ರಾಜ್ಯಕ್ಕೆ ಆಗಮಿಸಿದ ಮುಂಗಾರು: ಜೂನ್‌ನಲ್ಲಿ ಮಳೆ ಕುಂಠಿತ ಸಾಧ್ಯತೆ

ಬೆಂಗಳೂರು: ಕೇರಳಕ್ಕೆ ಭಾನುವಾರ (ಮೇ 29) ಪ್ರವೇಶಿಸಿರುವ ನೈಋತ್ಯ ಮುಂಗಾರು ಮಾರುತಗಳು ರಾಜ್ಯಕ್ಕೆ ಮಂಗಳವಾರ ಆಗಮಿಸಿವೆ. ಮುಂದಿನ 3-4 ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಿಸಲಿದೆ.

2020 ಮತ್ತು 2021ರಲ್ಲಿ ವಾಡಿಕೆಯಂತೆ ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿದರೆ ಈ ಬಾರಿ ವಾಡಿಕೆಗಿಂತ ಮುನ್ನವೇ ಆಗಮಿಸಿದೆ.

ವಾಡಿಕೆಗಿಂತ ಮುನ್ನವೇ ಮಾರುತಗಳು ಎಂಟ್ರಿ ಕೊಟ್ಟರೂ ಜೂನ್‌ನಲ್ಲಿ ಮಳೆ ಕುಂಠಿತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದ್ದು, ರೈತರು ಕಂಗಾಲಾಗಿದ್ದಾರೆ. ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಯಂತೆ ಒಟ್ಟಾರೆ 199 ಮಿಮೀ ಮಳೆಯಾಗಬೇಕು. ಆದರೆ, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ.

ಜೂನ್‌ನಲ್ಲಿ ಮಳೆ ಕೊರತೆಯಾದರೆ ಜುಲೈನಲ್ಲಿ ವಾಡಿಕೆಯಷ್ಟೇ, ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮತ್ತು ಸೆಪ್ಟೆಂಬರ್‌ನಲ್ಲಿ ವಾಡಿಕೆಯಷ್ಟೇ ಮಳೆ ಬೀಳಲಿದೆ. ಅಸಾನಿ ಚಂಡಮಾರುತಗಳು ತೇವಾಂಶ ಭರಿತ ಮೋಡಗಳನ್ನು ಸೆಳೆದ ಪರಿಣಾಮ ಜೂನ್‌ನಲ್ಲಿ ಮುಂಗಾರು ಕುಂಠಿತವಾಗಲು ಕಾರಣವಾಗಿದೆ. ಶೇ.90ಕ್ಕಿಂತ ಕಡಿಮೆಗಿಂತ ಮಳೆ ಬಿದ್ದರೆ ಕೊರತೆ, ಶೇ.90-96ವರೆಗೆ ಸುರಿದರೆ ವಾಡಿಕೆಗಿಂತ ಕಡಿಮೆ, ಶೇ.96-104ವರೆಗೆ ಬಿದ್ದರೆ ವಾಡಿಕೆಯಷ್ಟೆ, ಶೇ.104-110ವರೆಗೆ ಸುರಿದರೆ ವಾಡಿಕೆಗಿಂತ ಹೆಚ್ಚು ಹಾಗೂ ಶೇ.110ಗಿಂತ ಹೆಚ್ಚು ಸುರಿದರೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ ಎನ್ನಲಾಗುತ್ತದೆ.

2021ರ ಜೂ.1ರಿಂದ ಜು.4ರವರೆಗೆ ರಾಜ್ಯಾದ್ಯಂತ ಒಟ್ಟಾರೆ 233 ಮಿಮೀ ಮಳೆಯಾಗುವ ಬದಲು 206 ಮಿಮೀ ಸುರಿದಿತ್ತು. ಶೇ.11 ಮಳೆ ಕುಂಠಿತವಾಗಿತ್ತು. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಸರಾಸರಿ ಶೇ.30 ಮಳೆ ಕೊರತೆ ಉಂಟಾಗಿತ್ತು. ಆದರೆ, ಉತ್ತರ ಒಳನಾಡಿನಲ್ಲಿ ಭರ್ಜರಿ ವರ್ಷಧಾರೆಯಾಗಿತ್ತು. ಈ ಬಾರಿ ಜೂನ್‌ನಲ್ಲಿಯೂ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬೀಳಲಿದೆ. ಆದ್ದರಿಂದ, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಕೇರಳದಲ್ಲಿ ಮಾರುತಗಳು ಶಕ್ತಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳಲು ಇನ್ನೂ ಹೆಚ್ಚಿನ ಸಮಯ ಬೇಕಾಗಲಿದೆ. ಮೋಡಗಳು ಇದ್ದರೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುವುದಿಲ್ಲ.

ಸಾಧಾರಣ ಮಳೆ: ರಾಜ್ಯದಲ್ಲಿ ಮುಂದಿನ 3-4 ದಿನ ಸಾಧಾರಣ ಮಳೆ ಬೀಳಲಿದೆ. ಮಂಗಳವಾರ ಚಾಮರಾಜನಗರದ ಹರದನಹಳ್ಳಿಯಲ್ಲಿ 46 ಮಿಮೀ, ದಕ್ಷಿಣ ಕನ್ನಡದ ಸುಳ್ಯದಲ್ಲಿ 41 ಮಿಮೀ, ಮೈಸೂರಿನ ಹುಣಸೂರಿನಲ್ಲಿ 32 ಮಿಮೀ ಮತ್ತು ಮಂಡ್ಯದ ಕೆ.ಆರ್.ಪೇಟೆಯಲ್ಲಿ 22 ಮಿಮೀ ಮಳೆ ಸುರಿದಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಜಾನನ ಅಂಡ್ ಗ್ಯಾಂಗ್ ಪ್ರಿ-ರಿಲೀಸ್ ಸಂಭ್ರಮ...ಜೂನ್ 3ಕ್ಕೆ ಬರ್ತಿದೆ ಸಿನಿಮಾ

Wed Jun 1 , 2022
ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಶ್ರೀಮಹದೇವ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾ ಜೂನ್ 3 ರಂದು ಬಿಡುಗಡೆಯಾಗುತ್ತಿದೆ. ಟ್ರೈಲರ್-ಹಾಡುಗಳಿಂದ ​ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಿನ್ನೆ ನೆರವೇರಿತು. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ತಮ್ಮ ಸಿನಿಮಾ ನೋಡಿ ಬೆಂಬಲಿಸುವಂತೆ ಕೇಳಿಕೊಂಡರು.ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾತನಾಡಿ, ಹೊಸತನದ ಹಂಬಲದಲ್ಲಿ ಚಿತ್ರತಂಡವಿದೆ.ಇದು ಎರಡು ವರ್ಷದ ಜರ್ನಿ. ಸಿನಿಮಾ ಸೂಪರ್ ಆಗಿದೆ. […]

Advertisement

Wordpress Social Share Plugin powered by Ultimatelysocial