ಗೀತಾ ಧಾರವಾಹಿಯಲ್ಲಿ ಭಾನುಮತಿಯಾಗಿ ವಿಜಿ ಹಾಗೂ ಗೀತಾಗೆ ಕಾಟ ಕೊಡುವ ಈ ನಟಿಯ ಪರಿಚಯ ಇದೆಯಾ? ಕಿರುತೆರೆಯ ಖ್ಯಾತ ನಟಿ ಇವರು.
ನಾವಿಲ್ಲಿ ಮಾತಾಡ್ತೀರೋದು ಬೇರೆ ಯಾರ ಬಗ್ಗೆಯೂ ಅಲ್ಲ. ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿ ಶರ್ಮಿತಾ ಗೌಡ ಬಗ್ಗೆ. ನಟಿ ಶರ್ಮಿತಾ ಗೌಡ ಅವರು ಬೀಚ್ ಬೇಬಿಯಾಗಿ ಬದಲಾಗಿದ್ದಾರೆ. ಸಖತ್ತಾಗಿ ವೆಕೇಷನ್ ಎಂಜಾಯ್ ಮಾಡಿದ್ದಾರೆ. ಫೋಟೋಸ್ ಕೂಡಾ ಶೇರ್ ಮಾಡಿದ್ದಾರೆ. ಸ್ಕ್ವೇರ್ ಬ್ಲ್ಯಾಕ್ ಗಾಗಲ್ಸ್ ಹಾಗೂ ಬ್ಲ್ಯಾಕ್ & ವೈಟ್ ಕಾಂಬಿನೇಷನ್ನ ಈಜುಡುಗೆಯನ್ನು ಧರಿಸಿ ನಟಿ ಕಡಲ ತೀರದಲ್ಲಿ ನಿಂತು ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದು ಅವರ ಫೋಟೋಸ್ ವೈರಲ್ ಆಗಿವೆ.
ಬೋಟ್ನಲ್ಲಿ ಕುಳಿತು ಬಿಸಿಲಿನ ನಡುವೆ ಕಡಲಿನ ವ್ಯೂ ಎಂಜಾಯ್ ಮಾಡಿದ್ದಾರೆ ನಟಿ. ರೆಡ್ ಲಿಪ್ಸ್ಟಿಕ್ ಧರಿಸಿ ನಟಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಕಪ್ಪಿನ ಒಂದು ದಾರ ಹಾಗೂ ಸಿಂಪಲ್ಲಾಗಿರುವ ಒಂದು ಚೈನ್ ಧರಿಸಿದ್ದರು. ಅವರ ಫೋಟೋಗಳಿಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಫ್ಯಾನ್ಸ್ ಅವರ ಈ ಡಿಫರೆಂಟ್ ಲುಕ್ ಇಷ್ಟಪಟ್ಟಿದ್ದಾರೆ.
ಇನ್ನೊಂದು ಸೆಟ್ ಫೋಟೋದಲ್ಲಿ ನಟಿ ಗುಲಾಬಿ ಬಣ್ಣದ ಡ್ರೆಸ್ ಧರಿಸಿದ್ದರು. ಸುಂದರವಾದ ಡ್ರೆಸ್ ಧರಿಸಿ ಕ್ಯಾಟ್ ಐ ಗಾಗಲ್ಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ನಟಿ ಪಿಂಕ್ ಕಲರ್ ಲಿಪ್ಸ್ಟಿಕ್ ಹಚ್ಚಿದ್ದರು. ಬೋಟ್ಗಳನ್ನು ನಿಲ್ಲಿಸಿದ್ದ ಸ್ಥಳದಲ್ಲಿ ಕುಳಿತು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ನಟಿ ಗೀತಾ ಧಾರವಾಹಿಯಲ್ಲಿ ವಿಲನ್ ರೋಲ್ ಮಾಡುತ್ತಾ ಭಾರೀ ಜನಪ್ರಿಯತೆಯನ್ನು ಗಳಿಸಿದ್ದಾರೆ. ಗೀತಾಳನ್ನು ಕಾಡುವ ಅತ್ತೆಯಾಗಿ ನಟಿಸುವ ಇವರು ನಟನೆಯಿಂದ ಪ್ರೇಕ್ಷರನ್ನು ಮೆಚ್ಚಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada