ರಸ್ತೆಗಳ ಮೇಲಿನ ವಿವಿಧ ಬಣ್ಣಗಳ ಪಟ್ಟಿ ಬಗ್ಗೆ ನಿಮಗೆ ತಿಳಿದಿರಲಿ ಮಾಹಿತಿ

 

ರಸ್ತೆಗಳ ಮೇಲೆ ಬಳಿಯಲಾಗಿರುವ ಬಿಳಿ ಮತ್ತು ಹಳದಿ ಪಟ್ಟಿಗಳು ಸಂಚಾರ ಸುರಕ್ಷತೆ ದೃಷ್ಟಿಯಿಂದ ಏನನ್ನು ಸೂಚಿಸುತ್ತವೆ ಎಂದು ನಮಗೆ ಸಾಮಾನ್ಯವಾಗಿ ಸ್ಪಷ್ಟವಾಗಿ ತಿಳಿದಿರುವುದಿಲ್ಲ.ರಸ್ತೆಗಳ ಮೇಲಿನ ಬಿಳಿ ಮತ್ತು ಹಳದಿ ಪಟ್ಟಿಗಳ ಬಗ್ಗೆ ಈ ಅಂಶಗಳು ನಿಮಗೆ ತಿಳಿದಿರಲಿ:

ಬಿಳಿ ಪಟ್ಟಿಗಳು

ಒಂದೇ ದಿಕ್ಕಿನಲ್ಲಿ ಸಂಚರಿಸುತ್ತಿರುವ ವಾಹನಗಳನ್ನು ಈ ಪಟ್ಟಿಗಳು ಪ್ರತ್ಯೇಕಿಸುತ್ತವೆ.ಬಿಳಿ ಪಟ್ಟಿಗಳನ್ನು ಮೂರು ವರ್ಗಗಳಾಗಿ ವಿಭಾಗಿಸಲಾಗಿದೆ: ಸಿಂಗಲ್ ಬ್ರೋಕನ್, ಸಿಂಗಲ್ ಸಾಲಿಡ್ ಮಾರ್ಕಿಂಗ್ ಮತ್ತು ಡಬಲ್ ಸಾಲಿಡ್ ಮಾರ್ಕಿಂಗ್.ಬ್ರೋಕನ್ ಆಗಿರುವ ಗುರುತುಗಳು ಪರಿಸ್ಥಿತಿ ಸುರಕ್ಷಿತವಾಗಿದೆ ಎಂದು ಖಾತ್ರಿ ಮಾಡಿಕೊಂಡು ಪಥಗಳನ್ನು ಬದಲಿಸಬಹುದು ಎಂದು ಸೂಚಿಸುತ್ತವೆ. ಸಾಲಿಡ್ ಬಿಳಿಯ ಮಾರ್ಕಿಂಗ್‌ಗಳು, ಈ ಪಥಗಳನ್ನು ನೀವು, ಅಪಾಯವೊಂದನ್ನು ತಪ್ಪಿಸಬೇಕಾದ ಅನಿವಾರ್ಯ ಪರಿಸ್ಥಿತಿ ಹೊರತು, ಯಾವತ್ತೂ ದಾಟಬಾರದು ಎಂದು ಸೂಚಿಸುತ್ತದೆ. ಬಹಳಷ್ಟು ಕಾರುಗಳು ಈ ನಿಯಮಗಳನ್ನು ಸಂಚಾರಿ ಸಿಗ್ನಲ್ ಜಂಕ್ಷನ್‌ಗಳಲ್ಲಿ ಉಲ್ಲಂಘನೆ ಮಾಡುವ ಕಾರಣ ಮಿಕ್ಕ ಸಂಚಾರಿಗಳಿಗೆ ಅಪಾಯ ತಂದೊಡ್ಡುತ್ತವೆ. ಡಬಲ್ ಸಾಲಿಡ್ ಗುರುತುಗಳು, ನೀವು ಯಾವುದೇ ಕಾರಣಕ್ಕೂ ಅವುಗಳನ್ನು ದಾಟುವಂತಿಲ್ಲ ಎಂದು ಸೂಚಿಸುತ್ತವೆ.

ನಿರಂತರ ಹಳದಿ ಗೆರೆ

ಇಂಥ ಹೆದ್ದಾರಿಗಳಲ್ಲಿ, ನೀವು ನಿಮ್ಮ ಬದಿಯಲ್ಲಿ ಇರುವಾಗ ಹೊರತುಪಡಿಸಿದಂತೆ ಓವರ್‌ಟೇಕ್ ಮಾಡುವುದನ್ನು ನಿಷೇಧ ಮಾಡಲಾಗಿರುತ್ತದೆ. ಎರಡೂ ಬದಿಗಳಲ್ಲಿ ಹಳದಿ ರೇಖೆಯನ್ನು ದಾಟುವುದನ್ನು ನಿಷೇಧಿಸಲಾಗಿರುತ್ತದೆ. ದೃಷ್ಟಿ ಗೋಚರತೆ ಕಡಿಮೆ ಇರುವ ಜಾಗಗಳಲ್ಲಿ ಸಂಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಗುರುತುಗಳನ್ನು ಹಾಕಲಾಗುತ್ತದೆ.

ನಿರಂತರವಾದ ಡಬಲ್ ಹಳದಿ ರೇಖೆ

ರಸ್ತೆಯಲ್ಲಿ ಕಂಡು ಬರುವ ಅತ್ಯಂತ ಕಠಿಣ ನಿರ್ಬಂಧವನ್ನು ಸೂಚಿಸುವ ಡಬಲ್ ಹಳದಿ ರೇಖೆಯ ಎರಡೂ ಬದಿಗಳಲ್ಲಿ ಸಂಚಾರ ಮಾಡುವ ಮಂದಿಯ ಈ ಪಟ್ಟಿಯನ್ನು ಯಾವ ಕಾರಣಕ್ಕೂ ದಾಟಿ ಓವರ್‌ಟೇಕ್ ಮಾಡಬಾರದು. ಅಲ್ಲದೇ ಇಂಥ ಕಡೆಗಳಲ್ಲಿ ಯೂ-ಟರ್ನ್ ಅಥವಾ ಪಥಗಳ ಬದಲಾವಣೆಯನ್ನು ಸಹ ಮಾಡಕೂಡದು. ಈ ಪರಿಯ ಗುರುತುಗಳನ್ನು ಸಾಮಾನ್ಯವಾಗಿ ಅಪಾಯಕಾರಿಯಾದ ದ್ವಿಪಥ ಹೆದ್ದಾರಿಗಳಲ್ಲಿ ಕಾಣುತ್ತೇವೆ.

ಮುರಿದ ಹಳದಿ ರೇಖೆ

ಪಟ್ಟಿಯಲ್ಲಿರುವ ನಿಯಮಗಳ ಪೈಕಿ ಇದು ಸ್ವಲ್ಪ ಸಡಿಲವಾಗಿದೆ. ನಿಮಗೆ ಇಂಥ ಪರಿಸ್ಥಿತಿಯಲ್ಲಿ ಪಟ್ಟಿಯನ್ನು ದಾಟಿ ಓವರ್‌ಟೇಕ್ ಮಾಡಲು, ಯೂ-ಟರ್ನ್ ತೆಗೆದುಕೊಳ್ಳಲು ಅನುಮತಿ ಸಿಗುತ್ತದೆ.

ತುದಿಯ ಸಾಲುಗಳು

ರಸ್ತೆಯ ಎಲ್ಲೆಯಿಂದ ಕೊಂಚ ಒಳಗಿರುವಂತೆ ಕಾಣಸಿಗುವ ತುದಿಯ ಸಾಲುಗಳು ದಾರಿಗಳ ವಿಸ್ತಾರ ಎಲ್ಲಿ ಅಂತ್ಯಗೊಳ್ಳುತ್ತದೆ ಹಾಗೂ ತುರ್ತು ನಿಲುಗಡೆ ಸ್ಥಳಗಳು ಇರುತ್ತವೆ ಎಂದು ತೋರುತ್ತವೆ. ತುದಿಯ ಸಾಲುಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಬಿಳಿ ಬಣ್ಣದ ತುದಿ ಪಾದಚಾರಿ ಮಾರ್ಗದ ಬದಿ ತೋರುತ್ತದೆ. ವಿಭಜಿತ ಹೆದ್ದಾರಿಗಳು ಮತ್ತು ಒನ್‌-ವೇ ಪಥಗಳಲ್ಲಿ, ಘನವಾದ ಹಳದಿ ಬಣ್ಣದ ಗಡಿರೇಖೆಯು ಮಾರ್ಗದ ಎಡಬದಿ ಎಲ್ಲೆಯನ್ನು ಗುರುತಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ'ಗೂ 'ಕೊರೋನಾ ಪಾಸಿಟಿವ್'

Wed Feb 2 , 2022
  ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್   ಪುತ್ರಿ ಐಶ್ವರ್ಯಾ   ಅವರಿಗೂ ಕೊರೋನಾ ಪಾಸಿಟಿವ್   ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರೋದಾಗಿ ತಿಳಿದು ಬಂದಿದೆ.ಈ ಕುರಿತಂತೆ ತಮ್ಮ ಇನ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವಂತ ರಜನಿಕಾಂತ್ ಪುತ್ರಿ ಐಶ್ವರ್ಯಾ, ಕೊರೋನಾ ಎಲ್ಲಾ ಮುಂಜಾಗ್ರತಾ ಕ್ರಮಗಳ ನಂತ್ರವೂ, ತನಗೊ ಕೊರೋನಾ ಪರೀಕ್ಷೆಯಿಂದಾಗಿ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. ತಪ್ಪದೇ ಎಲ್ಲರೂ ಮಾಸ್ಕ್ ಧರಿಸಿ, ಲಸಿಕೆಯನ್ನು ಪಡೆಯೋದು ಮರೆಯಬೇಡಿ ಎಂಬುದಾಗಿ […]

Advertisement

Wordpress Social Share Plugin powered by Ultimatelysocial