ರಾಮನಗರ : ವರ್ಷ ಪೂರ್ತಿ ಶ್ರಮ ವಹಿಸಿ ಬೆಳೆದ ೩೦೦ ಬಾಳೆ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿ ನಾಶಪಡಿಸಿರುವ ಘಟನೆ ರಾಮನಗರ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ. ದ್ವೇಷಕ್ಕೆ ರೈತ ಬೆಳೆದ ಬಾಳೆಗಿಡಗಳನ್ನು ನಾಶ ಪಡಿಸಿದ ಕಿಡಿಗೇಡಿಗಳು. ತಾಲ್ಲೂಕಿನ ಕೂಟಗಲ್ ಹೋಬಳಿ ತಿಮ್ಮಸಂದ್ರ ಗ್ರಾಮದ ಪಟೇಲ್ ರಾಜಣ್ಣ ಎಂಬುವರ ತೋಟದಲ್ಲಿ ಕಿಡಿಗೇಡಿಗಳು ತಡರಾತ್ರಿ ಕಟಾವಿಗೆ ಬಂದ ೩೦೦ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿ ದ್ವೇಷ ತೀರಿಸಿಕೊಂಡಿದ್ದಾರೆ. ಸುಮಾರು ೬ ಎಕರೆ ಅಡಿಕೆ ತೋಟದಲ್ಲಿ ೪೦೦೦ ಸಾವಿರ ಬಾಳೆ ಗಿಡಗಳನ್ನು ಅವರು ಬೆಳೆದಿದ್ದರು. ಬಾಳೆ ಗೊನೆಗಳು ಕಟಾವು ಮಾಡುವ ಹಂತಕ್ಕೆ ಬಂದಿದ್ದು, ಸುಮಾರು ೧.೫ ಲಕ್ಷ ರೂಪಾಯಿ ಮೌಲ್ಯದ ಬಾಳೆ ಬೆಳೆಯನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಜಮೀನಿನ ಮಾಲೀಕ ರಾಜಣ್ಣ ರಾತ್ರಿ ೯ ಗಂಟೆಗೆ ಮನೆಗೆ ಬಂದ ನಂತರ ಈ ಕೃತ್ಯವನ್ನು ಎಸಗಲಾಗಿದೆ. ಬೆಳಿಗ್ಗೆ ಅವರು ತೋಟಕ್ಕೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕಟಾವಿಗೆ ಬಂದ ಬಾಳೆ ಗಿಡಗಳು ಕಡಿದುಬಿದ್ದದನ್ನು ಕಂಡು ರೈತ ಕಣ್ಣೀರು ಇಟ್ಟಿದ್ದಾರೆ. ಘಟನೆಗೆ ಸಂಬAಧಿಸಿದAತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
300 ಬಾಳೆ ಗಿಡಗಳ ನಾಶ ದ್ವೇಷಕ್ಕೆ ಬೆಳೆ ನಾಶ ಮಾಡಿದ ಕಿಡಿಗೇಡಿಗಳು

Please follow and like us: