ಕೇರಳದಲ್ಲಿ ಮತ್ತೊಂದು ವಿಚಿತ್ರ ಜ್ವರ ಪತ್ತೆ! ವೆಸ್ಟ್ ನೈಲ್ ಜ್ವರಕ್ಕೆ ಓರ್ವ ಬಲಿ

 

ಕೇರಳ: ಕೊರೋನಾ  ಬಂದಾಗಲೂ ದೇವರ ಸ್ವಂತ ನಾಡು  ಕೇರಳ (Kerala) ಕಂಗೆಟ್ಟು ಹೋಗಿತ್ತು. ಬಾವಲಿ ಜ್ವರ ಬಂದಾಗಲೂ ಕೇರಳ ನಲುಗಿತ್ತು, ಟೋಮೆಟೋ ಜ್ವರ (Tomato fever) ಎಂಬ ವಿಚಿತ್ರ ಕಾಯಿಲೆಯೂ ಕೇರಳದಲ್ಲೇ ಪತ್ತೆಯಾಗಿತ್ತು.
ಇದೀಗ ಕೇರಳದಲ್ಲಿ ಮತ್ತೊಂದು ವಿಚಿತ್ರ ಕಾಯಿಲೆ (Disease) ಕಾಣಿಸಿಕೊಂಡಿದೆ. ಅದೇ ವೆಸ್ಟ್ ನೈಲ್ (West Nail Fever) ಫೀವರ್. ಕೇರಳದ ಆರೋಗ್ಯ ಇಲಾಖೆ (Kerala Health Department) ಇದೀಗ ಹೊಸ ಬಗೆಯ ವೈರಸ್ (Virus) ಬಗ್ಗೆ ಎಚ್ಚರಿಕೆ ನೀಡಿದ್ದು, ಕೇರಳದ ತ್ರಿಶೂರ್ (Thrissur) ಜಿಲ್ಲೆಯಲ್ಲಿ 47 ವರ್ಷದ ವ್ಯಕ್ತಿಯೊಬ್ಬರು ವೆಸ್ಟ್‌ ನೈಲ್‌ ಜ್ವರದ ಕಾರಣದಿಂದಾಗಿ ಮಾರ್ಚ್‌ 29ರಂದು ಸಾವನ್ನಪ್ಪಿದ್ದಾರೆ. ಇದೀಗ ಮತ್ತಿಬ್ಬರಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿರೋ ಶಂಕೆ ವ್ಯಕ್ತವಾಗಿದ್ದು, ಅವರ ರಕ್ತದ ಮಾದರಿಗಳನ್ನು (Blood Samples) ಲ್ಯಾಬ್‌ಗೆ (Lab) ಕಳಿಸಲಾಗಿದೆ.
ತ್ರಿಶೂರ್‌ನಲ್ಲಿ ವೆಸ್ಟ್ ನೈಲ್ ಜ್ವರದಿಂದ ಸಾವನ್ನಪ್ಪಿದ ವ್ಯಕ್ತಿ
ಕೇರಳದ ತ್ರಿಶೂರ್‌ನಲ್ಲಿ ವೆಸ್ಟ್ ನೈಲ್ ಜ್ವರದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾನೆ. ಕಳೆದ ಮೇ 17ರಂದು ಅವರಿಗೆ ಶೀತ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಗುಣಮುಖರಾಗಲಿಲ್ಲ. ಕೊನೆಗೆ ತ್ರಿಶೂರ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು, ಆಗ ಅವರಿಗೆ ವೆಸ್ಟ್‌ ನೈಲ್‌ ಜ್ವರ ಇರುವುದು ಪತ್ತೆಯಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತನನ್ನು ತ್ರಿಶೂರ್ ಜಿಲ್ಲೆಯ ಪಂಚೇರಿ ನಿವಾಸಿಯಾದ ಪುತ್ತನ್‌ಪುರಕ್ಕಲ್ ಜೋಬಿ (47) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಸೋಂಕಿನಿಂದ ಸಾವನ್ನಪ್ಪಿರುವ ಮೊದಲ ಪ್ರಕರಣ ಇದಾಗಿದೆ.
ಮತ್ತಿಬ್ಬರಲ್ಲಿ ವೆಸ್ಟ್ ನೈಲ್ ಜ್ವರದ ಶಂಕೆ
ಇನ್ನು ಕೇರಳದ ಮತ್ತಿಬ್ಬರಲ್ಲಿ ವೆಸ್ಟ್ ನೈಲ್ ಜ್ವರ ಇರುವ ಶಂಕೆ ವ್ಯಕ್ತವಾಗಿದೆ. ಅವರ ರಕ್ತದ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳಿಸಲಾಗಿದೆ.
ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಸೂಚನೆ
ಇನ್ನು ಸಾವಿನ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳಿಂದ ಹರಡುವ ವೆಸ್ಟ್ ನೈಲ್ ಜ್ವರವು ಈ ಹಿಂದೆ ಕೇರಳದಲ್ಲಿ 2019 ರಲ್ಲಿ 6 ವರ್ಷದ ಮಗುವನ್ನು ಬಲಿ ತೆಗೆದುಕೊಂಡಿತ್ತು.
ವೆಸ್ಟ್ ನೈಲ್ ವೈರಸ್ ಎಂದರೇನು?
ವೆಸ್ಟ್ ನೈಲ್ ಜ್ವರವು ವೆಸ್ಟ್ ನೈಲ್ ವೈರಸ್‌ನಿಂದ ಉಂಟಾಗುವ ವೈರಲ್ ಕಾಯಿಲೆಯಾಗಿದ್ದು, ಕ್ಯುಲೆಕ್ಸ್ ಸೊಳ್ಳೆಯಿಂದ ಹರಡುತ್ತದೆ. ಅವು ಸೋಂಕಿತ ಪಕ್ಷಿಗಳ ಸಂಪರ್ಕಕ್ಕೆ ಹೋದಾಗ ಸೋಂಕಿಗೆ ಒಳಗಾಗುತ್ತವೆ. ಸೋಂಕಿತ ಮನುಷ್ಯರು ಅಥವಾ ಪ್ರಾಣಿಗಳ ಸಂಪರ್ಕದಿಂದ ಇದು ಹರಡುತ್ತದೆ ಎಂದು ತಿಳಿದಿಲ್ಲ.
ಈ ಜ್ವರದ ಲಕ್ಷಣಗಳು ಏನು?
ಸುಮಾರು 80% ಸೋಂಕಿತ ಜನರು ಲಕ್ಷಣ ರಹಿತರಾಗಿದ್ದಾರೆ. ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳು ಇತ್ಯಾದಿಗಳು ಕಂಡು ಬರುತ್ತವೆ. ತೀವ್ರ ವೆಸ್ಟ್ ನೈಲ್ ಕಾಯಿಲೆ 1% ಕ್ಕಿಂತ ಕಡಿಮೆ ಇರುತ್ತದೆ. ಕೆಲವರಿಗೆ ಎನ್ಸೆಫಾಲಿಟಿಸ್, ಮೆನಿಂಜೈಟಿಸ್, ಪಾರ್ಶ್ವವಾಯು, ಮತ್ತು ಕೆಲವೊಬ್ಬರಿಗೆ ಸಾವು ಕೂಡ ಕಂಡು ಬರುತ್ತದೆ.
1937ರಲ್ಲಿ ಮೊದಲ ಪ್ರಕರಣ ಪತ್ತೆ
WHO ಪ್ರಕಾರ, ವೆಸ್ಟ್ ನೈಲ್‌ನ ಮೊದಲ ಪ್ರಕರಣವು 1937 ರಲ್ಲಿ ವರದಿಯಾಗಿದೆ. ಆಗ ಉಗಾಂಡಾದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಇದರ ಸೋಂಕಿಗೆ ಒಳಗಾಗಿದ್ದರು. ನಂತರ ಉತ್ತರ ಈಜಿಪ್ಟ್‌ನ ನೈಲ್ ಡೆಲ್ಟಾ ಪ್ರದೇಶದಲ್ಲಿ 1953 ರಲ್ಲಿ ವೈರಸ್ ಅನ್ನು ಗುರುತಿಸಲಾಯಿತು. ನಂತರ ಈ ವೈರಸ್ ಕಾಗೆ ಮತ್ತು ಪಾರಿವಾಳಗಳಲ್ಲಿ ಕಂಡುಬಂದಿದೆ.
ಪಕ್ಷಿಗಳಲ್ಲಿ ಕಾಣಿಸಿಕೊಂಡಿತ್ತು ಈ ವಿಚಿತ್ರ ಜ್ವರ
1997 ರ ಮೊದಲು, ಈ ವೈರಸ್ ಪಕ್ಷಿಗಳಿಗೆ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿಲ್ಲ. ಆದರೆ, ಇದರ ನಂತರ ಈ ವೈರಸ್‌ನ ಅಪಾಯಕಾರಿ ತಳಿಯು ಇಸ್ರೇಲ್‌ನಲ್ಲಿ ಕಾಣಿಸಿಕೊಂಡಿತು. ಇದರಿಂದಾಗಿ ಹಲವು ಪಕ್ಷಿಗಳು ಸಾವನ್ನಪ್ಪಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಕ್ಕೆ ಆಗಮಿಸಿದ ಮುಂಗಾರು: ಜೂನ್‌ನಲ್ಲಿ ಮಳೆ ಕುಂಠಿತ ಸಾಧ್ಯತೆ

Tue May 31 , 2022
ಬೆಂಗಳೂರು: ಕೇರಳಕ್ಕೆ ಭಾನುವಾರ (ಮೇ 29) ಪ್ರವೇಶಿಸಿರುವ ನೈಋತ್ಯ ಮುಂಗಾರು ಮಾರುತಗಳು ರಾಜ್ಯಕ್ಕೆ ಮಂಗಳವಾರ ಆಗಮಿಸಿವೆ. ಮುಂದಿನ 3-4 ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಿಸಲಿದೆ. 2020 ಮತ್ತು 2021ರಲ್ಲಿ ವಾಡಿಕೆಯಂತೆ ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿದರೆ ಈ ಬಾರಿ ವಾಡಿಕೆಗಿಂತ ಮುನ್ನವೇ ಆಗಮಿಸಿದೆ. ವಾಡಿಕೆಗಿಂತ ಮುನ್ನವೇ ಮಾರುತಗಳು ಎಂಟ್ರಿ ಕೊಟ್ಟರೂ ಜೂನ್‌ನಲ್ಲಿ ಮಳೆ ಕುಂಠಿತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದ್ದು, ರೈತರು ಕಂಗಾಲಾಗಿದ್ದಾರೆ. ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಯಂತೆ ಒಟ್ಟಾರೆ 199 ಮಿಮೀ […]

Advertisement

Wordpress Social Share Plugin powered by Ultimatelysocial