೋಸಿಯೇಷನ್ ((UNADP) ನ ಬಡವರ ಸದ್ಭಾವನಾ ರಾಯಭಾರಿಯನ್ನಾಗಿ ನೇಮಿಸಿದೆ. ನೇತ್ರಾಳ ತಂದೆ ಸಲೂನ್ ಶಾಪ್ ಮಾಲೀಕನಾಗಿದ್ದು, ತಮ್ಮ ಮಗಳ ಶಿಕ್ಷಣಕ್ಕಾಗಿ ೫ ಲಕ್ಷ ರೂ. ಹಣವನ್ನು ಕೂಡಿಟ್ಟಿದ್ದರು. ಲಾಕ್ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ನಿರ್ಗತಿಕರಿಗೆ ಈ ಹಣವನ್ನ ನೀಡುವಂತೆ ತಂದೆಯ ಮನವೊಲಿಸಿದ ನೇತ್ರಾ, ಹಣವನ್ನ ಬಡವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಈಕೆಯ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆ ಮನಸೋತು ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ.
13 ವರ್ಷದ ನೇತ್ರಾಗೆ ವಿಶ್ವಸಂಸ್ಥೆಯಿಂದ ಗೌರವ

Please follow and like us: