ಲವರ್ಸ್​ ಜೊತೆ ಎಸ್ಕೇಪ್​ ಆಗಿರುವ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

ಖನೌ: ಪ್ರಧಾನ ಮಂತ್ರಿ ಆವಾಸ್​ ಯೋಜನೆ (ಪಿಎಂಎವೈ)ಯ ಹಣ ಸ್ವೀಕರಿಸಿದ ಬಳಿಕ ನಾಲ್ವರು ವಿವಾಹಿತ ಮಹಿಳೆಯರು ತಮ್ಮ ಗಂಡಂದಿರಿಗೆ ಕೈಕೊಟ್ಟು ಲವರ್ಸ್​ ಜೊತೆ ಎಸ್ಕೇಪ್​ ಆಗಿರುವ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

ಪಿಎಂಎವೈ ಕೇಂದ್ರೀಯ ಯೋಜನೆಯಾಗಿದ್ದು, ಬಡವರಲ್ಲಿ ನಗರ ವಸತಿ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ. ಇದರಿಂದ ಅವರು ಮನೆ ಹೊಂದಬಹುದು.

ಈ ಯೋಜನೆಯಡಿ ಕೇಂದ್ರ ಸರ್ಕಾರವು ಕುಟುಂಬದ ಮುಖ್ಯಸ್ಥೆಯಾದ ಮಹಿಳೆಯನ್ನು ಮನೆಯ ಮಾಲೀಕ ಅಥವಾ ಸಹ-ಮಾಲೀಕರಾಗಿರುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಹಣವು ಅವರ ಖಾತೆಗಳಿಗೆ ಜಮಾ ಆಗುತ್ತದೆ. ಈ ಯೋಜನೆಯಡಿ ಫಲಾನುಭವಿಗಳಾದ ನಾಲ್ವರು ಮಹಿಳೆಯರು ಮೊದಲ ಕಂತಿನ 50 ಸಾವಿರ ರೂ. ಹಣವನ್ನು ಸ್ವೀಕರಿಸಿದರು. ಇದಾದ ಬಳಿಕ ನಾಲ್ವರು ಕೂಡ ತಮ್ಮ ಗಂಡಂದಿರಿಗೆ ಕೈಕೊಟ್ಟ ತಮ್ಮ ತಮ್ಮ ಲವರ್ಸ್​ ಜೊತೆ ಪರಾರಿಯಾಗಿದ್ದಾರೆ.

ಹಣ ಸ್ವೀಕರಿಸಿದರೂ ಮನೆ ನಿರ್ಮಾಣ ಕಾರ್ಯ ಆರಂಭವಾಗದಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಮನೆಯ ಕೆಲಸವನ್ನು ಆರಂಭಿಸುವಂತೆ ಅಧಿಕಾರಿಗಳು ನೋಟಿಸ್​ ಕಳುಹಿಸಿದರು. ಆದರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಮಹಿಳೆಯರ ಗಂಡಂದಿರೇ ಸ್ಥಳೀಯ ಕಚೇರಿಗೆ ತೆರಳಿ ತಮ್ಮ ಪತ್ನಿಯರು ಹಣದ ಜೊತೆ ಲವರ್ಸ್​ ಜೊತೆ ಓಡಿ ಹೋಗಿದ್ದಾರೆ ಎಂದು ತಿಳಿಸಿದರು.

ಎರಡನೇ ಕಂತಿನ ಹಣವನ್ನು ಅವರ ಖಾತೆಗಳಿಗೆ ಕ್ರೆಡಿಟ್​ ಮಾಡಬೇಡಿ ಅಂತಾ ಇದೇ ಸಂದರ್ಭದಲ್ಲಿ ಸಂತ್ರಸ್ತ ಗಂಡಂದಿರು ಕೇಳಿಕೊಂಡರು. ಈ ಕತೆಯನ್ನು ಕೇಳಿ ಅಧಿಕಾರಿಗಳೇ ಒಂದು ಕ್ಷಣ ಅವಕ್ಕಾದರು. ಅಲ್ಲದೆ, ಮಹಿಳೆಯರಿಂದ ಹಣ ಹೇಗೆ ವಸೂಲಿ ಮಾಡುವುದು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಗಂಡಂದಿರು ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ತಮ್ಮ ಪತ್ನಿಯರ ವಿರುದ್ಧ ದೂರು ದಾಖಲಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಸಭೆಯಲ್ಲಿ ಪ್ರತಿಪಕ್ಷದ 'ಮೋದಿ-ಅದಾನಿ ಭಾಯಿ ಭಾಯಿ' ಘೋಷಣೆಗಳ ನಡುವೆಯೇ ಸರಕಾರವನ್ನು ಹೊಗಳಿದ ಪ್ರಧಾನಿ

Fri Feb 10 , 2023
  ಹೊಸದಿಲ್ಲಿ,ಫೆ.9: ಗುರುವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ‘ಮೋದಿ-ಅದಾನಿ ಭಾಯಿ ಭಾಯಿ’ ಘೋಷಣೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗಳಿಗೆ ಉತ್ತರಿಸಿದರು. ಕೇಂದ್ರ ಸರಕಾರವು ಅದಾನಿ ಗ್ರೂಪ್‌(Adani Group)ಗೆ ಒಲವು ತೋರಿದೆ ಎಂಬ ಆರೋಪಗಳಿಗೆ ಪ್ರಧಾನಿಯವರು ಉತ್ತರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಪ್ರತಿಪಕ್ಷ ಸಂಸದರ ಪ್ರತಿಭಟನೆಗಳ ನಡುವೆಯೇ ಮೋದಿ ತನ್ನ […]

Advertisement

Wordpress Social Share Plugin powered by Ultimatelysocial