‘ಕೇಂದ್ರ ಕೊಟ್ಟರೂ ರಾಜ್ಯ ಸರ್ಕಾರ ಕೊಡಲಿಲ್ಲ’

ಕೇಂದ್ರ ವರ ಕೊಟ್ಟರು ರಾಜ್ಯ ಸರ್ಕಾರ್ ವರ ಕೊಡಲಿಲ್ಲ ಎನ್ನುವ ಪರಿಸ್ಥಿತಿ ಈಗ ಸ್ಯಾಂಡಲ್ ವುಡ್ ಗೆ ಬಂದಿದೆ.  ರಾಜ್ಯದ ಚಿತ್ರಮಂದಿರ ಮಾಲೀಕರು ತಮ್ಮ ಬೇಸರವನ್ನು ಹೊರಹಾಕುತ್ತಿದ್ದಂತೆ, ಸ್ಟಾರ್ ಕಲಾವಿದರು ಕೂಡ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಪೊಗರು ಚಿತ್ರದ ಬಿಡುಗಡೆಯ ತಯಾರಿಯಲ್ಲಿರುವ ಧ್ರುವ ಸರ್ಜಾ ಮತ್ತು ಕೆಜಿಎಫ್- ಚಾಪ್ಟರ್-2 ಚಿತ್ರವನ್ನು ತೆರೆಗೆ ತರಲು ಸಜ್ಜಾಗುತ್ತಿರುವ ಪ್ರಶಾಂತ್ ನೀಲ್  ‘ಮಾರ್ಕೇಟ್ ನಲ್ಲಿ ಗಿಜಿಗಿಜಿ’ ಬಸ್ ನಲ್ಲೂ ರಶ್’ ‘ಚಿತ್ರಮಂದಿರಗಳಿಗೆ ಮಾತ್ರ ಏಕೆ ಶೇಕಡಾ 50 ನಿರ್ಬಂಧ’?  ಎಂದು  ಟ್ವೀಟ್ ಮಾಡಿದ್ದು  ಸಾಕಷ್ಟು ವೈರಲ್ ಆಗಿದೆ.

ಫೆಬ್ರವರಿ 1 ರಿಂದ ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಸಿನಿಮಾ ನೋಡಲು ಅವಕಾಶ ನೀಡಬಹುದು ಎಂದು ಕೇಂದ್ರ ಸರ್ಕಾರ ಆದೇಶ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಹೊಸದೊಂದು ಆದೇಶ ಹೊರಡಿಸಿ, ಈ ತಿಂಗಳ ಅಂತ್ಯದವರೆಗೆ 50% ಪ್ರೇಕ್ಷಕರಿಗಷ್ಟೆ ಸಿನಿಮಾ ಮಂದಿರದೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದಿದೆ.  ರಾಜ್ಯ ಸರ್ಕಾರದ ಹೊಸ ಆದೇಶವು ಈಗಷ್ಟೆ ಹೊರಬಿದ್ದಿದ್ದು , ರಾಜ್ಯದಲ್ಲಿ ಕೊರೊನಾ ಪೂರ್ಣವಾಗಿ ಕಡಿಮೆಯಾಗಿಲ್ಲ, ಜೊತೆಗೆ ಕೊರೊನಾ ಎರಡನೇ ಅಲೆ ಸಹ ಬರುವ ಸಾಧ್ಯತೆ ಇರುವ ಕಾರಣ ಚಿತ್ರಮಂದಿರಗಳು ಯಥಾಸ್ಥಿತಿ ಮುಂದುವರೆಸಬೇಕು ಎಂದು ಆದೇಶ ಮಾಡಿದೆ. ಹೋಟೆಲ್, ರೆಸ್ಟೊರೆಂಟ್, ಮೆಟ್ರೋಗಳಲ್ಲೂ ಕೂಡ ಪೂರ್ಣ ಪ್ರಮಾಣದ ಸೀಟಿಂಗ್ ಸಾಮರ್ಥ್ಯದಷ್ಟು ಜನರಿಗೆ ಅವಕಾಶ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಫೆಬ್ರವರಿ ತಿಂಗಳಲ್ಲಿ ಕನ್ನಡದ ಕೆಲವು ದೊಡ್ಡ ನಟರ ಸಿನಿಮಾಗಳ ತೆರೆಗೆ ಬರುತ್ತಿವೆ. ಈ ನಡುವೆ ಕೇಂದ್ರ ಸರ್ಕಾರದ ಆದೇಶ ನಿರ್ಮಾಪಕರಿಗೆ, ಸಿನಿ ಪ್ರೇಕ್ಷಕರಿಗೆ ಖುಷಿ ನೀಡಿತ್ತು. ಆದರೆ ರಾಜ್ಯ ಸರ್ಕಾರದ ಹೊಸ ಆದೇಶ ನಿರ್ಮಾಪಕರಿಗೆ ಆತಂಕ ತಂದಿದೆ.

ಇದನ್ನೂ ಓದಿ :ಕಾರು ಹಾಗೂ ಲಾರಿ ನಡುವೆ ಅಪಘಾತ

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಸರ್ಕಾದ ನಿರ್ಧಾರದ ವಿರುದ್ಧ ಶಿವಣ್ಣ ಗರಂ

Wed Feb 3 , 2021
ಕೇಂದ್ರ ಸರ್ಕಾರ ಈಗಾಗ್ಲೇ ಚಿತ್ರಮಂದಿರಗಳಿಗೆ 100 ಪಸೆರ್ಂಟ್ ಆಕ್ಯಪೆನ್ಸಿ ಕೊಟ್ಟಿದೆ.. ಆದ್ರೆ ರಾಜ್ಯ ಸರ್ಕಾರ ಮಾತ್ರ ಕೇಂದ್ರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ತಿದೆ.. ಕೊರೋನಾ ಹವಳಿ ಇನ್ನೂ ಕಡಿಮೆಯಾಗಿಲ್ಲ, ಅಲ್ಲದೆ ಕೊರತೋನಾ ಹೊಸ ಅಲೆ ಬರುವ ಸಾಧ್ಯತೆ ಹೆಚ್ಚಾಗಿದೆ.. ಹಾಗಾಗಿ ಫೆಬ್ರವರಿ ಕೊನೆಯವರೆಗೂ ಥಿಯೇಟರ್ ಗಳಲ್ಲಿ ಕೇವಲ 50 ಪಸೆರ್ಂಟ್ ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಎಂದು ಪಟ್ಟು ಹಿಡಿದಿದೆ.. ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಸದ್ಯ ಇಡೀ ಸ್ಯಾಂಡಲ್ ವುಡ್ […]

Advertisement

Wordpress Social Share Plugin powered by Ultimatelysocial