ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ದಾರಿ ತಪ್ಪಿದ ಬಾಲಕ.

ಮಾನವೀಯತೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕೆಲವೊಂದು ಘಟನೆಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಲ್ಲದೆ ಈ ಕಾರಣಕ್ಕಾಗಿಯೇ ಮಾನವೀಯತೆ ಇನ್ನೂ ಇದೆ ಎಂಬ ಸಮಾಧಾನದ ಭಾವವನ್ನು ಮೂಡಿಸುತ್ತದೆ. ಅಂತಹ ಮನ ಕಲಕುವ ಸ್ಟೋರಿಯೊಂದು ಇಲ್ಲಿದೆ.ಈ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದ್ದು, ಶಾಲಾ ಬಾಲಕಿಯೊಬ್ಬಳು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಗೊಂದಲಕ್ಕೊಳಗಾಗಿ ದಾರಿ ತಪ್ಪಿದ್ದಾಳೆ.ಹೀಗಾಗಿ ಪರೀಕ್ಷೆ ತಪ್ಪುವ ಆತಂಕದಿಂದ ಅಸಹಾಯಕಳಾಗಿ ಅಳುತ್ತಾ ನಿಂತಿದ್ದು, ಇದನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ಇನ್ಸ್ಪೆಕ್ಟರ್, ಸೌವಿಕ್ ಚಕ್ರವರ್ತಿ ಗಮನಿಸಿದ್ದಾರೆ.ಬಾಲಕಿ ಬಳಿ ತೆರಳಿದ ಅವರು, ವಿಚಾರಿಸಿದ ವೇಳೆ ಕುಟುಂಬ ಸದಸ್ಯರು ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗಾಗಿ ತೆರಳಿದ್ದರಿಂದ ಒಬ್ಬಂಟಿಯಾಗಿ ಪರೀಕ್ಷೆಗೆ ಬಂದಿದ್ದೆ. ಆದರೆ ನನಗೆ ದಾರಿ ಗೊತ್ತಾಗುತ್ತಿಲ್ಲ ಎಂದು ಅಳುತ್ತಲೇ ವಿಷಯ ತಿಳಿಸಿದ್ದಾಳೆ. ಆಕೆಯಿಂದ ಎಲ್ಲ ಮಾಹಿತಿ ಪಡೆದ ಸೌವಿಕ್ ಚಕ್ರವರ್ತಿ ತಮ್ಮ ಅಧಿಕೃತ ವಾಹನದಲ್ಲಿ ಹತ್ತಿಸಿಕೊಂಡಿದ್ದಾರೆ.ಅಲ್ಲದೆ ಆಕೆ ಪರೀಕ್ಷಾ ಕೇಂದ್ರಕ್ಕೆ ತೆರಳುವ ಶಯಾಮ್ ಬಜಾರ್ ನ ಆದರ್ಶ ಶಿಕ್ಷಾ ನಿಕೇತನ್ ಮಾರ್ಗದ ಉದ್ದಕ್ಕೂ ಗ್ರೀನ್ ಕಾರಿಡಾರ್ ಮಾಡಲು ಪೊಲೀಸ್ ಕಂಟ್ರೋಲ್ ರೂಮಿಗೆ ತಿಳಿಸಿದ್ದು, ಹೀಗಾಗಿ ವಿದ್ಯಾರ್ಥಿನಿ ಸಕಾಲಕ್ಕೆ ತನ್ನ ಪರೀಕ್ಷಾ ಕೇಂದ್ರ ತಲುಪಿದ್ದಾಳೆ.ಪರೀಕ್ಷಾ ಕೇಂದ್ರ ತಲುಪುತ್ತಿದ್ದಂತೆ ಆಕೆಯ ಕಣ್ಣುಗಳು ಕೃತಜ್ಞತಾ ಭಾವದಿಂದ ಮಿನುಗಿದ್ದು, ಪೊಲೀಸ್ ಅಧಿಕಾರಿ ಸೌಮಿಕ್ ಚಕ್ರವರ್ತಿ ಅವರಿಗೆ ತಾವು ಮಾಡಿದ ಕಾರ್ಯಕ್ಕೆ ಸಾರ್ಥಕತೆ ಮೂಡಿದಂತಾಗಿದೆ. ಇದರ ಸ್ಟೋರಿಯನ್ನು ಕೊಲ್ಕತ್ತಾ ಪೊಲೀಸರ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸಹಸ್ರಾರು ಮಂದಿ ಇದನ್ನು ಮೆಚ್ಚಿ ಕೊಂಡಾಡಿದ್ದಾರೆ. ಅಲ್ಲದೆ ಈ ಪೋಸ್ಟನ್ನು ತಮ್ಮ ತಮ್ಮ ವಾಲ್ ಗಳ ಮೇಲೆ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ ಬೆನಗಲ್ ನರಸಿಂಗ ರಾವ್ ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಕಾನೂನು ತಜ್ಞ.

Sun Feb 26 , 2023
ಸರ್ ಬೆನಗಲ್ ನರಸಿಂಗ ರಾವ್ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಕಾನೂನು ತಜ್ಞ, ವಿಶ್ವಸಂಸ್ಥೆಯನ್ನು ಪ್ರತಿನಿಧಿಸಿದ, ಭಾರತದ ಸಂವಿಧಾನದ ಕರಡು ಪ್ರತಿ ತಯಾರಿಸಿದ, ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶ ಸ್ಥಾನದವರೆಗೆ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದ ಭಾರತದ ಹೆಮ್ಮೆಯ ಪುತ್ರರಾದ ಸರ್ ಬೆನಗಲ್ ನರಸಿಂಗ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಾಪುರ ಸಾರಸ್ವತ ಕುಟುಂಬಗಳಲ್ಲಿ ಒಂದಾದ ಬೆನೆಗಲ್ ಮನೆತನದಲ್ಲಿ 1887ರ ಫೆಬ್ರುವರಿ 26ರಂದು ಜನಿಸಿದರು.ನರಸಿಂಗ ರಾವ್ ಅವರ ತಂದೆ ಬಿ. ರಾಘವೇಂದ್ರರಾವ್ ಮದರಾಸು ಪ್ರೆಸಿಡೆನ್ಸಿಯಲ್ಲಿ […]

Advertisement

Wordpress Social Share Plugin powered by Ultimatelysocial