ರಾಜ್ಯಸಭೆ ಚುನಾವಣೆ: ಜಯರಾಮ್ ರಮೇಶ್ ಮತ್ತು ಮನ್ಸೂರ್ ಅಲಿ ಖಾನ್ ಗೆಲ್ಲುತ್ತಾರೆ – ಶಾಸಕ ಜಮೀರ್ ಅಹ್ಮದ್

ಬೆಂಗಳೂರು: ಕಾಂಗ್ರೆಸ್ ಪಕ್ಷವು ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ( Rajya Sabha Election ) ಸ್ಪರ್ಧಿಸಲು ಈಗಾಗಲೇ ಜಯರಾಮ್ ರಮೇಶ್ ( Jairam Ramesh ) ಮೊದಲನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಇಂದು ಅವರು ನಾಮಪತ್ರ ಸಲ್ಲಿಕೆ ಮಾಡಿದರು.

ಇದೀಗ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಲು ಪಕ್ಷವು ನಿರ್ಧರಿಸಿದೆ ಎಂದು ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ( B Z Zameer Ahamad Khan ) ಅವರು ತಿಳಿಸಿದರು.

ಇಂದು ಸಿ ಎಲ್ ಪಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲನೇ ಅಭ್ಯರ್ಥಿಗೆ ಮತ ಹಾಕಿ, ಇನ್ನೂ 25 ಮತಗಳು ಉಳಿಯುತ್ತವೆ. ಇನ್ನು ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಗೆ ಅಷ್ಟಾಗಿ ಸಂಖ್ಯಾಬಲ ಇಲ್ಲ ಹಾಗೂ ಇತರ ಪಕ್ಷಗಳ ಶಾಸಕರೂ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಹಾಗಾಗಿ, ಈ ಬಾರಿ ಕಾಂಗ್ರೆಸ್ ನ ಅಭ್ಯರ್ಥಿಗಳು ಗೆಲ್ಲುವ ಭರವಸೆ ನಮಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಚಾಮರಾಜಪೇಟೆ ಶಾಸಕರು ಮತ್ತು ಮಾಜಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಾಂಧಿ ಹೋರಾಟದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎನ್ನುವುದು ಒಪ್ಪಲು ಸಾಧ್ಯವಿಲ್ಲ ಎಂದ ಸಿ.ಟಿ.ರವಿ

Mon May 30 , 2022
ನವದೆಹಲಿ: ದೇಶ ವಿಭಜನೆಗೆ ನೆಹರೂ ಮುಂದಾದರೂ ಅದನ್ನು ತಡೆಯಲು ಮಹಾತ್ಮಾ ಗಾಂಧಿಜೀ ಏನೂ ಮಾಡಲಾಗಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ,ಟಿ.ರವಿ, ಎರಡನೇ ಮಹಾಯುದ್ಧದ ಪರಿಣಾಮ ಬ್ರಿಟೀಷರು ಸಾಮರ್ಥ್ಯ ಕಳೆದುಕೊಂಡರು ಹಾಗಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೇಶಗಳಿಗೆ ಬ್ರಿಟೀಷರು ಸ್ವಾತಂತ್ರ್ಯ ನೀಡಿದರು. ಗಾಂಧಿ ಹೋರಾಟದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಎಂದು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಗಾಂಧಿ ಜನಸಮೂಹ ಒಗ್ಗೂಡಿಸಿದರು, ಕ್ರಾಂತಿಕಾರಿಗಳು ಹೋರಾಟ ಮಾಡಿದರು ಎಂದು […]

Advertisement

Wordpress Social Share Plugin powered by Ultimatelysocial