ಬಸ್‌ ಇಲ್ಲದೆ ನಡೆದೇ ಹೊರಟಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ

ಕಿತ್ತೂರು ತಾಲೂಕಿನ ನಿಚ್ಛಣಿಕೆ ಗ್ರಾಮದಲ್ಲಿ ಬಸ್ ಇಲ್ಲದಿದ್ದಕ್ಕೆ ನಡೆದುಕೊಂಡು ಹೊರಟಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು (Road Accident) ಡಿಕ್ಕಿಯಾಗಿದ್ದು, ಒಬ್ಬಳು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಕಿತ್ತೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ಅಕ್ಕವ್ವ ಹೂಲಿಕಟ್ಟಿ ಮೃತ ವಿದ್ಯಾರ್ಥಿನಿ. ಈ ಭಾಗದಲ್ಲಿ ಸಮರ್ಪಕವಾಗಿ ಬಸ್‌ ಸೇವೆ ಇರಲಿಲ್ಲ. ಹೀಗಾಗಿ ಶನಿವಾರ (ಡಿ.೩೧) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಭಾನುವಾರ (ಜ.೧) ಸಹ ಬಸ್ ವ್ಯವಸ್ಥೆ ಇಲ್ಲದೇ ಇದ್ದಿದ್ದಕ್ಕೆ ವಿದ್ಯಾರ್ಥಿನಿಯರು ಶಾಲೆಗೆ ನಡೆದೇ ಹೊರಟಿದ್ದರು ಮೃತ ಅಕ್ಕವ್ವ ೧5 ದಿನಗಳ ಹಿಂದೆಯೇ ಶಾಸಕ ಮಹಾಂತೇಶ ದೊಡ್ಡಗೌಡರಿಗೆ ಮನವಿ ಸಲ್ಲಿಸಿ, ಸಮರ್ಪಕ ಬಸ್‌ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಕೋರಿದ್ದಳು. ಆದರೂ ಬಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷದ ಪಾರ್ಟಿ: ಕುಡಿತದ ಮತ್ತಿನಲ್ಲಿ ಸ್ನೇಹಿತರಿಂದಲೇ ಯುವಕನ ಬರ್ಬರ ಕೊಲೆ

Sun Jan 1 , 2023
  ಹೊಸ ವರ್ಷದ ಸಂಭ್ರಮಾಚರಣೆಯ ಮತ್ತಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ಡಾಬಾವೊಂದರಲ್ಲಿ ಜತೆಯಾಗಿ ಕುಳಿತು ಕುಡಿದು ಕುಣಿದು ಕುಪ್ಪಳಿಸಿದ್ದ ಸ್ನೇಹಿತರೇ ತಮ್ಮ ಆಪ್ತ ಮಿತ್ರನನ್ನು ಕೊಂದು (New year tragedy) ಹಾಕಿದ್ದಾರೆ.ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಐಮರೆಡ್ಡಿ ಹಳ್ಳಿಯಲ್ಲಿ. ಕೊಲೆಯಾದವನು ಅದೇ ತಾಲೂಕಿನ ದೊಡ್ಡಗಂಜೂರು ಗ್ರಾಮದ ಮೂವತ್ತು ವರ್ಷದ ಯುವಕ ನವೀನ್‌ ಗೆಳೆಯರಾಗಿರುವ ಪುನೀತ್‌, ಅರ್ಜುನ್‌, ಚೇತನ್‌ ಮತ್ತು ನವೀನ್‌ ಶನಿವಾರ ರಾತ್ರಿ ಡಾಬಾದಲ್ಲಿ ಚೆನ್ನಾಗಿ ಪಾರ್ಟಿ […]

Advertisement

Wordpress Social Share Plugin powered by Ultimatelysocial