ಕಾರು ಪ್ರಿಯರ ಹೃದಯ ಹಿಂಡುವ ಘಟನೆ.

ತ್ತೀಚಿನ ದಿನಗಳಲ್ಲಿ ಪ್ರಚಾರ ಪಡೆಯಲು ಸೋಷಿಯಲ್ ಮೀಡಿಯಾಗಳನ್ನು ಹೇರಳವಾಗಿ ಬಳಸಲಾಗುತ್ತಿದೆ. ಮಿಖಾಯಿಲ್ ಲಿಟ್ವಿನ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್ ತನ್ನ ಬಿಳಿ ಲ್ಯಾಂಬೋರ್ಘಿನಿ ಉರಸ್ ಎಸ್‌ಯುವಿಯನ್ನು ಧ್ವಂಸಗೊಳಿಸಿದ್ದಾನೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಕಾರು ಪ್ರಿಯರು ಈತನ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಕಾರನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾರಿನ ಬೆಲೆಯು ಸುಮಾರು ರೂ. 3.15 ಕೋಟಿ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಈ ಯೂಟ್ಯೂಬರ್ ಎನರ್ಜಿ ಡ್ರಿಂಕ್ ಬ್ರ್ಯಾಂಡ್ – ಲಿಟ್ ಎನರ್ಜಿ ಪ್ರಚಾರಕ್ಕಾಗಿ ಲ್ಯಾಂಬೋರ್ಘಿನಿ ಉರಸ್ ಎಸ್‌ಯುವಿಯನ್ನು ತುಂಡು ತುಂಡು ಮಾಡಲಾಗಿದೆ. ಯೂಟ್ಯೂಬರ್ ಈಗ ಪ್ರಪಂಚದ ಗಮನವನ್ನು ಸೆಳೆದಿದ್ದು, ಒಂದಷ್ಟು ವಿಭಾಗದ ಜನರ ಆಕ್ರೋಶಕ್ಕೂ ತುತ್ತಾಗಿದ್ದಾನೆ.

ವೈರಲ್ ವಿಡಿಯೋದಲ್ಲಿ ಕಾಣುವಂತೆ ಈ ಕಾರ್ಯಕ್ಕಾಗಿ ಬೃಹತ್ ಸೆಟಪ್ ಅನ್ನು ಬಳಸಲಾಗಿದೆ. ಬೃಹತ್ ಕ್ರೇನ್‌ ಮೂಲಕ ಕಾರ್-ಗಾತ್ರದ ಕ್ಯಾನ್ ಲಿಟ್ ಎನರ್ಜಿಯನ್ನು ಲಂಬೋರ್ಘಿನಿ ಎಸ್‌ಯುವಿಯ ಮೇಲ್ಭಾಗದಲ್ಲಿ ಬೀಳಿಸಿ, ಸೆಕೆಂಡುಗಳಲ್ಲಿ ಅದನ್ನು ನಾಶಪಡಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವವ ಸೋಷಿಯಲ್ ಮೀಡಿಯಾ ಬಳಕೆದಾರರು ಈ ಕೃತ್ಯವನ್ನು ಟೀಕಿಸಿದ್ದಾರೆ. “ಈ ಕಾರಣಕ್ಕಾಗಿಯೇ ಫೆರಾರಿ ಬ್ರಾಂಡ್ ತಮ್ಮ ಗ್ರಾಹಕರನ್ನು ಆಹ್ವಾನದ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ” ಎಂದು ಕಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್, ಇನ್ಸ್ಟಾ, ಫೇಸ್‌ಬುಕ್‌ನಂತಹ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಒಂದು ವಿಷಯವನ್ನು ಹಲವರಿಗೆ ತಲುಪಿಸಲು ಹಾಗೂ ತಾವು ಫೇಮಸ್ ಆಗಲು ಹಲವು ಸರ್ಕಸ್‌ಗಳನ್ನು ಮಾಡುತ್ತಾರೆ. ಜನರು ಕೂಡ ಸಾಮಾನ್ಯ ವಿಷಯಗಳನ್ನು ನೋಡುವುದೇ ಬಿಟ್ಟಿದ್ದಾರೆ. ಹಾಗಾಗಿ ಹೊಸ ಕಂಟೆಟ್‌ಗಳನ್ನು ಹುಡುಕಲು ಹೊರಟಿರುವ ಯ್ಯೂಟ್ಯೂಬರ್‌ಗಳು ಇಂತಹ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಇದೇ ರೀತಿಯಲ್ಲಿ ನಮ್ಮ ಭಾರತದಲ್ಲೂ ಯ್ಯೂಟ್ಬರ್ ಒಬ್ಬ ಪಟಾಕಿಗಳಿಂದ ಕಾರನ್ನು ಸಿಂಗರಿಸಿ ಸುಟ್ಟು ಧ್ವಂಸಗೊಳಿಸಿದ್ದ.

ಒಂದು ಲಕ್ಷ ಪಟಾಕಿಗಳಿಂದ ಕಾರನ್ನು ಸುಟ್ಟ ಯ್ಯೂಟ್ಯೂಬರ್:

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಯೂಟ್ಯೂಬ್ ಚಾನಲ್ ತೆರೆದು ಹಣಗಳಿಸಲು ಮುಂದಾಗಿದ್ದಾರೆ. ಆದರೆ ಚಾನಲ್ ತೆರೆದಾಕ್ಷಣ ನಮಗೆ ಹಣ ಬರುವುದಿಲ್ಲ ಬದಲಾಗಿ ಜನರನ್ನು ಆಕರ್ಷಿಸಲು ಒಂದಷ್ಟು ಸೃಜನಶೀಲವಾದ ವಿಡಿಯೋಗಳನ್ನು ಮಾಡಬೇಕಾಗುತ್ತದೆ. ಹಾಗಾಗಿ ಈ ಯೂಟ್ಯೂಬರ್ ಕಳೆದ ದಿಪಾವಳಿಗೆ ಹೊಸ ಆಲೋಚನೆಯೊಂದಿಗೆ ಬರೋಬ್ಬರಿ ಒಂದು ಲಕ್ಷ ಪಟಾಕಿಗಳನ್ನು ಕಾರಿನ ಮೇಲೆ ಅಲಂಕರಿಸಿ ಸಿಡಿಸಿದ್ದಾನೆ. ಈ ಘಟನೆಯ ವಿಡಿಯೋವನ್ನು ರಾಜಸ್ಥಾನದ ಅಲ್ವಾರ್ ನಲ್ಲಿ ಚಿತ್ರಿಸಲಾಗಿದೆ.

ಈ ವಿಡಿಯೋವನ್ನು ಅಮಿತ್ ಶರ್ಮಾ ಎಂಬ ಯೂಟ್ಯೂಬರ್ ಮಾಡಿದ್ದಾನೆ. ತನ್ನ ಕಾರಿನ ಮೇಲೆ ಪಟಾಕಿಗಳನ್ನು ಪೇರಿಸಿ, ಮುಂಭಾಗದ ಗಾಜು ಮತ್ತು ಹೆಡ್‌ಲೈಟ್‌ಗಳನ್ನು ಹಾಗೆಯೇ ಬಿಟ್ಟಿದ್ದಾನೆ. ಪಟಾಕಿಗಳಿಂದ ಅಲಂಕೃತವಾಗಿರುವ ಕಾರನ್ನು ಯೂಟ್ಯೂಬರ್ 1, 2, 3 ಎಂದು ಹೇಳುತ್ತಾ ಅಷ್ಟೂ ಪಟಾಕಿಗಳನ್ನು ಒಮ್ಮಲೆ ಸ್ಪೋಟಿಸಿದ್ದಾನೆ. ನಂತರ ಪಟಾಕಿಗಳ ದಹನವು ಪ್ರಾರಂಭವಾಗುತ್ತದೆ, ಈ ಸಮಯದಲ್ಲಿ ಇಡೀ ಸ್ಥಳವು ಸ್ವಲ್ಪ ಸಮಯದವರೆಗೆ ಭಾರೀ ಶಬ್ದದಿಂದ ತುಂಬಿರುತ್ತದೆ. ಕೊನೆಗೆ ಬೆಳ್ಳಗಿದ್ದ ಕಾರು ಒಂದೇ ಸಮನೇ ಕಪ್ಪಗಾಗಿಬಿಡುತ್ತದೆ.

ಇಂತಹ ಪ್ರಯೋಗಗಳು ತುಂಬಾ ಅಪಾಯಕಾರಿ. ವಾಸ್ತವವಾಗಿ, ಕಾರ್ ಅನ್ನು ಪಟಕಾಗಳಿಂದ ಸ್ಫೋಟಿಸುವಾಗ ಎಂಜಿನ್ ಕೂಡ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಆದರೆ, ಇಡೀ ದೃಶ್ಯ ಬಯಲು ಜಾಗದಲ್ಲಿ ನಡೆದಿದ್ದರಿಂದ ಸ್ಫೋಟಗೊಂಡರೂ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಒಟ್ಟಿನಲ್ಲಿ ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಮಕ್ಕಳು ಇಂತಹ ವಿಡಿಯೋಗಳನ್ನು ನೋಡಿದರೆ ಅನುಸರಿಸುವುದು ಖಚಿತ. ಹಾಗಾಗಿ ಮನೆಯಲ್ಲಿನ ಪೋಷಕರು ಜಾಗರೂಕರಾಗಿರಬೇಕು. ಯ್ಯೂಟ್ಯೂಬರ್‌ಗಳು ತಮ್ಮ ವೀವ್ಸ್ ಗಾಗಿ ಇಂತಹ ವಿಡಿಯೋಗಳನ್ನು ಮಾಡುತ್ತಾರೆ. ಆದರೆ ಇವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪನೀರ್ ಪೆಪ್ಪರ್ ಮಸಾಲಾ ಮಾಡುವ ವಿಧಾನ.

Wed Mar 1 , 2023
  ಕಡಾಯಿಗೆ ೨ ಚಮಚ ಎಣ್ಣೆ ಹಾಕಿ ಕಾಯಿಸಿ. ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಇದಕ್ಕೆ ಶುಂಠಿ ಬೆಳುಳ್ಳಿ ಪೇಸ್ಟ್, ಚಿಕ್ಕದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ, ಟೊಮೆಟೊ, ಜೀರಿಗೆ ಪುಡಿ, ಧನಿಯಾ ಪುಡಿ, ಅರಿಶಿಣ ಹಾಕಿ ಚೆನ್ನಾಗಿ ಕಲಸಿ. ಈಗ ರುಬ್ಬಿಟ್ಟುಕೊಂಡ ಪಾಲಕ್ ಪೇಸ್ಟ್, ಉಪ್ಪು, ಗೋಡಂಬಿ ಪೇಸ್ಟ್, ಹುರಿದುಕೊಂಡ ಪನೀರ್ ಮತ್ತು ಅಗತ್ಯಕ್ಕೆ ನೀರು ಸೇರಿಸಿ. ಮುಚ್ಚಳ ಮುಚ್ಚಿ ೧೦ ನಿಮಿಷ ಬೇಯಿಸಿ. ಕುದಿಯುವಾಗ […]

Advertisement

Wordpress Social Share Plugin powered by Ultimatelysocial